ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 5 ಆಟಗಾರರನ್ನು ತಂಡದಿಂದ ಕೈ ಬಿಟ್ಟು ಇನ್ನೂ ಪಶ್ಚಾತ್ತಾಪ ಪಡುತ್ತಿರುವ ಡೆಲ್ಲಿ

ಡೆಲ್ಲಿ ಕ್ಯಾಪಿಟಲ್ಸ್‌, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ನಾಯಕರನ್ನು ಬದಲಾವಣೆ ಮಾಡಿರುವ ತಂಡ. ಅಷ್ಟೇ ಏಕೆ ಪ್ರತಿ ಸೀಸನ್‌ನಲ್ಲೂ ಸಾಕಷ್ಟು ಆಟಗಾರರನ್ನು ಕೈ ಬಿಟ್ಟು ಬೇರೆ ಆಟಗಾರರನ್ನು ಫ್ರಾಂಚೈಸಿ ಬಿಡ್ ಮಾಡಿ ಪಡೆದುಕೊಂಡಿದೆ.

ಡೆಲ್ಲಿ ಡೇರ್‌ ಡೆವಿಲ್ಸ್ ಹೆಸರಿನ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್ ಎಂದು ಮರುನಾಮಕರಣ ಮಾಡಿಕೊಂಡರೂ ಡೆಲ್ಲಿ ಕ್ಯಾಪಿಟಲ್ಸ್‌ ಕಪ್‌ ಗೆಲ್ಲುವುದು ಹೋಗಲಿ, ಫೈನಲ್ ಹಂತಕ್ಕೂ ಪ್ರವೇಶ ಪಡೆದಿಲ್ಲ. ಐಪಿಎಲ್ ಇತಿಹಾಸದಲ್ಲಿ ಕಳಪೆ ಪ್ರದರ್ಶನದಿಂದಲೂ ಹೆಚ್ಚು ಸುದ್ದಿಯಾಗಿದೆ. ಆದರೆ ಕಳೆದ ಎರಡು ಸೀನಸ್‌ಗಳಲ್ಲಿ ಡೆಲ್ಲಿ ಹೆಚ್ಚು ಯುವಕರಿಗೆ ಮಣೆ ಹಾಕಿ ಉತ್ತಮ ತಂಡವನ್ನು ಸಿದ್ಧಪಡಿಸಿಕೊಂಡಿದೆ.

ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಆಂಧ್ರದ ಎಡಗೈ ವೇಗಿ ಸೇರ್ಪಡೆಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಆಂಧ್ರದ ಎಡಗೈ ವೇಗಿ ಸೇರ್ಪಡೆ

ಐಪಿಎಲ್ 13ನೇ ಆವೃತ್ತಿಗೆ ತಲುಪಿದ್ದರೂ ಸಹ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕೆಲ ಆಟಗಾರರನ್ನು ಕೈ ಬಿಟ್ಟು ಸುಟ್ಟುಕೊಂಡಿದೆ. ಅದರಲ್ಲೂ ಈ ಐವರು ಆಟಗಾರರನ್ನು ಕಳೆದ ಹಲವು ವರ್ಷಗಳಿಂದ ಮಿಸ್ ಮಾಡಿಕೊಳ್ಳುತ್ತಿದೆ. ಯಾಕಪ್ಪಾ ತಂಡದಿಂದ ಬಿಟ್ಟೆವು ಎಂದು ಪಶ್ಚಾತ್ತಾಪ ಪಟ್ಟಿದ್ದು ಇದೆ. ಆ ಐವರು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ನೀಡಲಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ 2012ರಲ್ಲಿ ತಮ್ಮ ಮೊಟ್ಟ ಮೊದಲ ಐಪಿಎಲ್ ಸೀನಸ್‌ ಅನ್ನು ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದರು. ಆದರೆ ನಂತರದಲ್ಲಿ 2018ರಲ್ಲಿ ಮತ್ತೆ ಅವರನ್ನು ಡೆಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡರು ಪ್ರದರ್ಶನ ಉತ್ತಮವಾಗಿಲ್ಲದ ಕಾರಣ ತಂಡದಿಂದ ಕೈ ಬಿಟ್ಟಿತ್ತು.

ತಾಳ್ಮೆಯಿಲ್ಲದೆ ಡೆಲ್ಲಿ ಆತನನ್ನು ತಾಳ್ಮೆಯಿಂದ ತಂಡದಿಂದ ಹೊರಗಿಟ್ಟಿತು. ಆದರೆ 2014ರಲ್ಲಿ ಕಿಂಗ್ಸ್ ಇಲೆವೆನ್ ಪರ ಅಬ್ಬರಿಸಿದ ಮ್ಯಾಕ್ಸ್‌ವೆಲ್, ಬೌಲರ್‌ಗಳನ್ನು ಧೂಳೀಪಟ ಮಾಡಿ 552ರನ್ ಸಿಡಿಸಿದ್ರು. 34.50 ಸರಾಸರಿಯಲ್ಲಿ 187 ಸ್ಟ್ರೈಕ್‌ರೇಟ್‌ ನಲ್ಲಿ ಬ್ಯಾಟ್‌ ಬೀಸಿದರು. ನಂತರ 2017ರಲ್ಲಿ ಮತ್ತೆ 300ರನ್‌ ದಾಖಲಿಸಿದರು.

ಗೌತಮ್ ಗಂಭೀರ್

ಗೌತಮ್ ಗಂಭೀರ್

ಟೀಮ್ ಇಂಡಿಯಾದ ಓಪನರ್ ಆಗಿದ್ದ ಗೌತಮ್ ಗಂಭೀರ್ ಡೆಲ್ಲಿ ಪರ ಮೊದಲು ಕಣಕ್ಕಿಳಿದರು. ಆತನ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಮುನ್ನೆಡೆಸುವುದಕ್ಕೂ ಮೊದಲು ಡೆಲ್ಲಿ ಪರ ಆಡಿದ್ದರು.

2012 ಮತ್ತು 2014ರಲ್ಲಿ ಎರಡು ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಟ್ಟಕ್ಕೆ ಏರಿಸಿದ ಗಂಭೀರ್, ಕೆಕೆಆರ್ ಪರ ಅತ್ಯಧಿಕ ರನ್‌ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ ನಂತರದಲ್ಲಿ ಮತ್ತೆ ಡೆಲ್ಲಿ ತಂಡಕ್ಕೆ ಮರಳಿದ ಹೊತ್ತಿಗೆ ಗಂಭೀರ್ ಫಾರ್ಮ್ ವೈಫಲ್ಯ ಅನುಭವಿಸಿದರು.

ಐಪಿಎಲ್ 2020: ರೈನಾ ಹೆಸರಿನಲ್ಲಿರುವ 2 ದಾಖಲೆ ಮುಡಿಗೇರಿಸಿಕೊಳ್ಳಲು ರೋಹಿತ್ ಸಜ್ಜು

ಆಂಡ್ರೆ ರಸ್ಸೆಲ್

ಆಂಡ್ರೆ ರಸ್ಸೆಲ್

ಕೆಕೆಆರ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್, ಆಲ್‌ರೌಂಡರ್ ಆಂಡ್ರೆ ರಸ್ಸೆಲ್, ಗ್ಲೆನ್ ಮ್ಯಾಕ್ಸ್‌ವೆಲ್ ರೀತಿಯಲ್ಲಿ ತಮ್ಮ ಐಪಿಎಲ್ ಸೀಸನ್ ಶುರುಮಾಡಿದ್ದು ಡೆಲ್ಲಿ ಪರ. ಎರಡು ಸೀಸನ್‌ಗಳಲ್ಲಿ ಡೆಲ್ಲಿ ಪರ ಆಡಿದ ಈತ 7 ಪಂದ್ಯಗಳನ್ನಾಡಿದ್ದು 58ರನ್ ಗಳಿಸಿದ. ಪರಿಣಾಮ ಆತನನ್ನು ಮುಂದಿನ ಸೀಸನ್‌ನಲ್ಲಿ ತಂಡದಿಂದ ಕೈ ಬಿಡಲಾಯಿತು.

ಆದರೆ ಕೆಕೆಆರ್ ಪರ ಸೇರಿದ ಬಳಿಕ ಆಂಡ್ರೆ ರಸ್ಸೆಲ್ ಆಟವೇ ಬದಲಾಯಿತು. ಐಪಿಎಲ್ ಇತಿಹಾಸದಲ್ಲಿ ಸೂಪರ್ ಆಲ್‌ರೌಂಡರ್ ಎನಿಸಿಕೊಂಡಿರುವ ರಸ್ಸೆಲ್ 510ರನ್‌ಗಳಿಸಿದ್ದು, 52 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಲ್ಲದೆ 200 ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ವರ್ಷ ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಸಹ ಆಗಿದ್ದಾರೆ.

ಎಬಿ ಡಿ ವಿಲಿಯರ್ಸ್

ಎಬಿ ಡಿ ವಿಲಿಯರ್ಸ್

ಆರ್‌ಸಿಬಿ ತಂಡದ ಆಧಾರಸ್ತಂಭ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಆಗಿರುವ ಎಬಿ ಡಿ ವಿಲಿಯರ್ಸ್‌ ಐಪಿಎಲ್ ಸೀಸನ್ ಶುರು ಮಾಡಿದ್ದು ಡೆಲ್ಲಿ ಪರ. ಮೊದಲ ಸೀಸನ್‌ನಲ್ಲಿ ಕೇವಲ ಆರು ಪಂದ್ಯಗಳನ್ನಾಡಿದ ಎಬಿಡಿ, ಎರಡನೇ ಸೀಸನ್‌ನಲ್ಲಿ ಡೆಲ್ಲಿ ಪರ ಒಂದು ಸೆಂಚುರಿ ಸೇರಿ 445 ರನ್‌ ದಾಖಲಿಸಿದರು. ಮೂರನೇ ಸೀಸನ್‌ನಲ್ಲಿ ಕೇವಲ 111ರನ್‌ಗಳಿಸಿದರು.

ಇದಾದ ಬಳಿಕ ಡೆಲ್ಲಿ ಎಬಿ ಡಿ ವಿಲಿಯರ್ಸ್‌ರನ್ನ ತಂಡದಿಂದ ಕೈ ಬಿಟ್ಟಿತು. ಬಳಿಕ ಆರ್‌ಸಿಬಿ ಸೇರಿದ ಬಳಿಕ ಎಬಿಡಿ ಮನೆ ಮಾತಾಗಿದ್ದಾರೆ. ಸ್ಥಿರ ಪ್ರದರ್ಶನ ತೋರುತ್ತಿರುವ ಎಬಿ ಡಿ ವಿಲಿಯರ್ಸ್ ಆರ್‌ಸಿಬಿ ಅಭಿಮಾನಿಗಳ ನೆಚ್ಚಿನ ಹೀರೋ ಆಗಿದ್ದಾರೆ. ಅಲ್ಲದೆ ಸೂಪರ್ ಫೀಲ್ಡರ್ ಆಗಿದ್ದಾರೆ.

ಡೇವಿಡ್ ವಾರ್ನರ್

ಡೇವಿಡ್ ವಾರ್ನರ್

ಡೆಲ್ಲಿ ಡೇರ್ ಡೆವಿಲ್ಸ್ ತಂಡ ಈ ಆಟಗಾರನನ್ನು ತುಂಬಾನೆ ಮಿಸ್ ಮಾಡಿಕೊಂಡಿದೆ. 2009ರಿಂದ 2013ರವರೆಗೆ ಐದು ಸೀಸನ್‌ಗಳು ಡೆಲ್ಲಿ ಪರ ಆಡಿದ್ದ ವಾರ್ನರ್‌ರನ್ನ ನಂತರದ ಸೀಸನ್‌ಗಳಲ್ಲಿ ಕೈ ಬಿಟ್ಟ ಬಳಿಕ ಸನ್‌ರೈಸರ್ಸ್ ಹೈದ್ರಾಬಾದ್ ಸೇರಿಕೊಂಡ್ರು.

ಹೈದ್ರಾಬಾದ್ ಸೇರಿದ ಬಳಿಕ ಡೇವಿಡ್ ವಾರ್ನರ್ ಅತಿ ಹೆಚ್ಚು ರನ್‌ಗಳಿಸಿದ ವಿದೇಶಿ ಆಟಗಾರನಾಗಿ ಹೊರಹೊಮ್ಮಿದ್ರು. ವಾರ್ನರ್ 4000ಕ್ಕೂ ಹೆಚ್ಚು ರನ್‌ಗಳಿಸಿದ್ದು, ಅತಿ ಹೆಚ್ಚು ರನ್‌ಗಳಿಸಿದ ಐಪಿಎಲ್‌ ಪ್ಲೇಯರ್‌ಗಳ ಪಟ್ಟಿಯಲ್ಲಿ ಐವರಲ್ಲಿ ಇರುವ ಏಕೈಕ ವಿದೇಶಿ ಆಟಗಾರನಾಗಿದ್ದಾನೆ. ಮೂರು ಬಾರಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದಾರೆ.

ಸನ್‌ರೈಸರ್ಸ್ ಹೈದ್ರಾಬಾದ್ ತಂಡವನ್ನು ಮುನ್ನೆಡೆಸುತ್ತಿರುವ ವಾರ್ನರ್ ಒಂದು ಬಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ದಾರೆ. ಹೀಗಾಗಿ ಒಂದು ವೇಳೆ ವಾರ್ನರ್ ತಂಡದಲ್ಲಿದ್ದರೆ ಡೆಲ್ಲಿ ಟೀಮ್ ಮತ್ತಷ್ಟು ಬಲಿಷ್ಠವಾಗಿರುತ್ತಿತ್ತು ಎಂದು ಪಶ್ಚಾತ್ತಾಪ ಪಟ್ಟಿದೆ.

Story first published: Tuesday, October 6, 2020, 20:40 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X