ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳು

Top five batsmen with most World Cup fifties

ಬೆಂಗಳೂರು, ಮೇ 20: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿದೆ. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಕ್ರಿಕೆಟ್‌ ವಿಶ್ವ ಸಮರವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಇನ್ನು ಜಾಗತಿಕ ಕ್ರಿಕೆಟ್‌ನ ಮುಂಚೂಣಿಯ ಆಟಗಾರರು ಕೂಡ ಕ್ರಿಕೆಟ್‌ ಆಟದ ಬಹುದೊಡ್ಡ ವೇದಿಕೆಯಲ್ಲಿ ಮಿಂಚುವ ತುಡಿತ ಹೊಂದಿರುತ್ತಾರೆ. ಈ ಹಿಂದೆಯೂ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ವಿಶ್ವಕಪ್‌ ಅಖಾಡದಲ್ಲಿ ತಮ್ಮ ಖದರ್‌ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಅಂದಹಾಗೆ ಈ ಹಿಂದಿನ ಹನ್ನೊಂದು ಆವೃತ್ತಿಗಳ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿರುವ ಬ್ಯಾಟ್ಸ್‌ಮನ್‌ಗಳ ವಿವರವನ್ನು ಇಲ್ಲಿ ನೀಡಲಾಗಿದೆ. ವಿಶ್ವಕಪ್‌ ಅಂಗಣದಲ್ಲಿ ಬೌಲರ್‌ಗಳನ್ನು ಬೆಂಡೆತ್ತಿ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದು ರನ್‌ ಹೊಳೆಯನ್ನೇ ಹರಿಸಿರುವ ಬ್ಯಾಟ್ಸ್‌ಮನ್‌ಗಳಿವರು.

ಸಚಿನ್‌ ತೆಂಡೂಲ್ಕರ್‌ (15)

ಏಕದಿನ ವಿಶ್ವಕಪ್‌ ಎಂದಾಕ್ಷಣ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್‌ ಅಭಿಮಾನಿ ಮೊದಲು ನೆನೆಯುವುದು ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರನ್ನು. ಲಿಟ್ಲ್ ಮಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡೂಲ್ಕರ್‌ 1992ರಿಂದ 2011ರವರೆಗೆ ಒಟ್ಟಾರೆ 6 ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಒಟ್ಟು 45 ಪಂದ್ಯಗಳನ್ನು ಆಡಿರುವ ಅವರು ಅತಿ ಹೆಚ್ಚು (15) ಅರ್ಧಶತಕಗಳನ್ನು ದಾಖಲಿಸಿದ ವಿಶ್ವ ದಾಖಲೆ ಹೊಂದಿದ್ದಾರೆ. ವಿಶ್ವಕಪ್‌ನಲ್ಲಿ ಸಚಿನ್‌ ದಾಖಲಿಸಿರುವ ಒಟ್ಟು 15 ಅರ್ಧಶತಕಗಳು 10 ರಾಷ್ಟ್ರಗಳ ಎದುರು ಮೂಡಿಬಂದಿವೆ. ಅದರಲ್ಲೂ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್‌ನಲ್ಲಿ ಸೆಂಚೂರಿಯನ್‌ನಲ್ಲಿ ಪಾಕಿಸ್ತಾನ ವಿರುದ್ಧ ಸಚಿನ್‌ ಸಿಡಿಸಿದ ಅರ್ಧಶತಕ (98) ಅವಿಸ್ಮರಣೀಯ. ಇನ್ನು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ದಾಖಲೆಯೂ ಸಚಿನ್‌ ಅವರದ್ದು. 44 ಇನಿಂಗ್ಸ್‌ಗಳಲ್ಲಿ ಅವರು 56+ರ ಸರಾಸರಿಯಲ್ಲಿ 2278 ರನ್‌ಗಳನ್ನು ಚಚ್ಚಿದ್ದಾರೆ. ಸಚಿನ್‌, ಪಾಕಿಸ್ತಾನ ವಿರುದ್ಧ 3, ಆಸ್ಟ್ರೇಲಿಯಾ, ಶ್ರೀಲಂಕಾ ಮತ್ತು ಜಿಂಬಾಬ್ವೆ ಎದುರು ತಲಾ 2 ಹಾಗೂ ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ನೆದರ್ಲೆಂಡ್ಸ್‌, ಇಂಗ್ಲೆಂಡ್‌, ಕೀನ್ಯಾ ಮತ್ತು ಬರ್ಮುಡಾ ವಿರುದ್ಧ ತಲಾ ಒಂದು ಅರ್ಧಶತಕ ದಾಖಲಿಸಿದ್ದಾರೆ. ವಿಶ್ವಕಪ್‌ನಲ್ಲಿ ಸಚಿನ್‌ ಸಿಡಿಸಿರುವ 6 ಶತಕಗಳು ಕೂಡ ವಿಶ್ವ ದಾಖಲೆಯಾಗಿದೆ.

 ಜಾಕ್‌ ಕಾಲಿಸ್‌ (09)

ಜಾಕ್‌ ಕಾಲಿಸ್‌ (09)

ಕ್ರಿಕೆಟ್‌ ಜಗತ್ತು ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಕ್‌ ಕಾಲಿಸ್‌ ಕೂಡ ಒಬ್ಬರು. ದಕ್ಷಿಣ ಆಫ್ರಿಕಾ ತಂಡದ ಪರ ಬರೋಬ್ಬರಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಾಲಿಸ್‌, ದಕ್ಷಿಣ ಆಫ್ರಿಕಾ ಪರ 1996ರಿಂದ 2011ರವರೆಗೆ 5 ವಿಶ್ವಕಪ್‌ ಟೂರ್ನಿಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು ಆಡಿದ 36 ಪಂದ್ಯಗಳಲ್ಲಿ 9 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಐದು ಆವೃತ್ತಿಗಳಲ್ಲಿ ಒಟ್ಟು 21 ವಿಕೆಟ್‌ಗಳನ್ನು ಉರುಳಿಸಿದ ಕೀರ್ತಿಯೂ ಅವರದ್ದು. ಕಾಲಿಸ್‌ ಭಾರತದ ವಿರುದ್ಧ ಎರಡು, ಪಾಕಿಸ್ತಾನ, ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ವಿರುದ್ಧ ತಲಾ ಒಂದು ಅರ್ಧಶತಕ ಸಿಡಿಸಿದ್ದಾರೆ.

ಗ್ರಹಾಮ್‌ ಗೂಚ್‌ (08)

ಗ್ರಹಾಮ್‌ ಗೂಚ್‌ (08)

ಆ ಕಾಲದಲ್ಲಿ ಜಾಗತಿಕ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಆಗಿದ್ದ ಇಂಗ್ಲೆಡ್‌ ತಂಡದ ಗ್ರಹಾಮ್‌ ಗೂಚ್‌, ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ದಾಖಲಿಸಿದವರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‌ನಲ್ಲಿ ಆಡಿರುವ 21 ಪಂದ್ಯಗಳಲ್ಲಿ ಗೂಚ್‌ ಒಟ್ಟು 8 ಅರ್ಧಶತಕಗಳನ್ನು ಗಳಿಸಿದ್ದಾರೆ. 1979, 1987 ಮತ್ತು 1992ರ ವಿಶ್ವಕಪ್‌ನಲ್ಲಿ ಆಡಿರುವ ಗೂಚ್‌ 44.85ರ ಸರಾಸರಿಯಲ್ಲಿ ಒಟ್ಟು 897 ರನ್‌ಗಳನ್ನೂ ದಾಖಲಿಸಿದ್ದಾರೆ. ಇನ್ನು ಭಾರತದಲ್ಲಿ ನಡೆದ 1987ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧವೇ ಶತಕ (115) ದಾಖಲಿಸಿದ್ದರು. ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ವಿರುದ್ಧ ತಲಾ ಎರಡು ಮತ್ತು ಭಾರತ ಹಾಗೂ ನ್ಯೂಜಿಲೆಂಡ್‌ ಎದುರು ತಲಾ ಒಂದು ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಮಾರ್ಟಿನ್‌ ಕ್ರೋವ್‌ (08)

ಮಾರ್ಟಿನ್‌ ಕ್ರೋವ್‌ (08)

ನ್ಯೂಜಿಲೆಂಡ್‌ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿರುವ ಮಾರ್ಟೊನ್‌ ಕ್ರೋವ್, 2016ರಲ್ಲಿ ಕ್ಯಾನ್ಸರ್‌ ಖಾಯಿಲೆಯಿಂದಾಗಿ ಕೊನೆಯುಸಿರೆಳೆದರು. ಕ್ರೋವ್‌ 1983, 1987 ಮತ್ತು 1992ರ ವಿಶ್ವಕಪ್‌ ಟೂರ್ನಿಗಳಲ್ಲಿ ಕಿವೀಸ್‌ ಪರ ಆಡಿದ್ದಾರೆ. ಅದರಲ್ಲೂ 1992ರ ವಿಶ್ವಕಪ್‌ನಲ್ಲಿ ಕ್ರೋವ್‌ ಅವರ ಕೆಚ್ಚೆದೆಯ ಪ್ರದರ್ಶನವನ್ನು ಈಗಲೂ ಸ್ಮರಿಸಲಾಗುತ್ತದೆ. 1992ರ ವಿಶ್ವಕಪ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕ್ರೋಚ್‌ 448 ರನ್‌ಗಳನ್ನು ಬಾರಿಸಿದ್ದರು. ಅವರ ಈ ಭರ್ಜರಿ ಪ್ರದರ್ಶನದಿಂದ ಕಿವೀಸ್‌ ತಂಡ ಸೆಮಿಫೈನಲ್‌ ತಲುಪಿತ್ತಾದರೂ, ಟೂರ್ನಿಯ ಚಾಂಫಿಯನ್ಸ್‌ ಪಾಕಿಸ್ತಾನ ವಿರುದ್ಧ ನಿರಾಸೆ ಅನುಭವಿಸಿತ್ತು. ಆದರೂ ಕ್ರೋವ್‌ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಅಂದಹಾಗೆ ಆಡಿದ ಮೂರು ವಿಶ್ವಕಪ್‌ಗಳಲ್ಲಿ ಕ್ರೋವ್‌ ಒಟ್ಟು 8 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ಜಿಂಬಾಬ್ವೆ ವಿರುದ್ಧ ಮೂರು, ಇಂಗ್ಲೆಂಡ್‌ ವಿರುದ್ಧ ಎರಡು ಮತ್ತು ಪಾಕಿಸ್ತಾನ, ಭಾರತ ಮತ್ತು ಆಸ್ಟ್ರೇಲಿಯಾ ಎದುರು ತಲಾ ಒಂದು ಶರ್ಧಶತಕ ದಾಖಲಿಸಿದ್ದಾರೆ.

ಹರ್ಷಲ್‌ ಗಿಬ್ಸ್‌ (08)

ಹರ್ಷಲ್‌ ಗಿಬ್ಸ್‌ (08)

ದಕ್ಷಿಣ ಆಫ್ರಿಕಾ ತಂಡ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹರ್ಷಲ್‌ ಗಿಬ್ಸ್‌ ತಮ್ಮ ಸ್ಫೋಕ ಬ್ಯಾಟಿಂಗ್‌ಗೆ ಹೆಸರುವಾಸಿಯಾದವರು. ಪಂದ್ಯದಲ್ಲಿ ಎಷ್ಟೇ ಒತ್ತಡವಿರಲಿ ಗಿಬ್ಸ್‌ ಅವರ ಆಟದಲ್ಲಿ ಕಿಂಚಿತ್ತೂ ಬದಲಾವಣೆ ಇರುತ್ತಿರಲಿಲ್ಲ. 1999, 2003 ಮತ್ತು 2007ರ ವಿಶ್ವಕಪ್‌ನಲ್ಲಿ ಹರಿಣ ಪಡೆಯ ಪರ ಆಡಿರುವ ಹರ್ಷಲ್‌ ಗಿಬ್ಸ್‌, ಆಡಿದ 25 ಪಂದ್ಯಗಳಿಂದ 56+ ಸರಾಸರಿಯಲ್ಲಿ 1076 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 8 ಅರ್ಧಶಕಗಳು ಸೇರಿವೆ. 2010ರಲ್ಲಿ ಗಿಬ್ಸ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

* ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಕೀನ್ಯಾದ ಸ್ಟೀವ್‌ ಟಿಕಾಲೊ, ಭಾರತದ ಮಾಜಿ ನಾಯಕ ಮೊಹಮ್ಮದ್‌ ಅಝರುದ್ದೀನ್‌, ಆಸ್ಟ್ರೇಲಿಯಾದ ಆಡಮ್‌ ಗಿಲ್‌ಕ್ರಿಸ್ಟ್‌ ಮತ್ತು ಜಾವೇದ್‌ ಮಿಯಾಂದಾದ್‌ ಕೂಡ ವಿಶ್ವಕಪ್‌ ಟೂರ್ನಿಗಳಲ್ಲಿ ಒಟ್ಟು 8 ಅರ್ಧಶತಕಗಳನ್ನು ಗಳಿಸಿದ್ದಾರೆ.

Story first published: Tuesday, May 21, 2019, 14:21 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X