ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ10 ಕ್ರಿಕೆಟ್‌ ಲೀಗ್‌ನಲ್ಲಿ ಕಣಕ್ಕಿಳಿಯಲು ಸಜ್ಜಾದ ದಿಗ್ಗಜ ಆಟಗಾರರು

Abu Dhabi t10 League 2019

ಅಬುದಾಭಿ, ಆಗಸ್ಟ್‌ 07: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಹಂಗಾಮದ ಬಳಿಕ ಇದೀಗ ಟಿ10 ಕ್ರಿಕೆಟ್‌ ಲೀಗ್‌ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗುತ್ತಿದ್ದು, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಅಬು ಧಾಬಿಯಲ್ಲಿ ನವೆಂಬರ್‌ 15-24ರವರೆಗೆ ನಡೆಯಲಿರುವ ಟಿ10 ಲೀಗ್‌ಗೆ ಜಾಗತಿಕ ಕ್ರಿಕೆಟ್‌ನ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ.

ಅಂದಹಾಗೆ ಅಬುಧಾಬಿಯ ಶೇಕ್‌ ಝಾಯೆದ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಮೂರನೇ ಆವೃತ್ತಿ ಇದಾಗಿದ್ದು, ಈ ಬಾರಿ ಟಿ10 ಕಣದಲ್ಲಿ ಘಟನುಘಟಿ ಆಟಗಾರರೇ ಕಣಕ್ಕಿಳಿಯಲಿದ್ದಾರೆ.

ರಿಷಭ್‌ ಪಂತ್‌ ಸಾಮರ್ಥ್ಯದ ಬಗ್ಗೆ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿರಿಷಭ್‌ ಪಂತ್‌ ಸಾಮರ್ಥ್ಯದ ಬಗ್ಗೆ ಮಾತನಾಡಿದ ಕ್ಯಾಪ್ಟನ್‌ ಕೊಹ್ಲಿ

ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಐಯಾನ್‌ ಮಾರ್ಗನ್‌, ಪಾಕಿಸ್ತಾನದ ಮಾಜಿ ಆಲ್‌ರೌಂಡರ್‌ ಶೊಯೇಬ್‌ ಮಲಿಕ್‌, ಡರೆನ್‌ ಸಾಮಿ, ಏಂಜಲೊ ಮ್ಯಾಥ್ಯೂಸ್‌, ಲಸಿತ್‌ ಮಾಲಿಂಗ, ಶೇನ್‌ ವ್ಯಾಟ್ಸನ್‌ ಹಾಗೂ ಕ್ಯಾಮರೂನ್‌ ವೈಟ್‌ ಸದ್ಯ ಟಿ10 ಲೀಗ್‌ನಲ್ಲಿ ಆಡಲು ಸಜ್ಜಾಗಿರುವ ದೈತ್ಯ ಪ್ರತಿಭೆಗಳಾಗಿದ್ದಾರೆ. ಇದೇ ವೇಳೆ ಮೊಹಮ್ಮದ್‌ ಶೆಹ್ಜಾದ್‌, ಆಂಡ್ರೆ ರಸೆಲ್‌, ಕೈರೊನ್‌ ಪೊಲಾರ್ಡ್‌ ಹಾಗೂ ಡ್ವೇನ್‌ ಬ್ರಾವೋ ಕೂಡ ಪಾಲ್ಗೊಲ್ಳುವ ನಿರೀಕ್ಷೆಯಿದೆ.

ಭಾರತೀಯ ಕ್ರಿಕೆಟ್ಟನ್ನು ದೇವರೇ ಕಾಪಾಡಬೇಕು ಎಂದ ಸೌರವ್‌ ಗಂಗೂಲಿ!

ಟಿ10 ಲೀಗ್‌ನಲ್ಲಿ ಆಡುವ ಕುರಿತಾಗಿ ಮಾತನಾಡಿರುವ ಮಾರ್ಗನ್‌, "ಟಿ10 ಕ್ರಿಕೆಟ್‌ ಲೀಗ್‌ ಮಕ್ಕಳಿಗೆ ಅಚ್ಚುಮೆಚ್ಚಿನದ್ದಾಗಲಿದೆ. ಕ್ರೀಡಾಂಗಣಕ್ಕೆ ಬಂದು ಸ್ಟಾರ್‌ ಆಟಗಾರರ ಪ್ರದರ್ಶನ ವೀಕ್ಷಿಸುವುದು ಸಾಧ್ಯವಾಗುತ್ತದೆ. ಎಲ್ಲ ರೀತಿಯ ಮನರಂಜನೆಯನ್ನು ಈ ಲೀಗ್‌ ಮೂಲಕ ನಿರೀಕ್ಷಿಸಬಹುದಾಗಿದೆ," ಎಂದಿದ್ದಾರೆ.

ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿದ ರಾಹುಲ್‌ ದ್ರಾವಿಡ್‌!ಹಿತಾಸಕ್ತಿ ಸಂಘರ್ಷದ ಸುಳಿಗೆ ಸಿಲುಕಿದ ರಾಹುಲ್‌ ದ್ರಾವಿಡ್‌!

ಇದೇ ವೇಳೆ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಡರೆನ್‌ ಸಾಮಿ ಕೂಡ ಮಾತನಾಡಿದ್ದು, "ಟಿ10 ಲೀಗ್‌ ಆಯೋಜನೆಗೆ ಅಬುಧಾಬಿ ಹೇಳಿಮಾಡಿಸಿದ ಸ್ಥಳವಾಗಿದೆ. ಕ್ರಿಕೆಟ್‌ಗೆ ಇಲ್ಲಿ ಅಪಾರವಾದ ಬೆಂಬಲವಿದೆ. ಎಲ್ಲವೂ ಅತ್ಯುನ್ನತ ಗುಣಮಟ್ಟವನ್ನು ಹೊಂದಿದೆ. ಅಬುಧಾಬಿ ಟಿ20 ಲೀಗ್‌ ಯಶಸ್ವಿಯಾಗುತ್ತದೆ ಎಂಬುದರಲ್ಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ," ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಕೇವಲ 90 ನಿಮಿಷಗಳ ಪಂದ್ಯದಲ್ಲಿ ಪ್ರತಿ ತಂಡಕ್ಕೆ 60 ಎಸೆತಗಳು ಮಾತ್ರವೇ ಲಭ್ಯವಾಗುವುದರಿಂದ ಸಂಪೂರ್ಣ ಮನರಂಜನೆಯ ಪ್ಯಾಕೇಜ್‌ ಎನಿಸಿಕೊಂಡಿರುವ ಟಿ10 ಲೀಗ್‌, ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್‌ ಗಂಭೀರ್‌ ಖಡಕ್‌ ಉತ್ತರಕಾಶ್ಮೀರ ವಿಚಾರದಲ್ಲಿ ಕೆಣಕಿದ ಅಫ್ರಿದಿಗೆ ಗೌತಮ್‌ ಗಂಭೀರ್‌ ಖಡಕ್‌ ಉತ್ತರ

2017ರ ಆವೃತ್ತಿಯನ್ನು ಶಾರ್ಜಾ ಕ್ರೀಡಾಂಗಣದಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ನಡೆಸಲಾಗಿತ್ತು. ಎರಡನೇ ಲೀಗ್‌ ಹೊತ್ತಿಗಾಗಲೇ ಎರಡು ಹೆಚ್ಚುವರಿ ಫ್ರಾಂಚೈಸಿಗಳ ಸೇರ್ಪಡೆಯಾಗಿ 10 ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು.

Story first published: Wednesday, August 7, 2019, 18:12 [IST]
Other articles published on Aug 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X