ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!

Pakistan

ಕ್ರಿಕೆಟ್‌ನ ಯಾವುದೇ ಫಾರ್ಮೆಟ್ ಇರ್ಲಿ ಆರಂಭಿಕ ಜೊತೆಯಾಟ ಬಹಳ ಮುಖ್ಯ. ಏಕೆಂದರೆ ತಂಡದ ಒಟ್ಟಾರೆ ಸ್ಕೋರ್ ಉತ್ತಮ ಆರಂಭದ ಮೇಲೆ ನಿರ್ಧಾರವಾಗುತ್ತದೆ. ಪವರ್‌ಪ್ಲೇ ಓವರ್‌ಗಳಲ್ಲಿ ಸರಿಯಾದ ರನ್‌ ರೇಟ್ ಕಾಯ್ದುಕೊಂಡು ಉತ್ತಮ ಆರಂಭ ಪಡೆದಿದ್ದೇ ಆದಲ್ಲೀ ತಂಡವು ದೊಡ್ಡ ಮೊತ್ತ ಕಲೆಹಾಕಲು ಸಾಧ್ಯ.

ಹಾಗೆಯೇ ರನ್ ಚೇಸಿಂಗ್‌ನಲ್ಲೂ ಕೂಡ ಯಾವುದೇ ವ್ಯತ್ಯಾಸವಿಲ್ಲ. ದೊಡ್ಡ ಮೊತ್ತದ ಗುರಿಯನ್ನ ಬೆನ್ನತ್ತಲು ಉತ್ತಮ ಜೊತೆಯಾಟ ಅಗತ್ಯ. ಅದ್ರಲ್ಲೂ ಆರಂಭಿಕ ಬ್ಯಾಟರ್‌ಗಳು ಫೌಂಡೇಶನ್ ಗಟ್ಟಿ ಹಾಕಿಕೊಟ್ಟಿದ್ದೇ ಆದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ತಂಡವನ್ನ ಗೆಲುವಿನ ದಡದತ್ತ ಕೊಂಡೊಯ್ಯುತ್ತಾರೆ.

ಟಿ20 ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಯೋಚಿಸಲು ಹೆಚ್ಚು ಸಮಯವಿರುವುದಿಲ್ಲ. ಕಡಿಮೆ ಸಮಯದಲ್ಲಿ ಪವರ್‌ಪ್ಲೇ ಓವರ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕಾಗುತ್ತದೆ. ದೀರ್ಘಾವಧಿವರೆಗೆ ವಿಕೆಟ್ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಏಕೆಂದರೆ ರನ್‌ರೇಟ್ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಅಡಿಪಾಯ ಹಾಕಿಕೊಡುವ ಜವಾಬ್ದಾರಿಯು ಅವರ ಹೆಗಲ ಮೇಲಿರಲಿದೆ. ಹೀಗಿರುವಾಗ ಪಾಕಿಸ್ತಾನದ ಓಪನರ್‌ಗಳಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ದಾಖಲೆಯ ಆಟವಾಡಿದ್ದಾರೆ.

ದ್ವಿಶಕದ ಜೊತೆಯಾಟವಾಡಿದ ಬಾಬರ್-ರಿಜ್ವಾನ್

ದ್ವಿಶಕದ ಜೊತೆಯಾಟವಾಡಿದ ಬಾಬರ್-ರಿಜ್ವಾನ್

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ದಾಖಲೆಯ ಜೊತೆಯಾಟವಾಡುವ ಮೂಲಕ ಪಾಕಿಸ್ತಾನಕ್ಕೆ 10 ವಿಕೆಟ್‌ಗಳ ಅಮೋಘ ಗೆಲುವು ತಂದುಕೊಟ್ಟಿದ್ದಾರೆ. 200ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಬರ್ ಮತ್ತು ರಿಜ್ವಾನ್ ವಿಕೆಟ್ ಕಳೆದುಕೊಳ್ಳದೆ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು. ಈ ಮೂಲಕ ತಮ್ಮ ಹೆಸರಿನಲ್ಲಿಯೇ ಇದ್ದಂತಹ 197ರನ್‌ಗಳ ದಾಖಲೆಯನ್ನು ನೆಲಸಮಗೊಳಿಸಿದ್ರು.

ಅಜೇಯ 203ರನ್‌ಗಳನ್ನ ಕಲೆಹಾಕಿದ ಈ ಜೋಡಿ ಟಿ20 ಕ್ರಿಕೆಟ್‌ನಲ್ಲಿ ಅದ್ರಲ್ಲೂ ಚೇಸಿಂಗ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ದೊಡ್ಡ ಅಜೇಯ ಜೊತೆಯಾಟ

ಟಿ20 ಕ್ರಿಕೆಟ್‌ನಲ್ಲಿ ಎರಡನೇ ಅತಿ ದೊಡ್ಡ ಅಜೇಯ ಜೊತೆಯಾಟ

ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆ ಇದು ಐದನೇ ಅತಿ ದೊಡ್ಡ ಜೊತೆಯಾಟವಾಗಿದ್ದು, ಯಾವುದೇ ವಿಕೆಟ್‌ಗೆ ಎರಡನೇ ಅತಿದೊಡ್ಡ ಅಜೇಯ ಜೊತೆಯಾಟ ಇದಾಗಿದೆ. ಅದ್ರಲ್ಲೂ ರನ್‌ ಚೇಸ್‌ನಲ್ಲಿ ಇದು ನಂಬರ್ ಒನ್ ಆಗಿದೆ.

ಕಳೆದೆರಡು ದಿನದ ಹಿಂದೆ ಮೊದಲ ಟಿ20 ಪಂದ್ಯದಲ್ಲಿ ಆಂಗ್ಲರ ವಿರುದ್ಧ ಸೋಲನ್ನ ಅನುಭವಿಸಿದ್ದ ಪಾಕಿಸ್ತಾನ ಎರಡನೇ ಟಿ20 ಪಂದ್ಯದಲ್ಲಿ ಕಂಬ್ಯಾಕ್ ಮಾಡಿದೆ. ಇನ್ನು ಏಷ್ಯಾಕಪ್‌ನಲ್ಲಿ ಫಾರ್ಮ್‌ ವೈಫಲ್ಯ ಅನುಭವಿಸಿದ್ದ ನಾಯಕ ಬಾಬರ್ ಅಜಮ್ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಬಾಬರ್ 66 ಎಸೆತಗಳಲ್ಲಿ ಅಜೇಯ 110 ರನ್ ಕಲೆಹಾಕಿದ್ರೆ, ಮೊಹಮ್ಮದ್ ರಿಜ್ವಾನ್ 51 ಎಸೆತಗಳಲ್ಲಿ ಅಜೇಯ 88 ರನ್ ದಾಖಲಿಸಿದ್ದಾರೆ.

PAK vs ENG: ರೋಹಿತ್-ಧವನ್ ಟಿ20 ದಾಖಲೆ ಜೊತೆಯಾಟ ಹಿಂದಿಕ್ಕಿದ ಬಾಬರ್-ರಿಜ್ವಾನ್ ಜೋಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ ಅತಿ ದೊಡ್ಡ ಆರಂಭಿಕ ಜೊತೆಯಾಟ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ ಅತಿ ದೊಡ್ಡ ಆರಂಭಿಕ ಜೊತೆಯಾಟ

1. ಬಾಲಜಿ ಪೈ ಮತ್ತು ಲೂಯಿಸ್ ಬ್ರೂಸ್ (ಜಿಬ್ರಾಲ್ಟರ್) 213* vs ಬಲ್ಗೇರಿಯಾ

2. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 203* vs ಇಂಗ್ಲೆಂಡ್

3. ಬಾಲಜಿ ಪೈ ಮತ್ತು ಲೂಯಿಸ್ ಬ್ರೂಸ್ (ಜಿಬ್ರಾಲ್ಟರ್) 172* vs ಬಲ್ಗೇರಿಯಾ

4. ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) 171* vs ಪಾಕಿಸ್ತಾನ

5. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 152* vs ಭಾರತ

BCCI ಚುನಾವಣೆ ಮತ್ತು AGM ಕುರಿತು ದಿನಾಂಕ ಘೋಷಣೆ: ಅ.18ರಂದು ಮುಂಬೈನಲ್ಲಿ ಚುನಾವಣೆ

ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಆರಂಭಿಕ ಜೊತೆಯಾಟ

ಟಿ20 ಕ್ರಿಕೆಟ್‌ನಲ್ಲಿ ಅತಿದೊಡ್ಡ ಆರಂಭಿಕ ಜೊತೆಯಾಟ

ಟಿ20 ಕ್ರಿಕೆಟ್ ಫಾರ್ಮೆಟ್‌ನಲ್ಲಿ ಅತಿ ದೊಡ್ಡ ಆರಂಭಿಕ ಜೊತೆಯಾಟದ ದಾಖಲೆಯು ಅಫ್ಘಾನಿಸ್ತಾನದ ಹೆಸರಲ್ಲಿದೆ ಎನ್ನುವುದು ಆಶ್ಚರ್ಯಕ್ಕೆ ಎಡೆಮಾಡಿದೆ. ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ ಮತ್ತು ಉಸ್ಮಾನ್ ಘನಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐರ್ಲೆಂಡ್ ವಿರುದ್ಧ 2019ರಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ ಬರೋಬ್ಬರಿ 236 ರನ್ ಸಿಡಿಸಿತ್ತು. ಹಾಗಿದ್ರೆ ಟಿ20 ಫಾರ್ಮೆಟ್‌ನಲ್ಲಿ ಆರಂಭಿಕ ಅತಿ ದೊಡ್ಡ ಜೊತೆಯಾಟದ ದಾಖಲೆಯು ಯಾರ ಹೆಸರಿನಲ್ಲಿದೆ ಎಂಬುದನ್ನು ಈ ಕೆಳಗೆ ಕಾಣಬಹುದು.

1. ಹಜರತುಲ್ಲಾ ಝಜೈ ಮತ್ತು ಉಸ್ಮಾನ್ ಘನಿ (ಅಫ್ಘಾನಿಸ್ತಾನ) 236 vs ಐರ್ಲೆಂಡ್

2. ಆ್ಯರೋನ್ ಫಿಂಚ್ ಮತ್ತು ಡಿ ಆರ್ಸಿ ಶಾಟ್‌ (ಆಸ್ಟ್ರೇಲಿಯಾ) 223 vs ಜಿಂಬಾಬ್ವೆ

3. ಸಬಾವೂನ್ ಡೇವಿಜಿ ಮತ್ತು ಡೈಲನ್ ಸ್ಟೇಯ್ನ್ 220 vs ಬಲ್ಗೇರಿಯಾ

4. ಬಾಲಾಜಿ ಪೈ ಮತ್ತು ಲೂಯಿಸ್ ಬ್ರೂಸ್ 213* vs ಬಲ್ಗೇರಿಯಾ

5. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 203* vs ಇಂಗ್ಲೆಂಡ್

Story first published: Friday, September 23, 2022, 12:20 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X