ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು

Top 5 Moments Of Yuvraj Singh’s Cricket Career

ಟೀಮ್ ಇಂಡಿಯಾ ಕಂಡ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರು ಯುವರಾಜ್ ಸಿಂಗ್. ತನ್ನ ಸ್ಪೋಟಕ ಬ್ಯಾಟಿಂಗ್‌ನಿಂದಲೇ ಅದೆಷ್ಟೋ ಪಂದ್ಯಗಳನ್ನು ಯುವರಾಜ್ ಸಿಂಗ್ ಗೆಲ್ಲಿಸಿಕೊಟ್ಟಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲೂ ಕರಾಮತ್ತು ತೋರಿಸುತ್ತಿದ್ದ ಇವರು ಆಲ್‌ರೌಂಡರ್ ಆಗಿ ದೊಡ್ಡ ಕೊಡುಗೆಯನ್ನು ಟೀಮ್ ಇಂಡಿಯಾಗೆ ನೀಡಿದ್ದಾರೆ.

ಎರಡು ವಿಶ್ವಕಪ್ ಗೆಲುವಿನಲ್ಲಿ ಟೀಮ್ ಇಂಡಿಯಾದ ಈ ಆಲ್‌ರೌಂಡರ್ ಪ್ರಮುಖ ಪಾತ್ರವಹಿಸಿದ್ದರು. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಪಾತ್ರ ಬಹಳ ದೊಡ್ಡದಿತ್ತು ಎಂದುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

ಹಾಗಾದರೆ ಟೀಮ್ ಇಂಡಿಯಾದ ಈ ಸ್ಪೋಟಕ ಬ್ಯಾಟ್ಸ್‌ಮನ್‌ನನ್ನು ಹೀರೋ ಆಗಿ ಮಿಂಚುವಂತೆ ಮಾಡಿದ ಐದು ಇನ್ನಿಂಗ್ಸ್‌ಗಳ ಬಗ್ಗೆ ನೋಡೋಣ..

5. ಚೊಚ್ಚಲ ಪಂದ್ಯದಲ್ಲೇ ಅಬ್ಬರ

5. ಚೊಚ್ಚಲ ಪಂದ್ಯದಲ್ಲೇ ಅಬ್ಬರ

ಯುವರಾಜ್ ಸಿಂಗ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್‌ನ ಪ್ರಥಮ ಪಂದ್ಯದಲ್ಲೇ ತಾನು ಟೀಮ್ ಇಂಡಿಯಾದ ಭವಿಷ್ಯ ಎಂದು ಸಾರಿದವರು. ಪ್ರಥಮ ಪಂದ್ಯದಲ್ಲೇ ಯುವರಾಜ್ ಸಿಂಗ್ ಹೀರೋ ಆಗ ಮಿಂಚಿದರು. ಆಸ್ಟ್ರೇಲಿಯಾ ವಿರುದ್ಧ ನಡೆದ ಈ ಪಂದ್ಯದಲ್ಲಿ ಯುವರಾಜ್ ಸಿಂಗ್ 84 ರನ್‌ಗಳ ಅಮೂಲ್ಯ ಕೊಡುಗೆಯನ್ನು ನೀಡಿದ್ದರು. ಯುವರಾಜ್ ಸಿಂಗ್ ಅವರ ಈ ಸಾಧನೆಯಿಂದ ಈ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಲು ಸಾಧ್ಯವಾಗುತ್ತು. ಯುವರಾಜ್ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.

2017ರಲ್ಲಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸ್ಕೋರ್

2017ರಲ್ಲಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸ್ಕೋರ್

ವಿಶ್ವಕಪ್ ಗೆಲುವಿನ ನಂತರ ಯುವರಾಜ್‌ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡಿ ಅಲ್ಲೂ ಗೆದ್ದ ನಂತರ ಕ್ರಿಕೆಟ್ ಕೆರಿಯರ್‌ನಲ್ಲಿ ಕುಸಿತವನ್ನು ಅನುಭವಿಸಿದರು. ಮತ್ತೆ ಹರಸಾಹಸ ಪಟ್ಟು ಕಮ್‌ಬ್ಯಾಕ್ ಮಾಡಿದ ಯುವಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೇಷ್ಠ ಇನ್ನಿಂಗ್ಸನ್ನು ಆಡಿದರು. ಮಹೇಂದ್ರ ಸಿಂಗ್ ಧೋನಿ ಜೊತೆ ಕೂಡಿಕೊಂಡು ಏಕದಿನ ಕ್ರಿಕೆಟ್‌ನ ತನ್ನ ಸರ್ವಾಧಿಕ 150 ರನ್‌ಗಳ್ನು ಗಳಿಸಿದರು. ಇದು ಕೂಡ ಯುವರಾಜ್ ಸಿಂಗ್ ಕೆರಿಯರ್‌ನ ಒಂದು ಅದ್ಭುತ ಇನ್ನಿಂಗ್ಸ್‌ ಆಗಿದೆ.

ಆರು ಎಸೆತಕ್ಕೆ ಆರು ಸಿಕ್ಸರ್

ಆರು ಎಸೆತಕ್ಕೆ ಆರು ಸಿಕ್ಸರ್

2007ರ ವಿಶ್ವಕಪ್ ಹಲವಾರು ವಿಶೇಷ ಕಾರಣಗಳಿಗಾಗಿ ಸ್ಮರಣೀಯ. ಅದರಲ್ಲಿ ಒಂದು ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡಿದ ಸ್ಪೋಟಕ ಇನ್ನಿಂಗ್ಸ್‌. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್‌ನ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ನ ಆಟೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ ಇತಿಹಾಸವನ್ನು ಬರೆದಿದ್ದರು. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಕ್ಕೇ ಅರ್ಧಶತಕವನ್ನು ಪೂರೈಸಿದ್ದರು.

ನಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯ

ನಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಶ್ರೇಷ್ಠ ಚೇಸಿಂಗ್ ನಡೆದ ಪಂದ್ಯವಿದು. ಇಂಗ್ಲಂಡ್ ನೀಡಿದ್ದ 326ರನ್‌ಗಳ ಟಾರ್ಗೆಟನ್ನು ಬೆನ್ನತ್ತಿದ್ದ ಭಾರತ ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಸೋಲನ್ನು ಖಚಿತ ಪಡಿಸಿಕೊಂಡಿತ್ತು. ಆದರೆ ಮೊಹಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಅಮೂಲ್ಯ ಆಟವನ್ನು ಪ್ರದರ್ಶಿಸಿದರು. ಕೈಫ್ ಜೊತೆಗೆ ಅತ್ಯಮೂಲ್ಯ 121 ರನ್‌ಗಳ ಜೊತೆಯಾಟವನ್ನು ಯುವರಾಜ್ ಸಿಂಗ್ ನೀಡಿದ್ದರು. ಅಮೂಲ್ಯ ಸಂದರ್ಭದಲ್ಲಿ ಯುವಿ 63 ರನ್‌ಗಳನ್ನು ಗಳಿಸಿ ಟೀಮ್ ಇಂಡಿಯಾ ಗೆಲ್ಲಲು ಮಹತ್ವದ ಪಾತ್ರ ನಿರ್ವಹಿಸಿದ್ದರು. ಈ ಗೆಲುವು ಭಾರತದ ಪಾಲಿಗೆ ಅತ್ಯಂತ ಸ್ಮರಣೀಯವಾಗಿದೆ.

2011ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ

2011ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಆಟಗಾರ

2011ರ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪಾಲು ಅತ್ಯಂತ ಮಹತ್ವದ್ದು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೂಲ್ಯ ಕಾಣಿಕೆಯನ್ನು ಟೀಮ್ ಇಂಡಿಯಾಗೆ ನೀಡಿದ್ದರು.ವಿಶ್ವಕಪ್‌ನ 9 ಪಂದ್ಯಗಳಲ್ಲಿ ಯುವಿ ಒಂದು ಶತಕ ನಾಲ್ಕು ಅರ್ಧ ಶತಕವನ್ನು ಸಿಡಿಸಿದ್ದರು. ಇದರ ಜೊತೆಗೆ ಬೌಲಿಂಗ್‌ನಲ್ಲೂ 15 ವಿಕೆಟ್ ಪಡೆದುಕೊಂಡಿದ್ದರು. ಈ ಒಟ್ಟಾರೆ ಪ್ರದರ್ಶನಕ್ಕೆ ಯುವರಾಜ್ ಸಿಂಗ್ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದರು.

Story first published: Friday, May 29, 2020, 12:08 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X