ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಇತಿಹಾಸದಲ್ಲಿ ನಡೆದ ಐದು ಭಾರೀ ವಾಗ್ವಾದಗಳು ಇಲ್ಲಿವೆ

ಜಗತ್ತಿನ ಅತ್ಯಂತ ಪ್ರಸಿದ್ಧ ಮತ್ತು ಅಭಿಮಾನಿಗಳನ್ನು ಸೆಳೆಯುವಲ್ಲಿ ಬಹು ಯಶಸ್ವಿಯಾಗಿರುವ ಟಿ20 ಲೀಗ್‌ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿದೆ. ಮನೋರಂಜನ್ ಕಾ ಬಾಪ್ ಎಂದೇ ಕರೆಯಲ್ಪಡುವ ಐಪಿಎಲ್, ಹಣದ ಹೊಳೆಯನ್ನೇ ಹರಿಸುತ್ತದೆ.

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಕನಸಿನ ಕೂಸು ಬೆಳೆದು 13 ವರ್ಷಕ್ಕೆ ತಲುಪಿದೆ. ಈ ಲೀಗ್‌ನಲ್ಲಿ ಹಲವಾರು ರಾಷ್ಟ್ರಗಳ ಆಟಗಾರರು ಭಾಗವಹಿಸುತ್ತಾರೆ. ಹೀಗಾಗಿ ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್

ಐಪಿಎಲ್ ಹೆಚ್ಚಿನ ಪಂದ್ಯಗಳು ತುಂಬಾನೆ ಕುತೂಹಲ ಮೂಡಿಸಿರುವ ಉದಾಹರಣೆ ಇದೆ. ಪ್ರಸ್ತುತ ಐಪಿಎಲ್ 13ನೇ ಆವೃತ್ತಿಯಲ್ಲೂ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಇದರ ನಡುವೆ ಪ್ರತಿ ವರ್ಷದಂತೆ ಈ ವರ್ಷವೂ ಐಪಿಎಲ್‌ನಲ್ಲಿ ಪರಸ್ಪರರ ವಿರುದ್ಧ ಆಡುವ ಆಟಗಾರರ ನಡುವೆ ವಾಗ್ವಾದಗಳು ಸಂಭವಿಸಿವೆ. ಹೀಗೆ ಐಪಿಎಲ್‌ ಇತಿಹಾಸದಲ್ಲಿ ಭಾರೀ ಕಿತ್ತಾಟ, ವಾಗ್ವಾದಕ್ಕೆ ಕಾರಣವಾದ ಐದು ಕ್ಷಣಗಳ ಕುರಿತು ಮಾಹಿತಿಯನ್ನು ಇಲ್ಲಿ ತೆರೆದಿಡಲಾಗಿದೆ.

ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್

ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್

ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ನಡುವೆ ನಡೆದ ಆ ಒಂದು ಘಟನೆ ಇಡೀ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ್ದು ಸುಳ್ಳಲ್ಲ. ಏಕೆಂದರೆ ಈ ಇಬ್ಬರು ಕ್ರಿಕೆಟಿಗರ ನಡುವಿನ ನಡುವಿನ ವಾದ ಕೇವಲ ವಾಗ್ವಾದವಾಗಷ್ಟೇ ಆಗಿರಲಿಲ್ಲ.

2008ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದ ಹರ್ಭಜನ್ ಸಿಂಗ್ ತಮ್ಮದೇ ಕಿಂಗ್ಸ್‌ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದ, ಹಾಗೂ ತಮ್ಮದೇ ಆದ ರಾಷ್ಟ್ರೀಯ ಸಹ ಆಟಗಾರ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದರು.

ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಹರ್ಭಜನ್ ನಾಯಕತ್ವ ವಹಿಸಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಅಂದು ಸೋಲಿಸಿತು. ಆಟದ ನಂತರ, ವೇಗಿ ಶ್ರೀಶಾಂತ್ ಹರ್ಭಜನ್‌ನೊಂದಿಗೆ ಕೈಕುಲುಕಲು ಹೊರಟಿದ್ದರು. ಈ ವೇಳೆ ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್ ಭಾರೀ ಟೀಕೆಗೆ ಒಳಗಾಗಿದ್ದರು. ತಂಡದ ಆಟಗಾರರಾದ ವಿ.ಆರ್.ವಿ ಸಿಂಗ್ ಮತ್ತು ಕುಮಾರ್ ಸಂಗಕ್ಕಾರ ಮುನ್ನೆಡೆದು ಎಸ್‌. ಶ್ರೀಶಾಂತ್‌ಗೆ ಸಮಾಧಾನಪಡಿಸಲು ಪ್ರಯತ್ನಿಸಿದ್ದರು.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್

ಟೀಮ್ ಇಂಡಿಯಾದ ಇಬ್ಬರು ಖ್ಯಾತ ಕ್ರಿಕೆಟಿಗರು ಮೈದಾನದಲ್ಲಿ ವಾಗ್ವಾದಕ್ಕಿಳಿದಾಗ ಭಾರೀ ವಿವಾದಕ್ಕೆ ನಾಂದಿ ಹಾಡಿತು. ಏಪ್ರಿಲ್ 11, 2013ರಂದು ಆರ್‌ಸಿಬಿ ಕೆಕೆಆರ್ ನೀಡಿದ್ದ 155 ರನ್ನು ಬೆನ್ನಟ್ಟಿತ್ತು. 10 ನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಲಕ್ಷ್ಮಿಪತಿ ಬಾಲಾಜಿ ಔಟ್ ಮಾಡಿದರು. ಈ ವೇಳೆಯಲ್ಲಿ ಪಾಯಿಂಟ್‌ ಸ್ಥಾನದಿಂದ ವಿಕೆಟ್ ಸಂಭಮ್ರಿಸಲು ಗಂಭೀರ್ ಹೋದರು.

ಈ ವೇಳೆ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಕೊಹ್ಲಿಗೆ, ಗೌತವ್‌ ಗಂಭೀರ್ ಏನನ್ನೋ ಹೇಳಿದರು. ಇದೇ ಸಂದರ್ಭದಲ್ಲಿ ತಿರುಗಿ ಬಂದ ವಿರಾಟ್ ಹಾಗೂ ಗಂಭೀರ್ ನಡುವೆ ಭಾರೀ ಕಿತ್ತಾಟವೇ ನಡೆಯಿತು.

ಟೀಮ್ ಇಂಡಿಯಾಗೆ ಆಯ್ಕೆಯಾಗದ್ದಕ್ಕೆ ಸೂರ್ಯಕುಮಾರ್ ಅಸಮಾಧಾನಗೊಂಡಿದ್ದಾರೆ: ಕಿರಾನ್ ಪೊಲಾರ್ಡ್

ಭಾರತೀಯ ಕ್ರಿಕೆಟ್‌ನ ಎರಡು ಬೆಹೆಮೊಥ್‌ಗಳು ಡಿಕ್ಕಿ ಹೊಡೆದಾಗ ಅದು ಭಾರಿ ವಿವಾದಗಳಿಗೆ ನಾಂದಿ ಹಾಡಿತು. 11 ಏಪ್ರಿಲ್ 2013 ರಂದು ಆರ್‌ಸಿಬಿ ಕೆಕೆಆರ್ ವಿರುದ್ಧ 155 ರನ್ನು ಬೆನ್ನಟ್ಟಿತ್ತು. 10 ನೇ ಓವರ್‌ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಲಕ್ಷ್ಮಿಪತಿ ಬಾಲಾಜಿ ಔಟಾದರು. ವೃತ್ತದಲ್ಲಿ ಪಾಯಿಂಟ್ ಸ್ಥಾನದಿಂದ ಬೌಲರ್ ಜೊತೆ ಆಚರಿಸಲು ಗಂಭೀರ್ ಓಡಿಹೋದರು. ಅದೃಷ್ಟವಶಾತ್, ರಜತ್ ಭಾಟಿಯಾ ಮತ್ತು ಅಂಪೈರ್ ಅನಿಲ್ ಚೌಧರಿ ಶೀಘ್ರವಾಗಿ ಮಧ್ಯಪ್ರವೇಶಿಸಿ ಇಬ್ಬರನ್ನು ಬೇರ್ಪಡಿಸಿದರು.

ಕಿರಾನ್ ಪೊಲಾರ್ಡ್ ಮತ್ತು ಶೇನ್ ವ್ಯಾಟ್ಸನ್

ಕಿರಾನ್ ಪೊಲಾರ್ಡ್ ಮತ್ತು ಶೇನ್ ವ್ಯಾಟ್ಸನ್

2013ರ ಐಪಿಎಲ್ ಸೀಸನ್‌ನಲ್ಲಿ ಕಿರಾನ್ ಪೊಲಾರ್ಡ್ ಮತ್ತು ಶೇನ್ ವ್ಯಾಟ್ಸನ್ ತುಂಬಾನೆ ಕಿತ್ತಾಡಿಕೊಂಡಿದ್ರು. ಪಂದ್ಯವೊಂದರಲ್ಲಿ ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮಾಡಲು ಬಂದಾಗ, ಪೊಲಾರ್ಡ್‌ ನಿರಂತರವಾಗಿ ಆಸೀಸ್ ಬ್ಯಾಟ್ಸ್‌ಮನ್‌ ಕಾಲೆಳೆಯುತ್ತಿದ್ದರು.

ಶೇನ್ ವ್ಯಾಟ್ಸನ್ ಬ್ಯಾಟಿಂಗ್ ಮಾಡಲು ಬಂದಾಗ, ಪೊಲಾರ್ಡ್ ನಿರಂತರವಾಗಿ ಆಸೀಸ್ ಬ್ಯಾಟ್ಸ್‌ಮನ್‌ ರೇಗಿಸುತ್ತಿದ್ದರು. ಈ ವೇಳೆ ಇಬ್ಬರು ಆಟಗಾರರು ಪರಸ್ಪರ ವಾಗ್ವಾದಕ್ಕಿಳಿದಾಗ ಅಂಪೈರ್‌ಗಳು ನಾಯಕ ರೋಹಿತ್ ಶರ್ಮಾ ಮತ್ತು ಪೊಲಾರ್ಡ್ ಅವರೊಂದಿಗೆ ಮಾತನಾಡಿ ಇಬ್ಬರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕಿದರು.

ಮಿಚೆಲ್ ಸ್ಟಾರ್ಕ್ ಮತ್ತು ಕಿರಾನ್ ಪೊಲಾರ್ಡ್‌

ಮಿಚೆಲ್ ಸ್ಟಾರ್ಕ್ ಮತ್ತು ಕಿರಾನ್ ಪೊಲಾರ್ಡ್‌

ಈ ಘಟನೆಯನ್ನು ಐಪಿಎಲ್ ಇತಿಹಾಸದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಐಪಿಎಲ್ 2014 ರಲ್ಲಿ ವಾಂಖೆಡೆನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಕಿರಾನ್ ಪೊಲಾರ್ಡ್ ಪರಸ್ಪರ ವಾಗ್ವಾದ ನಡೆಸಿದರು. 17 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಪೊಲ್ಲಾರ್ಡ್ ಬೌನ್ಸ್‌ಗೆ ಹುಕ್ ಶಾಟ್ ಅನ್ನು ಸಂಪರ್ಕಿಸಲು ವಿಫಲವಾದಾಗ, ಸ್ಟಾರ್ಕ್ ಕೆಲವು ಮೌಖಿಕ ಸ್ಲೆಡ್ಜ್‌ಗಳನ್ನು ಪೊಲಾರ್ಡ್ಗೆ ಮಾಡಿದರು.

ಈ ವೇಳೆ ಪೊಲಾರ್ಡ್ ಯಾವುದೇ ವಾಗ್ವಾದಕ್ಕೆ ಇಳಿಯಲು ಬಯಸುವುದಿಲ್ಲ. ಆದರೆ ನಂತರದ ಎಸೆತದಲ್ಲಿ ಭಾರೀ ಘಟನೆಗೆ ಸಾಕ್ಷಿಯಾಯಿತು. ಸ್ಟಾರ್ಕ್ ತನ್ನ ಮುಂದಿನ ಚೆಂಡನ್ನು ಎಸೆಯಲು ಮುಂದಾದಾಗ ಪೊಲಾರ್ಡ್‌ ಪಿಚ್‌ನಿಂದ ದೂರ ಸರಿಯುತ್ತಾನೆ. ಆದಾಗೂ ಅದಾಗಲೇ ನಿರಾಶೆಗೊಂಡಿದ್ದ ಸ್ಟಾರ್ಕ್ ಚೆಂಡನ್ನು ಬ್ಯಾಟ್ಸ್‌ಮನ್ ಕಡೆಗೆ ಎಸೆದುಬಿಟ್ಟರು. ಇದರಿಂದ ಕೋಪಗೊಂಡ ಪೊಲಾರ್ಡ್ ಬ್ಯಾಟ್‌ ಅನ್ನು ಸ್ಟಾರ್ಕ್‌ನ ದಿಕ್ಕಿನಲ್ಲಿ ಎಸೆದರು. ಅದೃಷ್ಟವಶಾತ್ ಬ್ಯಾಟ್ ಅವನ ಕೈಯಿಂದ ಜಾರಿ ನೆಲಕ್ಕೆ ಬಿದ್ದಿತು.

ಹಾರ್ದಿಕ್ ಪಾಂಡ್ಯ ಮತ್ತು ಕ್ರಿಸ್ ಮೊರಿಸ್

ಹಾರ್ದಿಕ್ ಪಾಂಡ್ಯ ಮತ್ತು ಕ್ರಿಸ್ ಮೊರಿಸ್

ಕಳೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಈ ರೀತಿಯ ವಾಗ್ವಾದ ಕಂಡುಬಂದಿತು. ಆರ್‌ಸಿಬಿ ನೀಡಿದ 165ರನ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 19ನೇ ಓವರ್‌ನ 5ನೇ ಎಸೆತದಲ್ಲಿ ಕ್ರಿಸ್ ಮೋರಿಸ್ ಎಸೆತದಲ್ಲಿ ಬೀಸಿ ಹೊಡೆಯಲು ಯತ್ನಿಸಿ ವಿಫಲರಾದ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಕ್ರಿಸ್ ಮೋರಿಸ್ ಪಾಂಡ್ಯಗೆ ಆಕ್ರೋಶದಿಂದ ಸೆಂಡ್ ಆಫ್ ನೀಡಿದ್ದರು. ಇದು ಸ್ಫೋಟಕ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯರನ್ನು ಕೋಪಗೊಳ್ಳುವಂತೆ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಆಟಗಾರರು ತಮ್ಮ ವಿರುದ್ಧದ ಆರೋಪವನ್ನು ಒಪ್ಪಿಕೊಂಡಿದ್ದಾರೆ.

Story first published: Friday, October 30, 2020, 10:02 [IST]
Other articles published on Oct 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X