ಭಾರತದ ಗೆಲುವಿನಲ್ಲಿ ಟಾಸ್ ಮುಖ್ಯ ಪಾತ್ರ ವಹಿಸುತ್ತದೆಯೇ?: ಆಕಾಶ್ ಚೋಪ್ರಾ

ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಗೆಲುವನ್ನು ಟಾಸ್ ಅನ್ನು ನಿರ್ಧರಿಸುತ್ತಿದೆಯಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಪ್ರತಿ ಬಾರಿ ಟಾಸ್ ಗೆದ್ದಾಗ ಟೀಂ ಇಂಡಿಯಾ ಚೇಸಿಂಗ್‌ ಆಯ್ದುಕೊಳ್ಳುತ್ತದೆ. ಕಾಕತಾಳೀಯವಾಗಿ ಭಾರತ ಏಷ್ಯಾಕಪ್‌ ಟೂರ್ನಿಯಲ್ಲಿ ಸೂಪರ್ 4 ಹಂತದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ಮೇಲೆ ಟಾಸ್ ಸೋತಿತ್ತು. ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

Ind Vs SA T20: ವೈಯಕ್ತಿಕ ದಾಖಲೆಗಿಂತ ತಂಡ ಗೆಲ್ಲುವುದು ಮುಖ್ಯ, ಕೊಹ್ಲಿ ವರ್ತನೆಗೆ ಭಾರಿ ಮೆಚ್ಚುಗೆInd Vs SA T20: ವೈಯಕ್ತಿಕ ದಾಖಲೆಗಿಂತ ತಂಡ ಗೆಲ್ಲುವುದು ಮುಖ್ಯ, ಕೊಹ್ಲಿ ವರ್ತನೆಗೆ ಭಾರಿ ಮೆಚ್ಚುಗೆ

ಟಿ20 ವಿಶ್ವಕಪ್‌ಗೆ ತಮ್ಮ ಸಿದ್ಧತೆಗೆ ಸಂಬಂಧಿಸಿದಂತೆ ಟಾಸ್ ಗೆಲ್ಲಲು ಟೀಂ ಇಂಡಿಯಾ ತುಂಬಾ ಬ್ಯಾಂಕಿಂಗ್ ಮಾಡುತ್ತಿದೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಟಾಸ್ ಗೆದ್ದ ನಂತರ ಭಾರತ ಚೇಸಿಂಗ್ ಆಯ್ಕೆ ಮಾಡಿಕೊಳ್ಳುತ್ತಿರುವ ನಿರ್ಧಾರವನ್ನು ಅವರು ಪ್ರಶ್ನೆ ಮಾಡಿದ್ದಾರೆ.

ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಯೋಗ್ಯ ಮೊತ್ತವನ್ನು ರಕ್ಷಿಸಲು ವಿಫಲವಾದ ನಂತರ ಟೀಂ ಇಂಡಿಯಾ ಏಷ್ಯಾ ಕಪ್‌ನಿಂದ ಹೊರಬಿದ್ದಿದೆ. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಡಿ 208 ರನ್ ಗಳಿಸಿದರೂ ಸಹ ಆಸ್ಟ್ರೇಲಿಯಾ ಅದನ್ನು ಯಶಸ್ವಿಯಾಗಿ ಚೇಸ್ ಮಾಡಿತು.

ಕೊನೆಯ ಮೂರು ಪಂದ್ಯಗಳಲ್ಲಿ ಯಶಸ್ವಿ ಚೇಸಿಂಗ್

ಕೊನೆಯ ಮೂರು ಪಂದ್ಯಗಳಲ್ಲಿ ಯಶಸ್ವಿ ಚೇಸಿಂಗ್

ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಎರಡೂ ಸಂದರ್ಭಗಳಲ್ಲಿ ಅವರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಚೇಸಿಂಗ್ ಮೂಲಕ ಜಯ ಸಾಧಿಸಿತ್ತು.

ಭಾರತ ಮೊದಲು ಬ್ಯಾಟಿಂಗ್ ಮಾಡಿದಾಗ ಹೆಚ್ಚಿನ ಪಂದ್ಯಗಳನ್ನು ಸೋಲುತ್ತಿರುವುದು ಕಳವಳಕಾರಿ ವಿಚಾರವಾಗಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಈ ಅಂಶ ವಿಶ್ವಕಪ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Ind Vs SA T20: 16 ರನ್‌ಗಳ ಜಯ ಸಾಧಿಸಿದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೊದಲ ಬಾರಿ ಸರಣಿ ಗೆಲುವು

ಟಾಸ್ ಮೇಲೆ ತಂಡ ಅವಲಂಬಿಸಬಾರದು

ಟಾಸ್ ಮೇಲೆ ತಂಡ ಅವಲಂಬಿಸಬಾರದು

"ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದಾಗ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಟಾಸ್ ಗೆಲ್ಲದಿದ್ದಾಗ ಟೀಂ ಇಂಡಿಯಾ ಗೆಲ್ಲಲು ಸಾಕಷ್ಟು ಕಷ್ಟಪಡುತ್ತಿದೆ. ಟೀಮ್ ಇಂಡಿಯಾದ ಸಂಪೂರ್ಣ ವಿಶ್ವಕಪ್ ಅಭಿಯಾನವು ಟಾಸ್ ಗೆಲ್ಲುವುದರ ಮೇಲೆ ಕೇಂದ್ರೀಕೃತವಾಗಿದ್ದರೆ, ಅದು ದೊಡ್ಡ ಚಿಂತೆಯಾಗಿದೆ." ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟಾಸ್ ಭಾರತದ ಪ್ರದರ್ಶನದ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ಚೋಪ್ರಾ ಹೇಳಿದ್ದಾರೆ. "ಹಿಂದಿನ ವಿಶ್ವಕಪ್‌ನಲ್ಲಿ ಭಾರತವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಟಾಸ್ ಸೋತಿತ್ತು. ಅದು ಮುಖ್ಯ ಪಂದ್ಯವಾಗಿತ್ತು, ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿತ್ತು."

ಇಬ್ಬನಿ ಸಮಸ್ಯೆ ಇಲ್ಲದಿದ್ದರು ಬೌಲಿಂಗ್ ವೈಫಲ್ಯ

ಇಬ್ಬನಿ ಸಮಸ್ಯೆ ಇಲ್ಲದಿದ್ದರು ಬೌಲಿಂಗ್ ವೈಫಲ್ಯ

ಕಳೆದ ವಿಶ್ವಕಪ್‌ನಲ್ಲಿ ಇಬ್ಬನಿ ಸಮಸ್ಯೆ ಎದುರಾಗಿತ್ತು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಕೂಡ ಇಬ್ಬನಿ ಸಮಸ್ಯೆ ಎದುರಾಗುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

"ಏಷ್ಯಾ ಕಪ್‌ನಲ್ಲೂ ಇಬ್ಬನಿ ಇರಲಿಲ್ಲ. ಬುಮ್ರಾ ಆಡುವ ಬಗ್ಗೆ ಯಾವುದೇ ಖಾತ್ರಿ ಇಲ್ಲ ಮತ್ತು ಟಾಸ್ ಸೋತಾಗಲು ಭಾರತ ಯಾವಾಗ ತಯಾರಿ ನಡೆಸುತ್ತದೆ? ಅದು ದೊಡ್ಡ ಪ್ರಶ್ನೆಯಾಗಿದೆ." ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.

ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದರೆ, ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಸೋಲಿಸಿತ್ತು. ಭಾರತ ಉಳಿದ ಪಂದ್ಯಗಳನ್ನು ಗೆದ್ದರೂ ಸೆಮಿ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: [IST]
Other articles published on

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X