ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾನಸಿಕ ಅನಾರೋಗ್ಯದ ಕಾರಣದಿಂದ ಕ್ರಿಕೆಟ್ ಅಂತ್ಯಗೊಳಿಸಿದ ಟಾಪ್ 5 ಕ್ರಿಕೆಟಿಗರು!

Top 5 Cricketers Who Quit International Cricket Due To Mental Health Issues

ಕ್ರಿಕೆಟ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ಕ್ರೀಡೆಯಲ್ಲಿ ಒಂದಾಗಿದೆ. ಸಾಕಷ್ಟು ಗ್ಲಾಮರಸ್ ಆಗಿ ಕಾಣುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂಬುದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಅಭಿಲಾಷೆ. ಆದರೆ ಅಂತಾ ವಿಶೇಷ ಅವಕಾಶಗಳು ದೊರೆಯಲು ಅಷ್ಟೇ ಪ್ರತಿಭೆ ಬೇಕು ಎಂಬುದು ಅಷ್ಟೇ ಸತ್ಯ.

ಆದರೆ ಕೋಟ್ಯಂತರ ಅಭಿಮಾನಿಗಳು ವೀಕ್ಷಿಸುವ ಈ ಕ್ರೀಡೆಯಾದ ಕ್ರಿಕೆಟ್‌ನಲ್ಲಿ ಸಾಕಷ್ಟು ಜಿದ್ದಾಜಿದ್ದಿ ನಡೆಯುತ್ತದೆ. ಗೆಲುವಿಗಾಗಿ ಪ್ರತಿ ತಂಡವು ಕಾದಾಟವನ್ನು ನಡೆಸುತ್ತದೆ. ಹೀಗಾಗಿ ಆಟಗಾರರ ಮೇಲೆ ಒತ್ತಡಗಳೂ ಇರುತ್ತದೆ. ಅದರಲ್ಲೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಇದು ಹೆಚ್ಚಾಗಿರುತ್ತದೆ.

ಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರುಫೀಫಾ ಪ್ಲೇಯರ್ ರೇಟಿಂಗ್‌ನಲ್ಲಿರುವ ಭಾರತದ ಟಾಪ್ 5 ಕ್ರಿಕೆಟಿಗರು ಇವರು

ಒತ್ತಡ, ಅವಿರತ ಪ್ರವಾಸ, ಕುಟುಂಬದಿಂದ ದೂರವಿದ್ದು ಆಡುವುದು ನಿಜಕ್ಕೂ ಸುಲಭವಲ್ಲ. ಹೀಗಾಗಿ ಆಟಗಾರರು ಮಾನಸಿಕ ಅನಾರೋಗ್ಯಕ್ಕೆ ಈಡಾಗುವ ಸಂದರ್ಭಗಳೂ ಇರುತ್ತದೆ. ಹೀಗೆ ಮಾನಸಿಕ ಸಮಸ್ಯೆಗೆ ಸಿಲುಕಿದ ಕೆಲ ಪ್ರತಿಭಾನ್ವಿತ ಅಂತಾರಾಷ್ಟ್ರೀಯ ಕ್ರಿಕೆಟಿಗರು ವೃತ್ತಿ ಜೀವನ ಅಂತ್ಯವಾಗುವ ಮುನ್ನವೇ ನಿವೃತ್ತಿಯನ್ನು ಘೋಷಿಸಿದ ಸಂದರ್ಭಗಳು ಇವೆ. ಅಂತಾ ಐವರು ಆಟಗಾರರ ಬಗ್ಗೆ ಈ ವರದಿಯಲ್ಲಿ ನೋಡೋಣ.

ಮಾರ್ಕಸ್ ಟ್ರೆಸ್ಕೋಥಿಕ್

ಮಾರ್ಕಸ್ ಟ್ರೆಸ್ಕೋಥಿಕ್

ಇಂಗ್ಲೆಂಡ್ ಕ್ರಿಕೆಟ್‌ನ ಪ್ರಮುಖ ಆಟಗಾರನಾಗಿದ್ದ ಮಾರ್ಕಸ್ ಟ್ರೆಸ್ಕೋಥಿಕ್ ಕ್ರಿಕೆಟ್ ಜೀವನ ಮಾನಸಿಕ ಅನಾರೋಗ್ಯದ ಕಾರಣದಿಂದ ಬೇಗನೆ ಅಂತ್ಯವಾಯಿತು. ಮಾನಸಿಕ ಆಯಾಸ ಮತ್ತು ಖಿನ್ನತೆಗೆ ಮಾರ್ಕಸ್ ಟ್ರೆಸ್ಕೋಥಿಕ್ ಒಳಗಾಗಿದ್ದರು. 32ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನ ಉನ್ನತ ಸಂದರ್ಭದಲ್ಲಿ 2006ರಲ್ಲಿ ಭಾರತದಲ್ಲಿ ಸರಣಿಗಾಗಿ ಆಗಮಿಸಿದ್ದ ಟ್ರೆಸ್ಕೋಥಿಕ್ ದಿಢೀರ್ ಆಗಿ ತವರಿಗೆ ವಾಪಾಸ್ ಆದರು. ಬಳಿಕ ಅದೇ ವರ್ಷಾಂತ್ಯಕ್ಕೆ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಬಳಿಕ ತಿಳಿದ ವಿಚಾರವೇನೆಂದರೆ ಟ್ರೆಸ್ಕೋಥಿಕ್ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂಬುದು.

ಡೇವಿಡ್ ಬೈರ್‌ಸ್ಟೋ

ಡೇವಿಡ್ ಬೈರ್‌ಸ್ಟೋ

1990ರ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾನಸಿಕ ಖಿನ್ನತೆಯ ಕಾರಣದಿಂದಾಗಿಯೇ ನಿವೃತ್ತಿಯನ್ನು ಹೇಳಿದ ಇಂಗ್ಲೆಂಡ್‌ನ ಆಟಗಾರ ಡೇವಿಡ್ ಭೃರ್‌ಸ್ಟೋ. ಮಡದಿಯ ಅನಾರೋಗ್ಯ, ಹಣಕಾಸಿನ ಸಮಸ್ಯೆಗಳಿಂದ ಜರ್ಜರಿತವಾಗಿದ್ದ ಬೈರ್‌ಸ್ಟೋ ವೃತ್ತಿ ಜೀವನ ಅಂತ್ಯವಾಗುವ ಮುನ್ನವೇ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಜೋನಾಥನ್ ಟ್ರಾಟ್

ಜೋನಾಥನ್ ಟ್ರಾಟ್

ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಶೆಲ್ ಜಾನ್ಸನ್ ಎಸೆತ ಜೊನಾಥನ್ ಟ್ರಾಟ್‌ಗೆ ಬಡಿದಿತ್ತು. ಬಳಿಕ ಟ್ರಾಟ್ ದಿಢೀರ್ ಆಗಿ ಸರಣಿಯನ್ನು ತೊರೆಯಲು ನಿರ್ಧರಿಸಿದರು. ನಂತರ ತಮ್ಮ ನಿವೃತ್ತಿಯ್ನು ಘೋಷಿಸಿದರು. ಇದಕ್ಕೆ ಸುದೀರ್ಘ ಕಾಲದ ಒತ್ತಡದ ಪರಿಸ್ಥಿತಿ ಕಾರಣ ಎಂದು ನಂತರ ಕಾರಣವನ್ನು ಬಹಿರಂಗಪಡಿಸಿದ್ದರು.

ಆಂಡ್ರೋ ಫ್ಲಿಂಟಾಫ್

ಆಂಡ್ರೋ ಫ್ಲಿಂಟಾಫ್

ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬ ಆಂಡ್ರೋ ಫ್ಲಿಂಟಾಫ್. ಆಲ್‌ರೌಂಡರ್ ಆಗಿ ಇಂಗ್ಲೆಂಡ್ ತಂಡದ ಆಧಾರ ಸ್ಥಂಬವಾಗಿದ್ದರು ಫ್ಲಿಂಟಾಫ್. ಐತಿಹಾಸಿಕ 2005ರ ಆ್ಯಶಸ್ ವಿಜೇತ ಸರಣಿಯಲ್ಲಿ ಫ್ಲಿಂಟಾಫ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದರು. ಆದರೆ 2006-07ರಲ್ಲಿ ಇಂಗ್ಲೆಂಡ್ ಇದೇ ಐಸಿಹಾಸಿಕ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಈಡಾಯಿತು. ಇದು ಫ್ಲಿಂಟಾಫ್ ವೃತ್ತಿಯ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಹೀಗಾಗಿ ವಿಪರೀತ ಕುಡಿತದ ದಾಸರಾಗಿಬಿಟ್ಟರು. "ನನಗೆ ಏನಾಗುತ್ತಿದೆ ಎಂದು ಅರ್ಥವಾಗುತ್ತಿರಲಿಲ್ಲ. ರೂಮ್‌ಗೆ ತೆರಳಿದರೆ ನೆದ್ದೆಗೆ ಜಾರುತ್ತಿರಲಿಲ್ಲ. ಹೂಗಾಗಿ ಕುಡಿತವನ್ನು ಆರಂಭಿಸುತ್ತಿದ್ದೆ. ಅದು ವಿಪರೀತಕ್ಕೆ ಹೋಗಿ ಬಿಟ್ಟಿತ್ತು ಎಂದು 'ದಿ ಗಾರ್ಡಿಯನ್'ಗೆ ಫ್ಲಿಂಟಾಫ್ ಹೇಳಿಕೆಯನ್ನು ನೀಡಿದ್ದರು.

ಸಾರಾ ಟೇಯ್ಲರ್

ಸಾರಾ ಟೇಯ್ಲರ್

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ ಸಾರಾ ಟೇಯ್ಲರ್ ಕೂಡ ಮಾನಸಿಕ ಆನಾರೋಗ್ಯಕ್ಕೆ ತುತ್ತಾಗಿದ್ದರು. 2018ರ ಮಹಿಳಾ ವಿಶ್ವಕಪ್ ವಿಜೇತ ತಂಡದ ಸದಸ್ಯೆ. ವಿಕೆಟ್ ಕೀಒರ್ ಹಾಗು ಬ್ಯಾಟ್ಸ್‌ಮನ್ ಆಗಿ ಮಿಂಚಿರುವ ಸಾರಾ ತಮ್ಮ ವೇಗದ ಸ್ಟಂಪಿಂಗ್ ಮೂಲಕ ಖ್ಯಾತಿಯನ್ನು ಗಳಿಸಿದ್ದರು. ಆದರೆ ಮಾನಸಿಕ ಒತ್ತಡದ ಕಾರಣದಿಂದಾಗಿ ಸಾರಾ ವೃತ್ತಿ ಜೀವನವನ್ನು ಅಂತ್ಯಗೊಳಿಸಿದರು. ಸಾರಾ ನಿವೃತ್ತಿಯ ಬಳಿಕ ಕ್ರಿಕೆಟ್‌ನಲ್ಲಿ ಮಾನಸಿಕ ಖಿನ್ನತೆಯ ಬಗ್ಗೆ ಸಾಕಷ್ಟು ಸಕಾರಾತ್ಮಕ ಚರ್ಚೆಗಳು ನಡೆಯಿತು.

Story first published: Thursday, July 16, 2020, 15:50 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X