ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಅಚ್ಚರಿ ಮೂಡಿಸಿದ ಐದು ಸಂಗತಿಗಳು

Top Five Surprising Things at the IPL 2021 Auction

ಐಪಿಎಲ್ 2021ರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಯಾವ ಆಟಗಾರ ಯಾವ ತಂಡಕ್ಕೆ ಹರಾಜಾಗಬಹುದು? ಎಷ್ಟು ಮೊತ್ತವನ್ನು ಜೇಬಿಗಿಳಿಸಬಹುದು? ಯಾರು ಅತಿ ಹೆಚ್ಚಿನ ಮೊತ್ತಕ್ಕೆ ಹರಾಜಾಗಬಹುದು ಎಂಬ ಕುತೂಹಲ ಮೂಡಿಸಿದ್ದ ಸಂಗತಿಗಳಿಗೆ ಈಗ ಸ್ಪಷ್ಟ ಉತ್ತರ ದೊರೆತಿದೆ. ಹೀಗಾಗಿ ಮುಂದೆ ನಡೆಯುವ ಟೂರ್ನಿಯತ್ತ ಈಗ ಐಪಿಎಲ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಈ ಮಧ್ಯೆ ಈ ಬಾರಿಯ ಐಪಿಎಲ್‌ನಲ್ಲಿಯೂ ಕೆಲ ಅಚ್ಚರಿಯ ಹರಾಜುಗಳು ನಡೆದಿದೆ. ಕೆಲ ಆಟಗಾರರು ನಿರೀಕ್ಷೆಯನ್ನು ಮೀರಿ ಹರಾಜಾಗುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನೂ ಕೆಲ ಆಟಗಾರರು ಹರಾಜಾಗದೆ ಉಳಿದು ಆಶ್ಚರ್ಯ ಮೂಡಿಸಿದ್ದಾರೆ. ಕೆಲ ಆಟಗಾರರು ಬೃಹತ್ ಮೊತ್ತಕ್ಕೆ ಹರಾಜಾಗಬಹುದು ಎಂದು ನಿರೀಕ್ಷಿಸಿದ್ದರೆ ಅವರು ಸಾಮಾನ್ಯ ಮೊತ್ತಕ್ಕೆ ಹರಾಜಾಗಿದ್ದಾರೆ. ಹರಾಜಾಗದೆ ಉಳಿಯಬಹುದು ಎಂದುಕೊಂಡಿದ್ದ ಆಟಗಾರರು ಹರಾಜಾಗುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ.

ಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕ

ಹಾಗಾದರೆ ಈ ಬಾರಿಯ ಐಪಿಎಲ್‌ನಲ್ಲಿನ ಕೆಲ ಪ್ರಮುಖ ಅಚ್ಚರಿಗಳನ್ನು ನೋಡೋಣ..

14.25 ಕೋಟಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹರಾಜು

14.25 ಕೋಟಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹರಾಜು

ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಐಪಿಎಲ್ ವಿಚಾರಕ್ಕೆ ಬಂದರೆ ಮ್ಯಾಕ್ಸ್‌ವೆಲ್ ತೀರಾ ಕಳಪೆ ಪ್ರದರ್ಶನದ ಮೂಲಕವೇ ಹೆಸರಾಗಿದ್ದಾರೆ. ಅದರಲ್ಲೂ ಕಳೆದ ಬಾರಿಯ ಐಪಿಎಲ್‌ನಲ್ಲಿ ನೀಡಿದ ಆಘಾತಕಾರಿ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಪಡಿಸಿತ್ತು. ಹೀಗಾಘಿ ಈ ಬಾರಿಯ ಐಪಿಎಲ್‌ಗೆ ಮುನ್ನ ಪಂಜಾಬ್ ತಂಡ ಹರಾಜಿಗೆ ಬಿಟ್ಟುಕೊಟ್ಟಿತ್ತು. ಆದರೆ ಮಿನಿ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ತಂಡ 14.25 ಕೋಟಿ ಬೃಹತ್ ಮೊತ್ತವನ್ನು ನೀಡಿ ಖರೀದಿಸಿದೆ.

1.5 ಕೋಟಿಗೆ ಹರಾಜಾದ ಟಿ20 ನಂಬರ್ 1 ಬ್ಯಾಟ್ಸ್‌ಮನ್

1.5 ಕೋಟಿಗೆ ಹರಾಜಾದ ಟಿ20 ನಂಬರ್ 1 ಬ್ಯಾಟ್ಸ್‌ಮನ್

ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಆಟಗಾರ ಡೇವಿಡ್ ಮಲನ್ ಈ ಬಾರಿಯ ಹರಾಜಿಗೂ ಮುನ್ನ ಒಂದಷ್ಟು ಕುತೂಹಲವನ್ನು ಕೆರಳಿಸಿದ್ದರು. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಉಂಟು ಮಾಡಿರುವ ಈ ಆಟಗಾರನನ್ನು ಕೊಂಡುಕೊಳ್ಳಲು ಭಾರೀ ಪೈಪೋಟಿ ನಡೆಯಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಪಂಜಾಬ್ ಕಿಂಗ್ಸ್ ಈ ಆಟಗಾರನನ್ನು ಯಾವುದೇ ಪೈಪೋಟಿ ಇಲ್ಲದೆ ಮೂಲಬೆಲೆಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

7 ವರ್ಷಗಳ ನಂತರ ಹರಾಜಾದ ಪೂಜಾರ

7 ವರ್ಷಗಳ ನಂತರ ಹರಾಜಾದ ಪೂಜಾರ

ಟೀಮ್ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಕಳೆದ 7 ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದುಕೊಂಡಿದ್ದಾರೆ. 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಕಣಕ್ಕಿಳಿದಿದ್ದ ಪೂಜಾರ 6 ಪಂದ್ಯಗಳಲ್ಲಿ ಆಡಿದ್ದರು. ಆದರೆ ಅದಾದ ನಂತರ ಮುಂದಿನ ಎಲ್ಲಾ ಹರಾಜಿನಲ್ಲಿಯೂ ಪೂಜಾರ ಹರಾಜಾಗದೆ ಉಳಿದುಕೊಂಡಿದ್ದರು. ಆದರೆ ಏಳುವರ್ಷಗಳ ಸುದೀರ್ಘ ಕಾಲದ ನಂತರ ಪೂಜಾರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ.

ಹರಾಜಾಗದೆ ಉಳಿದ ಆರೋನ್ ಫಿಂಚ್

ಹರಾಜಾಗದೆ ಉಳಿದ ಆರೋನ್ ಫಿಂಚ್

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ನಾಯಕನಾಗಿರುವ ಆರೋನ್ ಫಿಂಚ್ ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ ಕೇಳೋರೆ ಇಲ್ಲ. ಕಳೆದ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪಾಲಾಗಿದ್ದ ಆರೋನ್ ಫಿಂಚ್ ನಿರೀಕ್ಷಿತ ಪ್ರದರ್ಶನ ನಿಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಈ ಬಾರಿ ಅವರತ್ತ ಯಾವುದೇ ತಂಡ ಗಮನ ಹರಿಸಿಲ್ಲ. ಹೀಗಾಗಿ ಬಲಿಷ್ಠ ಅಂತಾರಾಷ್ಟ್ರೀಯ ತಂಡದ ನಾಯಕನೇ ಹರಾಜಾಗದ ಅವಮಾನಕ್ಕೆ ಒಳಗಾದರು.

14ನೇ ಬಾರಿಯೂ ಹರಾಜಾಗದ ಮುಷ್ಫಿಕರ್ ರಹೀಂ

14ನೇ ಬಾರಿಯೂ ಹರಾಜಾಗದ ಮುಷ್ಫಿಕರ್ ರಹೀಂ

ಬಾಂಗ್ಲಾದೇಶದ ಅನುಭವಿ ಆಟಗಾರ ಮುಷ್ಫಿಕರ್ ರಹೀಂ ಸತತವಾಗಿ 14ನೇ ಬಾರಿಯ ಐಪಿಎಲ್‌ನಲ್ಲಿಯೂ ಹರಾಜಾಗದೆ ಉಳಿದುಕೊಂಡಿದ್ದಾರೆ. ಐಪಿಎಲ್‌ನ ಈ ಹಿಂದಿನ ಎಲ್ಲಾ ಹರಾಜಿನಲ್ಲಿ ಮುಷ್ಫಿಕರ್ ಅದೃಷ್ಠ ಪರೀಕ್ಷೆಗೆ ಇಳಿದಿದ್ದರು. ಆದರೆ ಕನಿಷ್ಠ ಒಂದು ಬಾರಿಯೂ ಅವರನ್ನು ಯಾವುದೇ ತಂಡವೂ ಖರೀದಿಸುವ ಮನಸು ಮಾಡಿರಲಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರನ್ನು ನೊಂದಾಯಿಸದೆ ಬಿಟ್ಟಿದ್ದರು. ಆದರೆ ಕಡೇಯ ಹಂತದಲ್ಲಿ ಹರಾಜು ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡಗೊಳಿಸಿದ್ದರು ಮುಷ್ಫಿಕರ್ ರಹೀಂ. ಆದರೆ ಈ ಬಾರಿಯೂ ಮುಷ್ಓಇಕರ್‌ಗೆ ನಿರಾಸೆಯೇ ಆಗಿದೆ.

Story first published: Saturday, February 20, 2021, 11:35 [IST]
Other articles published on Feb 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X