ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಶಕದ ಟಾಪ್-5 ಬ್ಯಾಟ್ಸ್‌ಮನ್‌ಗಳು ಯಾರು!

Top 5 Indian T20I batsmen of the decade

ಮುಂದಿನ ವರ್ಷದ ಐಪಿಎಲ್ ಟೂರ್ನಿಗಾಗಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. 2020ರ ವರ್ಷಾಂತ್ಯದ ವೇಳೆಗೆ ಮತ್ತೆ ರಾಷ್ಟ್ರೀಯ ತಂಡಗಳು ಟಿ20 ವಿಶ್ವಕಪ್‌ಗಾಗಿ ಸೆಣೆಸಾಟವನ್ನು ನಡೆಸಲಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಟಿ20 ಬ್ಯಾಟ್ಸ್‌ಮನ್‌ಗಳ ಅಂತರಾಷ್ಟ್ರೀಯ ಪಂದ್ಯಾಟಗಳಲ್ಲಿ ಪ್ರದರ್ಶನದ ಕಡೆಗೆ ಒಂದು ಸುತ್ತು ಹಾಕಿ ಬರೋಣ

ಕಳೆದ ಒಂದು ದಶಕವನ್ನು ಗಮನಿಸಿದರೆ ಟೀಮ್ ಇಂಡಿಯಾ ಕ್ರಿಕೆಟ್‌ ಲೋಕದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದೆ. ಮೊದಲ ಟಿ20 ವಿಶ್ವಕಪ್‌ಗೆದ್ದ ಬಳಿಕ ಮೊತ್ತೊಮ್ಮೆ ವಿಶ್ವಕಪ್‌ಗೆ ಮುತ್ತಿಡಲು ಟೀಮ್ ಇಂಡಿಯಾಗೆ ಸಾಧ್ಯವಾಗದಿದ್ದರೂ, ಟೀಮ್ ಇಂಡಿಯಾ ಯಾವತ್ತೂ ಕಳಪೆ ಆಟವನ್ನು ಆಡಿಲ್ಲ ಅನ್ನೋದು ಗಮನಿಸಬೇಕಿದೆ.

IPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿIPL 2020: ಹರಾಜಿನ ಬಳಿಕ ಎಲ್ಲಾ 8 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

ಕಳೆದ ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ ಟಿ20 ಮತ್ತಷ್ಟು ಜನಪ್ರಿಯಗೊಂಡಿದ್ದು ಟೀಮ್ ಇಂಡಿಯಾದ ಅದ್ಭುತ ಪ್ರದರ್ಶನದಿಂದ. ಟಿ20 ಮಾದರಿಯಲ್ಲಿಕಳೆದ ಒಂದು ದಶಕದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಲು ಕಳೆದೊಂದು ದಶಕದಲ್ಲಿ ಇವರು ಕಾರಣರಾಗಿದ್ದಾರೆ. ಕಳೆದ ಒಂದು ದಶಕದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು ಯಾರು ಅನ್ನೋದನ್ನು ಬನ್ನಿ ನೋಡೋಣ:

ಶಿಖರ್ ಧವನ್

ಶಿಖರ್ ಧವನ್

ಕಳೆದ ಒಂದು ದಶಕದಲ್ಲಿ ಶಿಖರ್ ಧವನ್ ಭಾರತದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ರೋಹಿತ್ ಶರ್ಮಾ ಅವರೊಂದಿಗೆ ಭಾರತಕ್ಕೆ ಅದ್ಭುತ ಆರಂಭವನ್ನು ಶಿಖರ್ ಧವನ್ ನೀಡಿದ್ದಾರೆ. ಇತ್ತೀಚೆಗೆ ಕಳಪೆ ಫಾರ್ಮ್ನಲ್ಲಿರುವ ಧವನ್ ಇಲ್ಲಿವರೆಗೆ ಪ್ರದರ್ಶನವನ್ನು ನೋಡಿದರೆ ಟಾಪ್ 5ರಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. 58 ಪಂದ್ಯಗಳಲ್ಲಿ 57 ಇನ್ನಿಂಗ್ಸ್‌ಗಳನ್ನಾಡಿರುವ ಶಿಖರ್ 1504 ರನ್ ಬಾರಿಸಿದ್ದಾರೆ. 27.85 ಸರಾಸರಿ ಹೊಂದಿರುವ ಶಿಖರ್ 128.21 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಎಂ.ಎಸ್‌.ಧೋನಿ

ಎಂ.ಎಸ್‌.ಧೋನಿ

ಎಂ.ಎಸ್ ಧೋನಿ ಕ್ರಿಕೆಟ್‌ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಆದರೆ ನಿಸ್ಸಂಶಯವಾಗಿ ಧೋನಿ ಟೀಮ್ ಇಂಡಿಯಾದ ಈ ದಶಕದ ಗ್ರೇಟ್ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 2007 ವಿಶ್ವಕಪ್‌ನಲ್ಲಿ ಯುವ ತಂಡವನ್ನು ಮುನ್ನಡೆಸಿದ್ದ ಧೋನಿ ಮೊದಲ ಟಿ20 ಭಾರತದ ಮುಡಿಗೇರಿಸಿದ್ದರು. 78 ಪಂದ್ಯಗಳಲ್ಲಿ ಧೋನಿ 66 ಇನ್ನಿಂಗ್ಸ್‌ಗಳಲ್ಲಿ ಧೋನಿ ಕಣಕ್ಕಿಳಿದಿದ್ದಾರೆ. 45.03 ಸರಾಸರಿಯಲ್ಲಿ 1261 ರನ್ ಗಳಿಸಿದ್ದಾರೆ. ಧೊನಿಯ ಸ್ಟ್ರೈಕ್‌ರೇಟ್ 133.29 ಇದೆ. ಹೀಗಾಗಿ ಧೋನಿ ಭಾರತದ ಟಾಪ್ 5 ಆಟಗಾರರ ಪೈಕಿ ನಾಲ್ಕನೇ ಸ್ಥಾನವನ್ನು ಅಲಂಕರಿಸುತ್ತಾರೆ.

ಐಪಿಎಲ್ ಹರಾಜು; ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರು ಯಾರು?

ಸುರೇಶ್ ರೈನಾ

ಸುರೇಶ್ ರೈನಾ

ಸುರೇಶ್ ರೈನಾ ಸದ್ಯ ಫಾರ್ಮ್ ಕಳೆದುಕೊಂಡು ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ತನ್ನ ಅತ್ಯುನ್ನತ ಫಾರ್ಮ್‌ನಲ್ಲಿದ್ದ ವೇಳೆ ಸುರೇಶ್ ರೈನಾ ಅತ್ಯದ್ಭುತ ಇನ್ನಿಂಗ್ಸಳನ್ನು ಭಾರತದ ಪರವಾಗಿ ಆಡಿದ್ದಾರೆ. ಜೊತೆಗೆ ಮೂರೂ ಫಾರ್ಮೆಟ್‌ಗಳಲ್ಲಿ ಶತಕವನ್ನು ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿ ರೈನಾ ಪಾಲಿಗಿದೆ. ಈ ದಶಕದಲ್ಲಿ 67 ಪಂದ್ಯಗಳ 56 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ರೈನಾ 30.97 ಸರಾಸರಿ ಹೊಂದಿದ್ದಾರೆ. 136.97ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಆರಂಭಿಕರಾಗಿ ಕಣಕ್ಕಿಳಿದು ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ ರೋಹಿತ್ ಶರ್ಮಾ 87 ಪಂದ್ಯಗಳಲ್ಲಿ 81 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಆಡಿದ್ದಾರೆ. ಈ ಪಂದ್ಯಗಳಿಂದ 2298 ರನ್‌ಗಳನ್ನು ಗಳಿಸಿದ್ದು 139.69ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ರೋಹಿತ್ ಅನೇಕ ಪಂದ್ಯಗಳನ್ನು ಏಕಾಂಗಿಯಾಗುಇ ಗೆಲ್ಲಿಲಿಸಿಕೊಟ್ಟ ಸಾಧನೆಯನ್ನೂ ಮಾಡಿದ್ದಾರೆ. 2015ರಲ್ಲಿ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲ ಟಿ20ಶತಕ ಬಾರಿಸಿದ್ದರು. 2017ರಲ್ಲಿ ಶ್ರೀಲಂಕಾದ ವಿರುದ್ಧ ಕೇವಲ 43 ಎಸೆತಗಳಲ್ಲಿ 118 ರನ್ ಬಾರಿಸಿ ಗೆಲ್ಲರು ಕಾರಣರಾಗಿದ್ದರೆ, 2018ರಲ್ಲಿ ಇಂಗ್ಲೆಂಡ್‌ನ ಬ್ರಿಸ್ಟೊಲ್‌ನಲ್ಲಿ ಇಂಗ್ಲೆಂಡ್‌ನೀಡಿದ್ದ 199 ರನ್‌ಗಳ ಗುರಿಯನ್ನು ತಲುಪಲು ರೋಹಿತ್ ಕೇವಲ56 ಎಸೆತಗಳಲ್ಲಿ ಸಿಡಿಸಿದ ಶತಕ ಕಾರಣವಾಗಿತ್ತು. ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಲಕ್ನೋದಲ್ಲಿ ಅಜೇಯ 111 ರನ್ ಬಾರಿಸಿ ಗೆಲ್ಲಲು ಕಾರಣವಾಗಿದ್ದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಟಿ20 ಮಾದರಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾರು ಮೊದಲ ಸ್ಥಾನಕ್ಕೆ ಯಾರು ಎರಡನೇ ಸ್ಥಾನಕ್ಕೆ ಸೂಕ್ತ ಎಂದು ನಿರ್ಧರಿಸುವುದು ಸುಲಭವಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ರೀತಿಯಲ್ಲೇ ಟಿ20 ಮಾದರಿಯಲ್ಲೂ ಅದ್ಭುತ ದಾಖಲೆಗಳನ್ನು ಹೊಂದಿದ್ದಾರೆ. ಟೆಸ್ಟ್‌, ಏಕದಿನ ಮತ್ತು ಟಿ20 ಮಾದರಿಯಲ್ಲಿ 50ಕ್ಕಿಂತ ಹೆಚ್ಚಿನ ಸರಾಸರಿಹೊಂದಿರುವ ಏಕೈಕ ಆಟಗಾರ ಕೊಹ್ಲಿಯಾಗಿದ್ದಾರೆ. ಕಳೆದ ವೆಸ್ಟ್‌ಇಂಡೀಸ್ಹ ವಿರುದ್ಧದ ಟಿ20 ಸರಣಿಯಲ್ಲೂ ಈ ಪ್ರದರ್ಶನವನ್ನು ಮುಂದುವರಿಸಿ ತಂಡ ಸರಣಿ ಗೆಲ್ಲಲು ಕಾರಣರಾಗಿದ್ದಾರೆ. 72 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 67 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ 2450 ರನ್ ಗಳಿಸಿದ್ದು ಭರ್ಜರಿ 50 ಸರಾಸರಿ ಹೊಂದಿದ್ದಾರೆ. 135.28 ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಭಾರತದ ಟಿ20 ಶ್ರೇಷ್ಟ ಬ್ಯಾಟ್ಸ್‌ಮನ್‌ಗಳ ಪೈಕಿ ಮೊದಲ ಸ್ಥಾನದಲ್ಲಿ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.

Story first published: Sunday, December 22, 2019, 17:29 [IST]
Other articles published on Dec 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X