ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

World Cup 2019 : ಟೀಂ ಇಂಡಿಯಾಕ್ಕೆ ಕೂಡಾ ಇವರ ಅವಶ್ಯಕಥೆ ತುಂಬಾ ಇದೆ..? | Oneindia Kannada
Top 5 fielders who will dictate fate of upcoming World Cup matches

ಬೆಂಗಳೂರು, ಮೇ 20: ಕ್ರಿಕೆಟ್‌ ಎಂದಾಕ್ಷಣ ನಮ್ಮೆಲ್ಲರ ಗಮನ ಸಾಮಾನ್ಯವಾಗಿ ತಿರುಗುವುದು ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಕಡೆಗೆ. ಚೆಂಡು ಮತ್ತು ದಾಂಡಿನ ಆಟದಲ್ಲಿ ಮೂಡುವ ಅದ್ಭುತ ಆಟಗಳು ಪ್ರೇಕ್ಷರನ್ನು ರಂಜಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳುವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

ಅಂದಹಾಗೆ ಕ್ರಿಕೆಟ್‌ ಆಟದಲ್ಲಿ ಪಂದ್ಯ ಗೆಲ್ಲ ಬೇಕಾದರೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ ಕೂಡ ಅಷ್ಟೇ ಪ್ರಮುಖವಾಗುತ್ತದೆ. ಕ್ರಿಕೆಟ್‌ ಲೋಕದಲ್ಲಿ ಒಂದು ಗಾದೆಯೇ ಇದೆ, 'ಕ್ಯಾಚಸ್‌ ವಿನ್ಸ್‌ ಮ್ಯಾಚಸ್‌' ಎಂದು ಇದು ಅಕ್ಷರಶಃ ಸತ್ಯ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಬೌಲರ್‌ಗಳು ಯಶಸ್ಸು ಗಳಿಸಬೇಕೆಂದರೆ ತಂಡದ ಫೀಲ್ಡರ್‌ಗಳ ಕೊಡುಗೆ ಇರಲೇ ಬೇಕು. ಕೆಲ ಸಂದರ್ಭಗಳಲ್ಲಿ ಅದ್ಭುತ ಕ್ಯಾಚ್‌ಗಳು ತಂಡದ ಫಲಿತಾಂಶವನ್ನೇ ಬದಲಾಯಿಸಿ ಬಿಡುತ್ತವೆ. ಅದೇ ರೀತಿ ಕ್ಷೇತ್ರ ರಕ್ಷಣೆ ಮೂಲಕ ಉಳಿಸುವ ರನ್‌ಗಳು ಕೂಡ 1 ರನ್‌ ಅಂತರದ ಸೋಲು-ಗೆಲುವನ್ನು ನಿರ್ಧರಿಸುವ ಮಹತ್ವದ ಪಾತ್ರ ವಹಿಸುತ್ತವೆ. ಇನ್ನು ರನ್‌ಔಟ್‌ಗಳಂತೂ ಗೇಮ್‌ ಚೇಂಜರ್ಸ್‌ ಎಂಬುದರಲ್ಲಿ ಸಂಶಯವೇ ಇಲ್ಲ.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಹೀಗಿರುವಾಗ ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಚುರುಕಿನ ಫೀಲ್ಡಿಂಗ್‌ ಮೂಲಕ ಪ್ರಭಾವ ಬೀರಬಲ್ಲ ಟಾಪ್‌ 5 ಫೀಲ್ಡರ್‌ಗಳನ್ನು ಇಲ್ಲಿ ಹೆಸರಿಸಲಾಗಿದೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಸ್ಪಿನ್‌ ಬೌಲಿಂಗ್‌ ಜೊತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ನೆರವಾಗಬಲ್ಲರು. ಎಲ್ಲದಕ್ಕಿಂತಲೂ ಮಿಗಿಲಾಗಿ ಜಡೇಜಾ ಫೀಲ್ಡ್‌ನಲ್ಲಿ ಇದ್ದರೆ ಭಾರತ ತಂಡ ಹೆಚ್ಚು ರನ್‌ಗಳನ್ನು ಉಳಿಸಿಕೊಳ್ಳಬಹುದು. ತಮ್ಮ ಮಿಂಚಿನ ಕ್ಷೇತ್ರ ರಕ್ಷಣೆಯೊಂದಿಗೆ ಅದ್ಭುತ ಕ್ಷಣಗಳನ್ನು ಜಡೇಜಾ ತರಬಲ್ಲರು. ಇನ್ನು ಬ್ಯಾಟ್ಸ್‌ಮನ್‌ಗಳನ್ನು ರನ್‌ಔಟ್‌ ಮಾಡುವುದರಲ್ಲಿಯೂ ಜಡ್ಡು ಎತ್ತಿದ ಕೈ. ಸರ್‌ ಜಡೇಜಾ ಫೀಲ್ಡ್‌ ಮಾಡುತ್ತಿರುವ ಕಡೆಗೆ ಚೆಂಡನ್ನು ಹೊಡೆಯಲು ಬ್ಯಾಟ್ಸ್‌ಮನ್‌ಗಳು ಹಲವು ಬಾರಿ ಆಲೋಚಿಸುವುದಂತೂ ಖಂಡಿತಾ. ವಿಶ್ವಕಪ್‌ನಲ್ಲಿ ಜಡೇಜಾ ಕಣಕ್ಕಿಳಿದರೆ ಅವರ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಅವರ ಕ್ಷೇತ್ರ ರಕ್ಷಣೆಯನ್ನೂ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.

 ಡೇವಿಡ್‌ ವಾರ್ನರ್‌

ಡೇವಿಡ್‌ ವಾರ್ನರ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರನ್‌ ಹೊಳೆ ಹರಿಸಿದ ಡೇವಿಡ್‌ ವಾರ್ನರ್‌ ಸಂಪೂರ್ಣ ಫಿಟ್‌ ಆಗಿರುವ ಸಂದೇಶ ರವಾನಿಸಿದ್ದರು. ಅಂದಹಾಗೆ ವಾರ್ನರ್‌ ಬ್ಯಾಟ್‌ ಹಿಡಿದು ಮೈದಾನಕ್ಕೆ ಇಳಿದರೆ ಎಷ್ಟು ಅಪಾಯಕಾರಿಯೋ, ಕ್ಷೇತ್ರ ರಕ್ಷಣೆಯಲ್ಲೂ ಕೂಡ ಎದುರಾಳಿ ತಂಡದ ಮೇಲೆ ಅಷ್ಟೇ ಪ್ರಭಾವ ಬೀರಬಲ್ಲರು. ಲಾಂಗ್‌ ಆನ್‌ ಮತ್ತು ಲಾಂಗ್‌ ಆಫ್‌ ಫೀಲ್ಡಿಂಗ್‌ ಸಲುವಾಗಿ ಯಾವುದೇ ನಾಯಕರ ಮೊದಲ ಆಯ್ಕೆ ಡೇವಿಡ್‌ ಆಗಿರುತ್ತಾರೆ. ಏಕೆಂದರೆ ಕಷ್ಠದ ಕ್ಯಾಚ್‌ಗಳನ್ನು ಸುಲಭವಾಗಿ ಪಡೆಯಬಲ್ಲ ಚತುರ ಫೀಲ್ಡರ್‌ ವಾರ್ನರ್‌.

ಬೆನ್‌ ಸ್ಟೋಕ್ಸ್‌

ಬೆನ್‌ ಸ್ಟೋಕ್ಸ್‌

2015ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್‌ ತಂಡದ ಸ್ಟಾರ್‌ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿರುವ ಆಲ್‌ರೌಂಡರ್‌ ತಮ್ಮ ಕ್ಷೇತ್ರ ರಕ್ಷಣೆಯಲ್ಲೂ ಅಷ್ಟೇ ಗುಣಮಟ್ಟ ಪ್ರದರ್ಶಿಸಬಲ್ಲರು. ಅಂದಹಾಗೆ ಜಾಗತಿಕ ಕ್ರಿಕೆಟ್‌ನಲ್ಲಿ ಶ್ರೇಷ್ಠ ಫೀಲ್ಡರ್‌ಗಳ ಸಾಲಿನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲ ವೇಗದ ಬೌಲರ್‌ಗಳಲ್ಲಿ ಸ್ಟೋಕ್ಸ್‌ ಕೂಡ ಒಬ್ಬರು. ಅದ್ಭುತ ಕ್ಯಾಚ್‌ಗಳನ್ನು ಪಡೆಯುವ ಸಾಮರ್ಥ್ಯದ ಜೊತೆಗೆ ಕ್ರೀಡಾಂಗಣದ ಯಾವುದೇ ತುದಿಯಿಂದ ಕೀಪರ್‌ ಕೈಗೆ ಚೆಂಡನ್ನು ಸೇರಿಸಬಲ್ಲ ಅದ್ಭುತ ತೋಳ್ಬಲ ಸ್ಟೋಕ್ಸ್‌ ಅವರಲ್ಲಿದೆ.

ಫಾಫ್‌ ಡು'ಪ್ಲೆಸಿಸ್‌

ಫಾಫ್‌ ಡು'ಪ್ಲೆಸಿಸ್‌


ದಕ್ಷಿಣ ಆಫ್ರಿಕಾ ತಂಡದ ಫೀಲ್ಡಿಂಗ್‌ ವಿಭಾಗ ನೆನೆಸಿಕೊಂಡರೆ ಜಾಂಟಿ ರೋಡ್ಸ್‌ ಮತ್ತು ಎಬಿ ಡಿ'ವಿಲಿಯರ್ಸ್‌ ಅವರಂತಹ ದೈತ್ಯ ಆಟಗಾರರು ಕಣ್ಣೆದುರು ಬರುತ್ತಾರೆ. ಅಂದಹಾಗೆ ಸದ್ಯ ಈಗಿರುವ ಹರಿಣ ಪಡೆಯಲ್ಲಿ ನಾಯಕ ಫಾಫ್‌ ಡು'ಪ್ಲೆಸಿಸ್‌ ಕೂಡ ಅಷ್ಟೇ ಅದ್ಭುತ ಫೀಲ್ಡರ್‌ ಎಂಬುದರಲ್ಲಿ ಸಂದೇಹ ಬೇಡ. ಮೈದಾನದ ಯಾವುದೇ ಮೂಲೆಯಲ್ಲೂ ಚುರುಕಿನ ಕ್ಷೇತ್ರ ರಕ್ಷಣೆ ಮಾಡಬಲ್ಲ ಡು'ಪ್ಲೆಸಿಸ್‌, ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಇದರ ಝಲಕ್‌ ಪ್ರದರ್ಶಿಸಿದ್ದಾರೆ. ಜಿಂಕೆಯಂತೆ ಜಿಗಿದು ಚೆಂಡನ್ನು ಹಿಡಿಯಬಲ್ಲ ಫಿಟ್ನೆಸ್‌ ಡು'ಪ್ಲೆಸಿಸ್‌ ಅವರಲ್ಲಿದೆ.

 ಆಂಡ್ರೆ ರಸೆಲ್‌

ಆಂಡ್ರೆ ರಸೆಲ್‌

ವೆಸ್ಟ್‌ ಇಂಡೀಸ್‌ ತಂಡದ ದೈತ್ಯ ಪ್ರತಿಭೆ ಆಂಡ್ರೆ ರಸೆಲ್‌, ಬ್ಯಾಟಿಂಗ್‌ನಲ್ಲಿ ಎಷ್ಟು ವಿಧ್ವಂಸಕಾರಿ ಆಟವಾಡಬಲ್ಲರು ಎಂಬುದನ್ನು ಎಲ್ಲರೂ ತಿಳಿಸಿದ್ದಾರೆ. ಅಷ್ಟೇ ಉತ್ತಮ ಬೌಲರ್‌ ಕೂಡ ಆಗಿರುವ ಕೆರಿಬಿಯನ್‌ ಪಡೆಯ ಸ್ಟಾರ್‌ ಆಲ್‌ರೌಂಡರ್‌, ಕ್ಷೇತ್ರ ರಕ್ಷಣೆಯಲ್ಲೂ ನಿಸ್ಸೀಮರು. ವೆಸ್ಟ್‌ ಇಂಡೀಸ್‌ ತಂಡದ ಪರ ಪ್ರಮುಖ ಟೂರ್ನಿಗಳಲ್ಲಿ ಅದ್ಭುತ ಕ್ಯಾಚ್‌ಗಳನ್ನು ಪಡೆದು ಮಿಂಚಿರುವ ಆಟಗಾರ ರಸೆಲ್‌. ಅದರಲ್ಲೂ 2016ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಹಶೀಮ್‌ ಆಮ್ಲಾ ಅವರನ್ನು ರಸೆಲ್‌ ರನ್‌ಔಟ್‌ ಮಾಡಿದ ರೀತಿ ಪ್ರೇಕ್ಷರನ್ನು ಮಂತ್ರಮುಗ್ದರನ್ನಾಗಿಸಿತ್ತು. ಹೀಗಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ರಸೆಲ್‌ ಅವರಿಂದ 3 ಡೈಮೆನ್ಷನ್‌ (ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌) ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

Story first published: Monday, May 20, 2019, 20:06 [IST]
Other articles published on May 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X