ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆಯಿರುವ 5 ಬ್ಯಾಟ್ಸ್‌ಮನ್‌ಗಳು

Top 5 longest innings in Test cricket history

ಬೆಂಗಳೂರು, ಏಪ್ರಿಲ್ 3: ಬಹಳಷ್ಟು ಹಿಂದೆ ಕ್ರಿಕೆಟ್ ವೃತ್ತಿಬದುಕು ಕಟ್ಟಿಕೊಳ್ಳೋದು ಯಾವುದೇ ಆಟಗಾರರ ಪಾಲಿಗೆ ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಟೆಸ್ಟ್ ಬ್ಯಾಟ್ಸ್‌ಮನ್‌ಗಳು ಹುದ್ದೆ ಉಳಿಸಿಕೊಳ್ಳೋದು, ಹೆಚ್ಚು ಕಾಲ ಹುದ್ದೆಯಲ್ಲಿ ಮುಂದುವರೆಯೋದು ಸುಲಭವಿರಲಿಲ್ಲ. ಆದರೆ ಅಂಥ ಕಾಲದಲ್ಲೂ ಐತಿಹಾಸಿಕ ಇನ್ನಿಂಗ್ಸ್‌ಗಳನ್ನು ಕೊಟ್ಟ ಪ್ರತಿಭಾನ್ವಿತರಿದ್ದಾರೆ. ಟೆಸ್ಟ್‌ನಲ್ಲಿ ಮ್ಯಾರಥಾನ್ ಇನ್ನಿಂಗ್ಸ್‌ಗಳನ್ನು ಕೊಟ್ಟ ವಿಭಿನ್ನ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಮಂದಿ ಕ್ರಿಕೆಟ್‌ ರಂಗದಲ್ಲಿ ಬಂದಿದ್ದಾರೆ.

ಪ್ರೇಯಸಿಯ ಭೇಟಿಗೆ ರಾತ್ರಿ 2 ಗಂಟೆಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?ಪ್ರೇಯಸಿಯ ಭೇಟಿಗೆ ರಾತ್ರಿ 2 ಗಂಟೆಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?

ಅಂದ್ಹಾಗೆ ಈ ಸುದೀರ್ಘ ಇನ್ನಿಂಗ್ಸನ್ನು ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡಿದ ಗಂಟೆಗಳ ಆಧಾರದಲ್ಲಿ ಕ್ರಿಕೆಟ್ ಶುರುವಾದ ಆರಂಭದಲ್ಲಿ ಹೇಳಲಾಗುತ್ತಿತ್ತು. ಆದರೆ ಮುಂದೆ ಬ್ಯಾಟ್ಸ್‌ಮನ್ ಒಬ್ಬ ಎದುರಿಸಿದ ಚೆಂಡುಗಳ ಆಧಾರದಲ್ಲೂ ಲಾಂಗೆಸ್ಟ್ ಇನ್ನಿಂಗ್ಸ್‌ ಅನ್ನು ಗುರುತಿಸೋದು ಶುರುವಾಯ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆ ಬರೆದ ಐದು ಬ್ಯಾಟಿಂಗ್ ದಿಗ್ಗಜರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

5. ಗ್ಯಾರಿ ಕಸ್ಟರ್ನ್

5. ಗ್ಯಾರಿ ಕಸ್ಟರ್ನ್

1999ರಲ್ಲಿ ಡರ್ಬನ್ ನಲ್ಲಿ ನಡೆದಿದ್ದ ಬಾಕ್ಸಿಂಗ್‌ ಡೇ ಟೆಸ್ಟ್ ಇದು. ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್ ಮಾಡಿತ್ತು. ದಕ್ಷಿಣ ಆಫ್ರಿಕಾ ತಂಡ 50.5 ಓವರ್‌ಗೆ 154 ರನ್ ಬಾರಿಸಿ ಮೊದಲ ಇನ್ನಿಂಗ್ಸ್‌ ಮುಗಿಸಿತ್ತು. ಹೀಗಾಗಿ ಇಂಗ್ಲೆಂಡ್, ಆಫ್ರಿಕಾಕ್ಕೆ ಫಾಲೋ ಆನ್ ನೀಡಿತ್ತು. ಆಗ ಇನ್ನೂ 2 ದಿನಗಳು ಬಾಕಿಯಿತ್ತು. ಆ ಪಂದ್ಯದಲ್ಲಿ ಗ್ಯಾರಿ ಕಸ್ಟರ್ನ್ ಪ್ರವೇಶ ಪಂದ್ಯದ ಫಲಿತಾಂಶವನ್ನೇ ಬದಲಿಸಿತ್ತು. ಆವತ್ತು ಕ್ರೀಸ್‌ನಲ್ಲಿ ನಿಂತ 15 ಗಂಟೆಯಲ್ಲಿ 642 ಎಸೆತ ಎದುರಿಸಿ 275 ರನ್ ಗಳಿಸಿ ಔಟಾಗಿದ್ದರು. ಇದು ಟೆಸ್ಟ್ ಕ್ರಿಕೆಟ್‌ ದೀರ್ಘ ಇನ್ನಿಂಗ್ಸ್‌ ಆಗಿ ಗುರುತಿಸಿಕೊಂಡಿತ್ತು. ಅಂದ್ಹಾಗೆ ಪಂದ್ಯ ಡ್ರಾ ಅನ್ನಿಸಿತ್ತು.

4. ಸಿಡ್ನಿ ಬಾರ್ನ್ಸ್

4. ಸಿಡ್ನಿ ಬಾರ್ನ್ಸ್

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸಿಡ್ನಿ ಬಾರ್ನ್ಸ್, ತನ್ನ ರಾಷ್ಟ್ರದ ಪರ 13 ಟೆಸ್ಟ್ ಪಂದ್ಯಗಳಲ್ಲಿ 3 ಶತಕಗಳನ್ನು ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಿಡ್ನಿಯಲ್ಲಿ 1946ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಬಾರ್ನ್ಸ್ ಬರೋಬ್ಬರಿ 11 ಗಂಟೆ 11 ನಿಮಿಷ ಕ್ರೀಸ್‌ನಲ್ಲಿ ನಿಂತು 667 ಚೆಂಡುಗಳನ್ನು ಎದುರಿಸಿ 234 ರನ್ ಕಲೆ ಹಾಕಿದ್ದರು. ಇದರಲ್ಲಿ ಒಟ್ಟು 17 ಬೌಂಡರಿಗಳಷ್ಟೇ ಸಿಡಿದಿದ್ದವು.

3. ಬಾಬ್ ಸಿಂಪ್ಸನ್

3. ಬಾಬ್ ಸಿಂಪ್ಸನ್

ಟೆಸ್ಟ್ ಕ್ರಿಕೆಟ್‌ನ ದೀರ್ಘ ಇನ್ನಿಂಗ್ಸ್‌ಗಾಗಿ ಆಸ್ಟ್ರೇಲಿಯಾದ ಬಾಬ್ ಸಿಂಪ್ಸನ್ ಗುರುತಿಸಿಕೊಂಡಿದ್ದಾರೆ. 1964ರಲ್ಲಿ ಮ್ಯಾನ್ಚೆಸ್ಟರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿಂಪ್ಸನ್ ಈ ದಾಖಲೆ ಮಾಡಿದ್ದರು. ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಆ್ಯಷಸ್ ಟೆಸ್ಟ್ ಪಂದ್ಯ ತುಂಬಾ ಬೋರಿಂಗ್ ಪಂದ್ಯ ಅನ್ನಿಸಿತ್ತು. ಯಾಕೆಂದರೆ ಆವತ್ತು ಸಿಂಪ್ಸನ್ 12 ಗಂಟೆಗಳ ಕಾಲ ಆಡಿ, 743 ಎಸೆತಗಳಿಗೆ 311 ರನ್ ಕಲೆ ಹಾಕಿದ್ದರು.

2. ಗ್ಲೆನ್ ಟರ್ನರ್

2. ಗ್ಲೆನ್ ಟರ್ನರ್

ನ್ಯೂಜಿಲೆಂಡ್ ಮಾಜಿ ಬ್ಯಾಟ್ಸ್‌ಮನ್ಗ್ಲೆನ್ ಟರ್ನರ್ ಕೂಡ ಇಂಥದ್ದೇ ದಾಖಲೆ ಬರೆದಿದ್ದಾರೆ. 1972ರಲ್ಲಿ ಜಾರ್ಜ್‌ಟೌನ್‌ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಲಾಂಗೆಸ್ಟ್ ಇನ್ನಿಂಗ್ಸ್‌ ಆಡಿದ್ದರು. ಆವತ್ತು ಕೇವಲ 259 ರನ್‌ಗಾಗಿ ಟರ್ನರ್ ಭರ್ಜರಿ 759 ಎಸೆತಗಳನ್ನು ಎದುರಿಸಿದ್ದರು. ಒಟ್ಟು 12 ಗಂಟೆ 16 ನಿಮಿಗಳ ಕಾಲ ಟರ್ನರ್ ಆವತ್ತು ಕ್ರೀಸ್‌ನಲ್ಲಿ ನಿಂತಿದ್ದರು.

1. ಲೆನ್ ಹಟ್ಟನ್

1. ಲೆನ್ ಹಟ್ಟನ್

ಈ ಇನ್ನಿಂಗ್ಸ್‌ ಎರಡು ಮಾತಿಲ್ಲದೆ ಇಂಗ್ಲೆಂಡ್‌ನ ಪಾಲಿನ ಶ್ರೇಷ್ಠ ಇನ್ನಿಂಗ್ಸ್‌ ಎಂದು ಇಪ್ಪಿಕೊಳ್ಳಬಹುದು. ಇಂಗ್ಲೆಂಡ್‌ನ ಮಾಜಿ ಆಟಗಾರ ಲೆನ್ ಹಟ್ಟನ್ ಈ ಸುದೀರ್ಘ ಇನ್ನಿಂಗ್ಸ್‌ ದಾಖಲೆ ಉಳಿಸಿಕೊಂಡಿದ್ದಾರೆ. 1938ರಲ್ಲಿ ಓವಲ್‌ನಲ್ಲಿ ನಡೆದಿದ್ದ ಟೆಸ್ಟ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಟ್ಟನ್ ಭರ್ಜರಿ ಇನ್ನಿಂಗ್ಸ್‌ ಆಡಿದ್ದರು. ಆವತ್ತು ಹಟ್ಟನ್ 13 ಗಂಟೆಗಳಿಗೂ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಂತಿದ್ದರು. ಒಟ್ಟು 847 ಎಸೆತಗಳನ್ನು ಎದುರಿಸಿದ್ದ ಲೆನ್, 364 ಬಾರಿಸಿದ್ದರು.

Story first published: Friday, April 3, 2020, 22:22 [IST]
Other articles published on Apr 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X