ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

Top five 5 batsmen who holds the fastest 10,000 ODI runs record

ಬೆಂಗಳೂರು: ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಸುದೀರ್ಘ ಇತಿಹಾಸವಿದೆ. ಇಲ್ಲಿ ಮಿನುಗಿದ ಅನೇಕ ದಂತಕತೆಗಳಿದ್ದಾರೆ. ಹೊಸ ಮಿನುಗುತಾರೆಯರೂ ಕಾಣಿಸಿಕೊಳ್ಳುತ್ತಿದ್ದಾರೆ. ಎಣಿಸುತ್ತಾ ಕೂತರೆ ಹನುಮನ ಬಾಲದ ರೀತೀಲಿ ಬೆಳೆಯುತ್ತಾ ಹೋಗುವ ಬಹಳಷ್ಟು ದಾಖಲೆಗಳು ಏಕದಿನದಲ್ಲಿ ಸೃಷ್ಟಿಯಾಗಿವೆ. ಇದರಲ್ಲಿ ಕೆಲವೊಂದು ದಾಖಲೆಗಳನ್ನು ಎಷ್ಟೇ ವರ್ಷಗಳು ಕಳೆದರೂ ಯಾರಿಂದಲೂ ಮುರಿಯಲಾಗಿಲ್ಲ. ಇನ್ನು ಕೆಲವು ದಾಖಲೆಗಳನ್ನು ಪ್ರತಿಭಾನ್ವಿಯ ಆಟಗಾರರು ಸರಿಗಟ್ಟುತ್ತಾ ಬರುತ್ತಿದ್ದಾರೆ.

ಮದುವೆಗೂ ಮೊದಲೇ ಅಪ್ಪನಾದ ಹಾರ್ದಿಕ್: ತಮಾಷೆಯ ಮೀಮ್ಸ್‌ ಇಲ್ಲಿವೆ

ಏಕದಿನ ಕ್ರಿಕೆಟ್‌ನಲ್ಲಿ 5 ಸಾವಿರ, 10 ಸಾವಿರ ರನ್ ಗಳಿಸುವ ಬ್ಯಾಟ್ಸ್‌ಮನ್‌ಗಳು ವಿಶೇಷವಾಗಿ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮೆರೆಯುವ ಬ್ಯಾಟ್ಸ್‌ಮನ್‌ಗಳು ಹೆಚ್ಚು ಗಮನ ಸೆಳೆಯುತ್ತಾರೆ.

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

ಒಡಿಐನಲ್ಲಿ ಅತೀ ವೇಗವಾಗಿ 10,000 ರನ್ ಮೈಲಿಗಲ್ಲು ಸ್ಥಾಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ. ಭಾರತೀಯ ಬ್ಯಾಟ್ಸ್‌ಮನ್‌ಗಳು ಇಲ್ಲಿ ಪಾರಮ್ಯ ಮೆರೆದಿದ್ದಾರೆ.

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ನಾಯಕ, ರನ್ ಮೆಷೀನ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಏಕದಿನದಲ್ಲಿ ಅತೀವೇಗವಾಗಿ 10000 ರನ್ ಬಾರಿಸಿದ ವಿಶ್ವ ದಾಖಲೆ ಹೊಂದಿದ್ದಾರೆ. ಈ ದಾಖಲೆ ಮೊದಲು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಆದರೆ ಕೇವಲ 205 ಇನ್ನಿಂಗ್ಸ್‌ಗಳಲ್ಲಿ 10 ಸಾವಿರ ರನ್ ಗಳಿಸಿದ ಕೊಹ್ಲಿ ಸಚಿನ್ ದಾಖಲೆ ಸರಿಗಟ್ಟಿದ್ದರು. 2018ರಲ್ಲಿ ಅಕ್ಟೋಬರ್‌ 24ರಂದು ವಿಶಾಖಪಟ್ಟಣದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಈ ಮೈಲಿಗಲ್ಲು ಸ್ಥಾಪಿಸಿದ್ದರು. ಈ ದಾಖಲೆಗಾಗಿ ಕೊಹ್ಲಿ 10 ವರ್ಷ 67 ದಿನಗಳನ್ನು ವ್ಯಯಿಸಿದ್ದರು. ಒಟ್ಟಾರೆ ಕೊಹ್ಲಿ 59.33ರ ಸರಾಸರಿಯಲ್ಲಿ 11,867 ರನ್ ಗಳಿಸಿದ್ದಾರೆ. ಇದರಲ್ಲಿ 43 ಶತಕಗಳು ಸೇರಿವೆ.

2 ಸಚಿನ್ ತೆಂಡೂಲ್ಕರ್

2 ಸಚಿನ್ ತೆಂಡೂಲ್ಕರ್

'ಕ್ರಿಕೆಟ್‌ ದೇವರು' ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಈಗಲೂ ಅನೇಕ ದಾಖಲೆಗಳಿವೆ. ಏಕದಿನದಲ್ಲಿ 10000 ರನ್‌ಗಾಗಿ ಸಚಿನ್ 259 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ಇಂದೋರ್‌ನಲ್ಲಿ 2001ರ ಮಾರ್ಚ್ 31ರಂದು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಚಿನ್ ಈ ದಾಖಲೆ ನಿರ್ಮಿಸಿದ್ದರು. ಈ ದಾಖಲೆಗಾಗಿ ಸಚಿನ್ 11 ವರ್ಷ, 103 ದಿನಗಳನ್ನು ಬಳಸಿಕೊಂಡಿದ್ದರು. ಒಟ್ಟಾರೆ ಸಚಿನ್ ಏಕದಿನದಲ್ಲಿ 18,426 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕಗಳು, 96 ಅರ್ಧ ಶತಕಗಳು ಸೇರಿವೆ.

3. ಸೌರವ್ ಗಂಗೂಲಿ

3. ಸೌರವ್ ಗಂಗೂಲಿ

ಬಂಗಾಳ ಹುಲಿ ಖ್ಯಾತಿಯ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 263 ಇನ್ನಿಂಗ್ಸ್‌ಗಳಲ್ಲಿ ಏಕದಿನ 10,000 ರನ್ ಬಾರಿಸಿದ್ದಾರೆ. ತನ್ನ 15 ವರ್ಷಗಳ ವೃತ್ತಿ ಬದುಕಿನಲ್ಲಿ, 13 ವರ್ಷ 204 ದಿನಗಳನ್ನು ಬಳಸಿ ದಾದಾ ಏಕದಿನ 10 ಸಾವಿರ ರನ್ ದಾಖಲೆ ಪೂರೈಸಿದ್ದರು. 2005ರಲ್ಲಿ ಶ್ರೀಲಂಕಾದ ದಂಬುಲ್ಲದಲ್ಲಿ ಲಂಕಾ ವಿರುದ್ಧ ಈ ದಾಖಲೆ ಮಾಡಿದ್ದರು. ಒಟ್ಟು 311 ಏಕದಿನ ಇನ್ನಿಂಗ್ಸ್‌ಗಳನ್ನಾಡಿರುವ ಗಂಗೂಲಿ, 41.02ರ ಸರಾಸರಿಯಲ್ಲಿ 11,363 ರನ್ ಬಾರಿಸಿದ್ದಾರೆ.

4. ರಿಕಿ ಪಾಂಟಿಂಗ್

4. ರಿಕಿ ಪಾಂಟಿಂಗ್

ಆಸ್ಟ್ರೇಲಿಯಾದ ಆಲ್ ಟೈಮ್ ಬೆಸ್ಟ್ ಬ್ಯಾಟ್ಸ್‌ಮನ್, ಮಾಜಿ ನಾಯಕ ರಿಕಿ ಪಾಂಟಿಂಗ್, ಏಕದಿನದಲ್ಲಿ ಅತೀ ವೇಗದ 10000 ರನ್ ದಾಖಲೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಒಟ್ಟು 266 ಇನ್ನಿಂಗ್ಸ್‌ಗಳಲ್ಲಿ ಪಾಂಟಿಂಗ್ ಈ ಸಾಧನೆ ಮೆರೆದಿದ್ದಾರೆ. ಪಾಂಟಿಂಗ್‌ ಒಟ್ಟಿಗೆ 16 ವರ್ಷಗಳ ಕಾಲ ಏಕದಿನ ವೇತ್ತಿ ಜೀವನ ಕಳೆದಿದ್ದಾರೆ. 12 ವರ್ಷ 37 ದಿನಗಳಲ್ಲಿ ಪಾಂಟಿಂಗ್ ಒಡಿಐ 10 ಸಾವಿರ ಮೈಲಿಗಲ್ಲು ತಲುಪಿದರು. ದಕ್ಷಿಣ ಆಫ್ರಿಕಾ ವಿರುದ್ಧ ಬಾಸ್ಸೆಟೆರೆಯಲ್ಲಿ 2007ರಲ್ಲಿ ನಡೆದಿದ್ದ ಪಂದ್ಯದಲ್ಲಿ ರಿಕಿ ಈ ದಾಖಲೆ ಬರೆದಿದ್ದರು. ಒಟ್ಟಿಗೆ 375 ಏಕದಿನ ಪಂದ್ಯಗಳಲ್ಲಿ ರಿಕಿ 13,704 ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕಗಳು ಸೇರಿವೆ.

5. ಜಾಕ್ ಕ್ಯಾಲೀಸ್

5. ಜಾಕ್ ಕ್ಯಾಲೀಸ್

ದಕ್ಷಿಣ ಆಫ್ರಿಕಾದ ದಂತಕತೆ ಜಾಕ್‌ ಕ್ಯಾಲೀಸ್ ಒಟ್ಟು 18 ವರ್ಷ ಏಕದಿನ ವೃತ್ತಿ ಬದುಕು ಕಂಡಿದ್ದಾರೆ. 272 ಇನ್ನಿಂಗ್ಸ್‌ಗಳಲ್ಲಿ ಕ್ಯಾಲೀಸ್ 10000 ರನ್ ಪೂರೈಸಿಕೊಂಡಿದ್ದಾರೆ. ಇದಕ್ಕಾಗಿ 13 ವರ್ಷ 14 ದಿನಗಳನ್ನು ಕ್ಯಾಲೀಸ್ ಬಳಸಿಕೊಂಡಿದ್ದಾರೆ. 2009ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಾಕ್ ಈ ದಾಖಲೆ ಬರೆದಿದ್ದರು. ಆಫ್ರಿಕಾ ಆಲ್ ರೌಂಡರ್ ಕ್ಯಾಲೀಸ್, ಏಕದಿನದಲ್ಲಿ 11,579 ರನ್, 273 ವಿಕೆಟ್ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, June 2, 2020, 11:08 [IST]
Other articles published on Jun 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more