ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಲಾಸಿಟಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟ್ರೈಲ್‌ಬ್ಲೇಜರ್ಸ್‌

 Trailblazers Won Against Velocity By 9 Wickets

ಸ್ಮೃತಿ ಮಂದಾನ ನೇತೃತ್ವದ ಟ್ರೈಲ್‌ಬ್ಲೇಜರ್ಸ್‌ ತಂಡವು ವಿಮೆನ್ಸ್‌ ಟಿ20 ಚಾಲೆಂಜ್ 2020ರ ಎರಡನೇ ಪಂದ್ಯದಲ್ಲಿ ವೆಲಾಸಿಟಿ ವಿರುದ್ಧ ಒಂಭತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದ ವೆಲಾಸಿಟಿ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಎದುರಾಳಿ ತಂಡದ ಬೌಲರ್ ಸೋಫಿ ಎಕ್ಲೆಸ್ಟೋನ್ ದಾಳಿಗೆ ತತ್ತರಿಸಿದ ಮಿಥಾಲಿ ಪಡೆ ಕೇವಲ 47ರನ್‌ಗಳಿಗೆ ಆಲೌಟ್ ಆಯಿತು. ವೆಲಾಸಿಟಿ ಪರ ಶಫಾಲಿ ವರ್ಮಾ 13, ಶಿಖಾ ಪಾಂಡೆ 10, ಕ್ಯಾಸ್ಪೆರೆಕ್ 11 ರನ್‌ಗಳಿಸಿದ್ದು, ಉಳಿದ ಆಟಗಾರ್ತಿಯರು ಸಿಂಗಲ್ ಡಿಜಿಟ್‌ಗೆ ಔಟಾಗಿ ಪೆವಿಲಿಯನ್‌ಗೆ ಸೇರಿಕೊಂಡರು. ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ 3.1 ಓವರ್‌ಗಳಲ್ಲಿ ಕೇವಲ 9 ರನ್‌ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.

ಇನ್ನು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಹಾಗೂ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

48 ರನ್‌ಗಳ ಸುಲಭ ಗುರಿಯನ್ನು ಬೆನತ್ತಿದ ಟ್ರೈಲ್‌ಬ್ಲೇಜರ್ಸ್‌ ಕೇವಲ ಒಂದು ವಿಕೆಟ್ ನಷ್ಟಕ್ಕೆ 7.5 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ದಿಯಾಂಡ್ರಾ ಡಾಟಿನ್ ಅಜೇಯ 29, ಸ್ಮೃತಿ ಮಂದಾನ 6, ರಿಚಾ ಘೋಶ್ 13ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೊವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿವಿಮೆನ್ಸ್ ಟಿ20 ಚಾಲೆಂಜ್: ಸೂಪರ್‌ನೊವಾಸ್ ವಿರುದ್ಧ ಗೆದ್ದು ಬೀಗಿದ ವೆಲಾಸಿಟಿ

ಇನ್ನು ಮೊದಲ ಪಂದ್ಯದಲ್ಲಿ ಸೂಪರ್‌ನೊವಾ ವಿರುದ್ಧ ಗೆದ್ದ ವೆಲಾಸಿಟಿ ಎರಡನೇ ಪಂದ್ಯದಲ್ಲಿ ಸೋತು ಮಿಶ್ರ ಫಲಿತಾಂಶ ಸಾಧಿಸಿದೆ. ಟ್ರೈಲ್‌ಬ್ಲೇಜರ್ಸ್‌ ಭರ್ಜರಿ ರನ್‌ರೇಟ್ ಆಧಾರದಲ್ಲಿ ಬಹುತೇಕ ಫೈನಲ್ ತಲುಪಿದೆ.

Story first published: Thursday, November 5, 2020, 18:55 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X