ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈ, ಡೆಲ್ಲಿ ಆಟಗಾರರಿಗೆ ಕಂಪನದ ಅನುಭವ

By Mahesh

ರಾಯ್ ಪುರ್, ಮೇ.12: ನೇಪಾಳದಲ್ಲಿ ಸಂಭವಿಸಿದ ಭೂಕಂಪ ಹಾಗೂ ಉತ್ತರ ಭಾರತದ ಹಲವೆಡೆಯ ಕಂಪನದ ಪರಿಣಾಮ ಐಪಿಎಲ್ ಆಟಗಾರರಿಗೂ ತಟ್ಟಿದೆ. ಮೇ.12ರಂದು ಇಲ್ಲಿನ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಡುವೆ ಪಂದ್ಯ ನಿಗದಿಯಾಗಿದೆ. ಉಭಯ ತಂಡದ ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.

ಭೂಕಂಪವಾದ ಸಂದರ್ಭದಲ್ಲಿ ಕೆಲ ಆಟಗಾರರು ಮೈದಾನದಲ್ಲಿ ತಯಾರಿ ನಡೆಸುತ್ತಿದ್ದರೆ, ಮತ್ತೆ ಕೆಲ ಆಟಗಾರರು, ಪಂದ್ಯದಲ್ಲಿ ಕಾರ್ಯ ನಿರ್ವಹಿಸುವ ಅಂಪೈರ್ ಹಾಗೂ ಇನ್ನಿತರೆ ಅಧಿಕಾರಿಗಳು ಹೋಟೆಲ್ ರೂಮಿನಲ್ಲಿ ತಂಗಿದ್ದರು.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ಇಲ್ಲಿ ನಮ್ಮ ರೂಮಿನ ಪಕ್ಕದಲ್ಲೇ ಭೂಮಿ ಕಂಪಿಸಿದಂತೆ ಅನುಭವವಾಯಿತು. ಎಂದು ಶ್ರೀಲಂಕಾದ ಮಾಜಿ ಆಲ್ ರೌಂಡರ್ ರಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದಾರೆ. [ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ, ದೆಹಲಿ ಗಡ ಗಡ]

Tremors felt in DD-CSK IPL 2015 match host city Raipur; former cricketers tweet


ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇಮಿಯನ್ ಮಾರ್ಟಿನ್ ಅವರು ಟ್ವೀಟ್ ಮಾಡಿ ನಾನು ಈಗ ಚಂದೀಗಢದಲ್ಲಿದ್ದೇನೆ. ನೇಪಾಳದಲ್ಲಿ ಭೂಕಂಪವಾದ ಸುದ್ದಿ ಓದುವಷ್ಟರಲ್ಲಿ ಇಲ್ಲೂ ಕೂಡಾ ಕಂಪನದ ಅನುಭವವಾಯಿತು ಎಂದಿದ್ದಾರೆ.

ಏಪ್ರಿಲ್ 25 ರಂದು ನೇಪಾಳದಲ್ಲಿ ಮೊದಲ ಬಾರಿಗೆ ಭಾರಿ ಕಂಪನ ಉಂಟಾದಾಗ ಕೋಲ್ಕತ್ತಾದಲ್ಲಿ ಕೆಕೆಆರ್ ಆಟಗಾರರು ತತ್ತರಿಸಿದ್ದರು. ಈ ಬಾರಿ ಆಟಗಾರರಿಗೆ ಹೆಚ್ಚಿನ ತೊಂದರೆಯುಂಟಾಗಿಲ್ಲ. ಅದರೆ, ನೇಪಾಳ ಹಾಗೂ ಭಾರತದ ಭೂಕಂಪಕ್ಕಾಗಿ ಕೆಲ ಆಟಗಾರರು ಸ್ಪಂದಿಸಿ ಟ್ವೀಟ್ ಮಾಡಿದ್ದಾರೆ.

ನೇಪಾಳದಲ್ಲಿ ಮತ್ತೊಮ್ಮೆ ಪ್ರಬಲವಾದ ಭೂಕಂಪ ಸಂಭವಿಸಿದ್ದು ಇದರ ಪರಿಣಾಮ ಭಾರತದ ನವದೆಹಲಿ ಹಾಗೂ ಉತ್ತರ ಭಾರತದ ಅನೇಕ ಭಾಗಗಳು ಕಂಪಿಸಿವೆ.

ನೇಪಾಳದಲ್ಲಿ ಕಳೆದ ಎರಡು ವಾರಗಳ ಹಿಂದೆ ಸಂಭವಿಸಿದ ಸರಣಿ ಭೂಕಂಪದಿಂದ ಸುಮಾರು 8000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. 17,800 ಮಂದಿ ಗಾಯಗೊಂಡಿದ್ದರು. ಮೇ.12ರ ಕಂಪನದಿಂದ ನೇಪಾಳ ಹಾಗೂ ಭಾರತದಲ್ಲಿ ಭೂಕಂಪದಿಂದ 10 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನಕ್ಕೆ ಗಾಯಗಳಾಗಿವೆ.

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X