ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2008 To 2020: ಐಪಿಎಲ್ ಫೈನಲ್‌ ಪಂದ್ಯಗಳಲ್ಲಿ 'ಮ್ಯಾನ್ ಆಫ್ ದಿ ಮ್ಯಾಚ್' ಪಡೆದ ಆಟಗಾರರು

Trent boult Recives Man of the Match In IPL Final 2020

ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿದೆ. ಡೆಲ್ಲಿ ತಂಡದ ಮೂರು ಪ್ರಮುಖ ವಿಕೆಟ್ ಕಬಳಿಸಿದ ಟ್ರೆಂಟ್ ಬೋಲ್ಟ್ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

4 ಓವರ್ ಎಸೆದ ಬೋಲ್ಟ್ 30 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಮಾರ್ಕಸ್ ಸ್ಟೈನಿಸ್, ಶಿಖರ್ ಧವನ್ ಹಾಗೂ ಅಜಿಂಕ್ಯ ರಹಾನೆಯನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಮುಂಬೈ ಇಂಡಿಯನ್ಸ್ ವಿಜಯಕ್ಕೆ ಬೋಲ್ಟ್ ಬುನಾದಿ ಹಾಕಿದರು. ಹದಿಮೂರು ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿರುವ ಆಟಗಾರರು ಯಾರು ಎಂಬುದರ ಸುತ್ತ ಒಂದು ನೋಟ. ಮುಂದೆ ಓದಿ...

ಚೊಚ್ಚಲ ಐಪಿಎಲ್‌ನಲ್ಲಿ ಯೂಸೂಫ್

ಚೊಚ್ಚಲ ಐಪಿಎಲ್‌ನಲ್ಲಿ ಯೂಸೂಫ್

2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಫೈನಲ್ ಪಂದ್ಯ ನಡೆದಿತ್ತು. ಚೆನ್ನೈ ಮಣಿಸಿದ ಮೊದಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದ ರಾಜಸ್ಥಾನದ ತಂಡದಲ್ಲಿ ಯೂಸೂಫ್ ಪಠಾಣ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. 56 ರನ್ ಬಾರಿಸಿದ್ದ ಯೂಸೂಫ್ 3 ವಿಕೆಟ್ ಕಬಳಿಸಿ ಆಲ್‌ ರೌಂಡ್ ಪ್ರದರ್ಶನ ನೀಡಿದ್ದರು.

2008 ರಿಂದ 2020 ತನಕ ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ

2ನೇ ಐಪಿಎಲ್‌ನಲ್ಲಿ ಅನಿಲ್ ಕುಂಬ್ಳೆ

2ನೇ ಐಪಿಎಲ್‌ನಲ್ಲಿ ಅನಿಲ್ ಕುಂಬ್ಳೆ

2009ಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪಂದ್ಯ ಆಡಿತ್ತು. ಆಡಂ ಗಿಲ್‌ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ಫೈನಲ್ ಗೆದ್ದಿದ್ದರು. ಆದ್ರೆ, ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಅನಿಲ್ ಕುಂಬ್ಳೆ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. 4 ಓವರ್ ಮಾಡಿ 4 ವಿಕೆಟ್ ಪಡೆದುಕೊಂಡಿದ್ದರು.

ಮೂರು ಫೈನಲ್ ಗೆದ್ದ ಚೆನ್ನೈ

ಮೂರು ಫೈನಲ್ ಗೆದ್ದ ಚೆನ್ನೈ

- 2010ರ ಫೈನಲ್‌ನಲ್ಲಿ ಮುಂಬೈ ವಿರುದ್ಧ ಚೆನ್ನೈ ಪಂದ್ಯ ಗೆದ್ದಿತ್ತು. 57 ರನ್ ಬಾರಿಸಿದ ಸುರೇಶ್ ರೈನಾ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

- 2011ರಲ್ಲಿ ಆರ್‌ಸಿಬಿ ವಿರುದ್ಧ ಚೆನ್ನೈ ಫೈನಲ್ ಗೆದ್ದಿದ್ದರು. 95 ರನ್ ಬಾರಿಸಿದ್ದ ಮುರಳಿ ವಿಜಯ್ ಪಂದ್ಯ ಪುರುಷೋತ್ತಮ ಆಗಿದ್ದರು.

- 2018ರಲ್ಲಿ ಸನ್‌ರೈಸ್ ಹೈದರಾಬಾದ್ ವಿರುದ್ಧ ಚೆನ್ನೈ ಫೈನಲ್ ಗೆದ್ದಿತ್ತು. 117 ರನ್ ಬಾರಿಸಿದ್ದ ಶೇನ್ ವ್ಯಾಟ್ಸನ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

ಐದು ಬಾರಿ ಮುಂಬೈ ಫೈನಲ್

ಐದು ಬಾರಿ ಮುಂಬೈ ಫೈನಲ್

- 2013 ರಲ್ಲಿ ಚೆನ್ನೈ ವಿರುದ್ಧ ಮುಂಬೈ ಫೈನಲ್ ಗೆದ್ದಿತ್ತು. 60 ರನ್ ಬಾರಿಸಿದ್ದ ಪೊಲ್ಲಾರ್ಡ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

- 2015 ರಲ್ಲಿ ಚೆನ್ನೈ ವಿರುದ್ಧ ಮುಂಬೈ ಫೈನಲ್ ಗೆದ್ದಿತ್ತು. 50 ರನ್ ಬಾರಿಸಿದ್ದ ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

- 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ಮುಂಬೈ ಫೈನಲ್ ಗೆದ್ದಿದ್ದರು. ಕ್ರುನಾಲ್ ಪಾಂಡ್ಯ ಪಂದ್ಯ ಪುರುಷೋತ್ತಮ ಆಗಿದ್ದರು.

- 2019 ರಲ್ಲಿ ಚೆನ್ನೈ ವಿರುದ್ಧ ಫೈನಲ್ ಗೆದ್ದ ಮುಂಬೈ. ಬುಮ್ರಾ ಮ್ಯಾನ್ ಅಫ್ ದಿ ಮ್ಯಾಚ್ ಆಗಿದ್ದರು.

- 2020 ರಲ್ಲಿ ಡೆಲ್ಲಿ ವಿರುದ್ಧ ಫೈನಲ್ ಗೆದ್ದ ಮುಂಬೈ. ಟ್ರೆಂಟ್ ಬೋಲ್ಟ್ ಮ್ಯಾನ್ ಅಫ್ ದಿನ ಮ್ಯಾಚ್.

ಕೆಕೆಆರ್ ಎರಡು ಫೈನಲ್

ಕೆಕೆಆರ್ ಎರಡು ಫೈನಲ್

- 2012ರಲ್ಲಿ ಚೆನ್ನೈ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್ ಗೆದ್ದಿದ್ದರು. 89 ರನ್ ಬಾರಿಸಿದ್ದ ಮನ್ವಿಂದರ್ ಬಿಸ್ಲಾ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

- 2014ರಲ್ಲಿ ಪಂಜಾಬ್ ವಿರುದ್ಧ ಫೈನಲ್ ಗೆದ್ದಿತ್ತು ಕೊಲ್ಕತ್ತಾ ನೈಟ್ ರೈಡರ್ಸ್. ಈ ಪಂದ್ಯದಲ್ಲಿ 94 ರನ್ ಬಾರಿಸಿದ್ದ ಮನೀಶ್ ಪಾಂಡೆ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

ಬೆನ್ ಕಟ್ಟಿಂಗ್

ಬೆನ್ ಕಟ್ಟಿಂಗ್

2016ರಲ್ಲಿ ಆರ್‌ಸಿಬಿ ವಿರುದ್ಧ ಫೈನಲ್ ಆಡಿದ್ದ ಸನ್‌ರೈಸ್ ಹೈದರಾಬಾದ್‌ ಗೆದ್ದಿದ್ದರು. 39 ರನ್ ಮತ್ತು 2 ವಿಕೆಟ್ ಪಡೆದು ಆಲ್ ರೌಂಡ್ ಪ್ರದರ್ಶನ ನೀಡಿದ್ದ ಬೆನ್ ಕಟ್ಟಿಂಗ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು.

Story first published: Wednesday, November 11, 2020, 0:52 [IST]
Other articles published on Nov 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X