ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2008ರ ಯು-19 ವಿಶ್ವಕಪ್‌ನಲ್ಲಿ ಭರ್ಜರಿ ರನ್ ಗಳಿಸಿದ್ದ ತನ್ಮಯ್ ನಿವೃತ್ತಿ

Top run-scorer of Indias 2008 U-19 world cup winning team Tanmay Srivastava retires

ಮುಂಬೈ: 2008ರ ಅಂಡರ್ 19 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದ ಭಾರತದ ಬ್ಯಾಟ್ಸ್‌ಮನ್, ವಿರಾಟ್ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಆಡಿದ್ದ ತನ್ಮಯ್ ಶ್ರೀವತ್ಸವ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಶನಿವಾರ (ಅಕ್ಟೋಬರ್ 24) ನಿವೃತ್ತಿ ಘೋಷಿಸಿರುವ ತನ್ಮಯ್‌ಗೆ ಈಗಿನ್ನು 30ರ ಹರೆಯ.

ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ: ಜೋ ರೂಟ್ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ ಪರಿಪೂರ್ಣ ಆಟಗಾರ: ಜೋ ರೂಟ್

ಮಲೇಷ್ಯಾದಲ್ಲಿ 2008ರಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ ಟೂರ್ನಿಯಲ್ಲಿ ತನ್ಮಯ್ ಶ್ರೀವತ್ಸವ 52.40ರ ಸರಾಸರಿಯಂತೆ 262 ರನ್ ಬಾರಿಸಿದ್ದರು. ಕೌಲಾಲಂಪುರ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ತನ್ಮಯ್ 46 ರನ್ ಬಾರಿಸಿದ್ದರು. ಆವತ್ತು ಭಾರತೀಯರ ಪರ ಅತೀ ಹೆಚ್ಚು ರನ್ ಬಾರಿಸಿದ್ದು ತನ್ಮಯ್ ಒಬ್ಬರೆ.

ಅಂದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಿದ್ದವು. ಇದರಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 159 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಮಳೆ ಸುರಿದ್ದರಿಂದ 25 ಓವರ್‌ಗೆ 116 ರನ್ ಗುರಿ ನೀಡಲಾಗಿತ್ತು. ಆದರೆ ಆಫ್ರಿಕಾ 103 ರನ್ ಬಾರಿಸಿದ್ದರಿಂದ ಭಾರತ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 12 ರನ್‌ನಿಂದ ಗೆದ್ದಿತ್ತು.

ಕ್ರಿಸ್ ಗೇಲ್ ಓರ್ವ ಚಾಣಾಕ್ಷ ಆಟಗಾರ, ಪಂಜಾಬ್‌ಗೆ ಶಕ್ತಿ ತುಂಬಿದ್ದೇ ಆತ: ಸಚಿನ್ ತೆಂಡೂಲ್ಕರ್ಕ್ರಿಸ್ ಗೇಲ್ ಓರ್ವ ಚಾಣಾಕ್ಷ ಆಟಗಾರ, ಪಂಜಾಬ್‌ಗೆ ಶಕ್ತಿ ತುಂಬಿದ್ದೇ ಆತ: ಸಚಿನ್ ತೆಂಡೂಲ್ಕರ್

ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ತನ್ಮಯ್, 2008-09ರಲ್ಲಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದರು. 90 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ತನ್ಮಯ್ 34.39ರ ಸರಾಸರಿಯಲ್ಲಿ 4918 ರನ್ ಗಳಿಸಿದ್ದಾರೆ.

Story first published: Saturday, October 24, 2020, 17:53 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X