ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆ

Trent Boult returns to New Zealand squad for Tests against India; Kyle Jamieson earns maiden call-up

ಆಕ್ಲೆಂಡ್, ಫೆಬ್ರವರಿ 17: ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ಮೈದಾನದಿಂದ ದೂರ ಉಳಿದಿದ್ದ ಟ್ರೆಂಟ್ ಬೌಲ್ಟ್ ಮತ್ತೆ ಮೈದಾನಕ್ಕಿಳಿಯುತ್ತಿದ್ದಾರೆ. ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಬೌಲ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಟಿಮ್ ಸೌಥಿ ಹಾಗೂ ನೀಲ್ ವಾಗ್ನರ್ ಅವರಿರುವ ತಂಡಕ್ಕೆ ಬೌಲ್ಟ್ ಸೇರ್ಪಡೆಯಾಗಿದ್ದಾರೆ. ಬೌಲ್ಟ್ ಅವರ ಶಕ್ತಿ ಹಾಗೂ ಅನುಭವದಿಂದ ತಂಡಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ಮುಖ್ಯ ಕೋಚ್ ಗಯರಿ ಸ್ಟೀಡ್ ಹೇಳಿದ್ದಾರೆ.

ನ್ಯೂಜಿಲೆಂಡ್ XI vs ಭಾರತ ಅಭ್ಯಾಸ ಪಂದ್ಯ ಡ್ರಾ: ಫಾರ್ಮ್‌ಗೆ ಮರಳಿದ ಮಯಾಂಕ್ನ್ಯೂಜಿಲೆಂಡ್ XI vs ಭಾರತ ಅಭ್ಯಾಸ ಪಂದ್ಯ ಡ್ರಾ: ಫಾರ್ಮ್‌ಗೆ ಮರಳಿದ ಮಯಾಂಕ್

ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮೊದಲ ಬಾರಿಗೆ ಟೆಸ್ಟ್ ತಂಡ ಸೇರಲಿರುವ ವೇಗಿ ಕೈಲಿ ಜೆಮಿಸನ್ ಸೇರ್ಪಡೆಯಾಗುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಮಿಶೆಲ್ ಸಾಂಟ್ನರ್ ಬದಲಿಗೆ ಏಜಾಜ್ ಪಟೇಲ್ ತಂಡ ಸೇರುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ 2-1ರಂತೆ ಗೆಲುವು ಸಾಧಿಸಲು ಏಜಾಜ್ ಕಾರಣರಾಗಿದ್ದರು. ಹೀಗಾಗಿ ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಈ ಟೆಸ್ಟ್ ಸರಣಿಯಲ್ಲಿ ಆಡುವ ಮೂಲಕ ಹಿರಿಯ ಆಟಗಾರ ರಾಸ್ ಟೇಲರ್ ಅವರು ನ್ಯೂಜಿಲೆಂಡ್ ಪರ 100ನೇ ಟೆಸ್ಟ್ ಆಡಿದ ನಾಲ್ಕನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಬ್ರೆಂಡನ್ ಮೆಕಲಮ್, ಡೇನಿಯಲ್ ವೆಟ್ಟೋರಿ ಹಾಗೂ ಸ್ಟೀಫನ್ ಫ್ಲೆಮಿಂಗ್ ಸಾಲಿಗೆ ಸೇರುತ್ತಿದ್ದಾರೆ. ಈ ಮೂಲಕ ಎಲ್ಲಾ ಬಗೆಯ ಕ್ರಿಕೆಟ್ ನಲ್ಲಿ 100 ಪ್ಲಸ್ ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ಕಿವೀಸ್ ವಿರುದ್ಧ ಟಿ20ಐ ಸರಣಿಯನ್ನು ಭಾರತ 0-5 ಅಂತರದಿಂದ ಜಯಿಸಿದರೆ, ಭಾರತ ವಿರುದ್ಧ ನ್ಯೂಜಿಲೆಂಡ್ 0-3 ಅಂತರದಿಂದ ಗೆಲುವು ಸಾಧಿಸಿತ್ತು. ಈಗ ಟೆಸ್ಟ್ ಪಂದ್ಯದ ಸರಣಿ.

ನ್ಯೂಜಿಲೆಂಡ್ ಟೆಸ್ಟ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಾಥಮ್, ಟಾಮ್ ಬ್ಲಂಡೆಲ್, ರಾಸ್ ಟೇಲರ್, ಹೆನ್ಸಿ ನಿಕೋಲ್ಸ್, ಬಿಜೆ ವಾಟ್ಲಿಂಗ್, ಕಾಲಿನ್ ಡಿ ಗ್ರಾಂಡ್ ಹೋಮ್, ಟಿಮ್ ಸೌಥಿ, ನೀಲ್ ವಾಗ್ನರ್, ಟ್ರೆಂಟ್ ಬೌಲ್ಟ್, ಏಜಾಜ್ ಪಟೇಲ್, ಕೈಲಿ ಜೇಮಿಸನ್, ಡರ್ಲ್ ಮಿಶೆಲ್.

Story first published: Monday, February 17, 2020, 17:17 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X