ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನದಲ್ಲಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಟಾಪ್ 5 ಆಟಗಾರರು

Top 5 Most Man of the Match winners in ODIs

ಬೆಂಗಳೂರು: ಕ್ರಿಕೆಟ್ ಅನ್ನು ಒಂದು ತಂಡವಾಗಿ ಆಡುವ ಆಟವೆಂದು ಕರೆಯುತ್ತೇವೆಯಾದರೂ ಕ್ರಿಕೆಟ್‌ ಇತಿಹಾಸ ಗಮನಿಸಿದರೆ ಅನೇಕ ಪಂದ್ಯಗಳ ವೇಳೆ ಆಟಗಾರನೊಬ್ಬನ ವೈಯಕ್ತಿಕ ಪ್ರದರ್ಶನ ಫಲಿತಾಂಶ ಬದಲಿಸಿದ್ದು ಕಾಣಸಿಗುತ್ತದೆ. ಬ್ಯಾಟ್ಸ್‌ಮನ್‌ ಒಬ್ಬ ಪಂದ್ಯ ಗೆಲ್ಲಿಸುವ ಶತಕ ಬಾರಿಸಿದ್ದರೆ, ಬೌಲರ್ ಒಬ್ಬ ಎದುರಾಳಿ ತಂಡದ ಪ್ರಮುಖ ವಿಕೆಟ್‌ಗಳನ್ನು ಕೆಡವಿ ತನ್ನ ತಂಡದ ಗೆಲುವನ್ನು ಬರೆದಿರುತ್ತಾನೆ. ಬರೀ ಬ್ಯಾಟ್ಸ್‌ಮನ್, ಬೌಲರ್‌ಗಳಷ್ಟೇ ಅಲ್ಲ, ಫೀಲ್ಡರ್‌ಗಳೂ ಆಟದ ದಿಕ್ಕನ್ನೇ ಬದಲಿಸಬಲ್ಲರು.

'ಆಸ್ಟ್ರೇಲಿಯಾದಲ್ಲಿ ಸಾಧಿಸುವ ಸಾಮರ್ಥ್ಯ ಆತನಿಗೆ': ಭಾರತೀಯನ ಹೆಸರಿಸಿದ ಹಸ್ಸಿ'ಆಸ್ಟ್ರೇಲಿಯಾದಲ್ಲಿ ಸಾಧಿಸುವ ಸಾಮರ್ಥ್ಯ ಆತನಿಗೆ': ಭಾರತೀಯನ ಹೆಸರಿಸಿದ ಹಸ್ಸಿ

ಲಿಮಿಟೆಡ್ ಓವರ್‌ ಕ್ರಿಕೆಟ್ ಶುರುವಾದ ಮೇಲಂತೂ ಆಟಗಾರರ ವೈಯಕ್ತಿಕ ಪ್ರದರ್ಶನ ಹೆಚ್ಚು ಗಮನ ಸೆಳೆದಿದ್ದನ್ನು ನಾವೆಲ್ಲ ನೋಡಿದ್ದೇವೆ. ತಂಡದ ಬ್ಯಾಟ್ಸ್‌ಮನ್ ಅಥವಾ ಬೌಲರ್ ಒಬ್ಬ ತನ್ನ ಅವಿರತ ಶ್ರಮದ ಮೂಲಕ ತಂಡದ ಗೆಲುವನ್ನು ಬರೆಯುತ್ತಾನಲ್ಲ? ಆತನಿಗೆ ಪಂದ್ಯಶ್ರೇಷ್ಠ ಅನ್ನೋ ವಿಶೇಷ ಗೌರವ ಸಲ್ಲುತ್ತದೆ.

ಎಬಿ ಡಿವಿಲಿಯರ್ಸ್ ಆಲ್ ಸ್ಟಾರ್ ಐಪಿಎಲ್‌ XIನಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲ!ಎಬಿ ಡಿವಿಲಿಯರ್ಸ್ ಆಲ್ ಸ್ಟಾರ್ ಐಪಿಎಲ್‌ XIನಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲ!

ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದ ಟಾಪ್ 5 ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

1. ಸಚಿನ್ ತೆಂಡೂಲ್ಕರ್ (ಭಾರತ)

1. ಸಚಿನ್ ತೆಂಡೂಲ್ಕರ್ (ಭಾರತ)

'ಕ್ರಿಕೆಟ್ ದೇವರು' ಅಂತ ಕರೆಯಲ್ಪಡುವ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತನ್ನ 23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ 463 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 18,426 ರನ್ ವಿಶ್ವ ದಾಖಲೆಯೂ ಸಚಿನ್ ಹೆಸರಿನಲ್ಲಿದೆ. ಒಡಿಐ 49 ಶತಕಗಳ ದಾಖಲೆ ಹೊಂದಿರುವ ತೆಂಡೂಲ್ಕರ್ ಒಟ್ಟು 62 ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆಲ್ಲುವ ಮೂಲಕ ಇಲ್ಲೂ ದಾಖಲೆ ನಿರ್ಮಿಸಿದ್ದಾರೆ.

2. ಸನತ್ ಜಯಸೂರ್ಯ (ಶ್ರೀಲಂಕಾ)

2. ಸನತ್ ಜಯಸೂರ್ಯ (ಶ್ರೀಲಂಕಾ)

ಶ್ರೀಲಂಕಾದ ಕ್ರಿಕೆಟ್ ದಂತಕತೆ ಸನತ್ ಜಯಸೂರ್ಯ ಅವರು ತನ್ನ 22 ವರ್ಷಗಳ ಏಕದಿನ ವೃತ್ತಿ ಜೀವನದಲ್ಲಿ 445 ಪಂದ್ಯಗಳನ್ನಾಡಿದ್ದಾರೆ. 13430 ಏಕದಿನ ರನ್ ಗಳಿಸಿರುವ ಜಯಸೂರ್ಯ 28 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಒಡಿಐನಲ್ಲಿ 48 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

3. ವಿರಾಟ್ ಕೊಹ್ಲಿ (ಭಾರತ)

3. ವಿರಾಟ್ ಕೊಹ್ಲಿ (ಭಾರತ)

ಈ ವರೆಗೆ 12 ವರ್ಷಗಳ ವೃತ್ತಿ ಜೀವನ ಕಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಟ್ಟಿಗೆ 248 ಪಂದ್ಯಗಳಲ್ಲಿ 11867 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ. ಇನ್ನು ಒಟ್ಟಿಗೆ 36 ಬಾರಿ ಏಕದಿನದಲ್ಲಿ ಮ್ಯಾನ್ ಆಫ್ ದ ಮಾಚ್‌ ಎನಿಸಿದ್ದಾರೆ.

4. ಕ್ಯಾಲೀಸ್, ಪಾಂಟಿಂಗ್, ಅಫ್ರಿದಿ

4. ಕ್ಯಾಲೀಸ್, ಪಾಂಟಿಂಗ್, ಅಫ್ರಿದಿ

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದವರ ನಾಲ್ಕನೇ ಸ್ಥಾನದಲ್ಲಿ ಒಟ್ಟಿಗೆ ಮೂವರು ಕ್ರಿಕೆಟಿಗರಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲೀಸ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಶಾಹಿದ್ ಅಫ್ರಿದ್ ಈ ಸಾಧನೆ ಮಾಡಿದ್ದಾರೆ. ಕ್ಯಾಲೀಸ್, ಪಾಂಟಿಂಗ್ ಮತ್ತು ಅಫ್ರಿದಿ ಈ ಮೂವರೂ 32 ಬಾರಿ ಪಂದ್ಯಶ್ರೇಷ್ಠರೆನಿಸಿದ್ದರು.

5. ವಿವ್ ರಿಚರ್ಡ್ಸ್, ಗಂಗೂಲಿ, ಸಂಗಕ್ಕಾರ

5. ವಿವ್ ರಿಚರ್ಡ್ಸ್, ಗಂಗೂಲಿ, ಸಂಗಕ್ಕಾರ

ಒಡಿಐ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದವರಲ್ಲಿ 5ನೇ ಸ್ಥಾನದಲ್ಲೂ ಮೂವರಿದ್ದಾರೆ. ವೆಸ್ಟ್ ಇಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್, ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಮತ್ತು ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಈ ದಾಖಲೆ ನಿರ್ಮಿಸಿದ್ದಾರೆ. ಮೂವರೂ 31 ಬಾರಿ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.

Story first published: Wednesday, July 1, 2020, 17:54 [IST]
Other articles published on Jul 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X