ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೂಮ್ರಾ ಬೇಬಿ ಬೌಲರ್ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್ ಪಾಡು ಯಾರಿಗೂ ಬೇಡ!!

ಭಾರತ ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗುತ್ತಿದೆ. ಕಳೆದ 2-3 ವರ್ಷಗಳಲ್ಲಿ ಭಾರತೀಯ ವೇಗದ ಬೌಲಿಂಗ್ ವಿಭಾಗ ಹಿಂದೆಂದಿಗಿಂತಲೂ ಬಲಿಷ್ಠವಾಗಿರೋದಕ್ಕೆ ಇತ್ತೀಚೆಗೆ ಲೆಜೆಂಡರಿ ಆಟಗಾರರು ನೀಡುತ್ತಿರುವ ಹೇಳಿಕೆಗಳೇ ಸಾಕ್ಷಿಯಾಗಿದೆ. ಆದರೆ ಪಾಕ್ ಮಾಜಿ ಆಲ್‌ರೌಂಡರ್ ಅಬ್ದುಲ್ ರಝಾಕ್‌ಗೆ ಮಾತ್ರ ಭಾರತದ ಒಬ್ಬ ಬೌಲರ್‌ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಆ ಬೌಲರ್ ಬೇರೆ ಯಾರೂ ಅಲ್ಲ ಏಕದಿನ ನಂಬರ್ 1 ಬೌಲರ್ ಜಸ್ಪ್ರಿತ್ ಬೂಮ್ರಾ

ಬೂಮ್ರಾ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರ. ಈತನ ವೇಗ ಹಾಗೂ ನಿಖರತೆಗೆ ಪ್ರಸಕ್ತ ಘಟಾನುಘಟಿ ದಾಂಡಿಗರೇ ಕಂಗೆಟ್ಟು ಹೋಗುತ್ತಾರೆ. ಸದ್ಯ ಏಕದಿನದ ಶ್ರೇಯಾಂಕ ಪಟ್ಟಿಯಲ್ಲಿ ಜಸ್ಪ್ರಿತ್ ಬೂಮ್ರಾ ನಂಬರ್ 1 ಬೌಲರ್‌ ಆಗಿದ್ದಾರೆ. ಆದರೆ ಪಾಕ್‌ನ ಆಲ್‌ರೌಂಡರ್ ಅಬ್ದುಲ್ ರಝಾಕ್ ತನ್ನ ಆಟದ ಮುಂದೆ ಬೂಮ್ರಾ ಏನೂ ಅಲ್ಲ ಅಂದಿದ್ದು ಬಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!

ನಿನ್ನೆ ಈ ಹೇಳಿಕೆಯನ್ನು ರಝಾಕ್ ನೀಡಿದ್ದರು. ಆದರೆ ಇಂದು ರಝಾಕ್ ಗ್ರಹಚಾರವನ್ನು ಅಭಿಮಾನಿಗಳು ಟ್ವಿಟರ್‌ನಲ್ಲಿ ಸರಿಯಾಗಿಯೇ ಬಿಡಿಸಿದ್ದಾರೆ. ರಝಾಕ್ ಆಟದ ವೈಖರಿ ಅಂಕಿಅಂಶಗಳ ಸಹಿತ ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಮಾತ್ರವಲ್ಲ ರಝಾಕ್ ನಿನ್ನೆ ನೀಡಿದ ಹೇಳಿಕೆ ವರ್ಷದ ಅತಿದೊಡ್ಡ ಜೋಕ್ ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದಾರೆ.

ರಝಾಕ್ ಹೇಳಿದ್ದೇನು:

ರಝಾಕ್ ಹೇಳಿದ್ದೇನು:

ಅಬ್ದುಲ್ ರಝಾಕ್ ನಿನ್ನೆ ಹೇಳಿಕೆಯನ್ನು ನೀಡುತ್ತಾ ತನ್ನನ್ನು ತಾನು ಶ್ರೇಷ್ಠ ಕ್ರಿಕೆಟಿಗ ಎಂದು ಬಣ್ಣಿಸುವ ಬರದಲ್ಲಿ ಈ ಯಡವಟ್ಟನ್ನು ಮಾಡಿಕೊಂಡರು. ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾದ ಮೆಕ್‌ಗ್ರಾಥ್, ವಾಸಿಮ್ ಅಕ್ರಮ್ ಅವರಂತಾ ಕ್ರಿಕೆಟಿಗನ್ನೇ ನಾನು ಎದುರಿಸಿದ್ದೇನೆ. ಹೀಗಾಗಿ ತನಗೆ ಜಸ್ಪ್ರಿತ್ ಬೂಮ್ರಾ 'ಬೇಬಿ ಬೌಲರ್' ಎಂದಿದ್ದರು

ಟ್ರೋಲ್‌ಗೆ ಒಳಗಾದ ರಝಾಕ್:

ಟ್ರೋಲ್‌ಗೆ ಒಳಗಾದ ರಝಾಕ್:

ಅಬ್ದುಲ್ ರಝಾಕ್ ಈ ಹೇಳಿಕೆ ಕೊಟ್ಟಿದ್ದೇ ತಡ ರಝಾಕ್ ಅಂಕಿಅಂಶಗಳನ್ನು ಕೆದಕಿ ಕ್ರಿಕೆಟ್ ಅಭಿಮಾನಿಗಳು ಆಡಿಕೊಳ್ಳಲು ಆರಂಭಿಸಿದ್ದಾರೆ. ತನ್ನ ಶ್ರೇಷ್ಠತೆಯನ್ನು ವ್ಯಕ್ತಪಡಿಸಿಕೊಳ್ಳಲು ಉದಾಹರಿಸಿದ ಆಸ್ಟ್ರೇಲಿಯಾದ ವೇಗಿ ಮೆಕ್‌ಗ್ರಾಥ್ ಅವರ ವಿರುದ್ಧ ರಝಾಕ್‌ನ ರನ್‌ ಸಹಿತ ಜೋಕ್‌ಗಳನ್ನು ಸೃಷ್ಟಿಸಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ.

ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ಮುನಾಫ್ ಸ್ಲೋ ಬಾಲ್‌ಗೆ ಔಟ್‌ ಆಗಿದ್ದ ರಝಾಕ್:

ಮುನಾಫ್ ಸ್ಲೋ ಬಾಲ್‌ಗೆ ಔಟ್‌ ಆಗಿದ್ದ ರಝಾಕ್:

2011ರ ವಿಶ್ವಕಪ್‌ನ ಪಾಕ್‌ ವಿರುದ್ಧದ ಪಂದ್ಯದದಲ್ಲಿ ಮುನಾಫ್ ಪಟೇಲ್ ಎಸೆತ 116 ಕಿ.ಮೀ ನಷ್ಟು ನಿಧಾನಗತಿಯಲ್ಲಿದ್ದ ಬಾಲನ್ನು ಎದುರಿಸಲಾಗದೆ ರಝಾಕ್ ಕ್ಲೀನ್ ಬೌಲ್ಡ್‌ ಆಗಿದ್ದರು. ಇದರ ಚಿತ್ರ ಸಹಿತ ಫೋಟೋ ಹಾಕಿ ರಝಾಕ್ ಕಾಲೆಳೆದಿದ್ದಾರೆ.

ಮೆಕ್‌ಗ್ರಾಥ್ ವಿರುದ್ಧದ ಅಂಕಿ ಅಂಶಗಳೂ ಬಯಲು:

ಮೆಕ್‌ಗ್ರಾಥ್ ವಿರುದ್ಧದ ಅಂಕಿ ಅಂಶಗಳೂ ಬಯಲು:

ರಝಾಕ್ ತನ್ನ ಹೇಳಿಕೆಯಲ್ಲಿ ಮೆಕ್‌ಗ್ರಾಥ್ ಅವರನ್ನು ಎಳೆದು ತಂದಿದ್ದರು. ಹೀಗಾಗಿ ಮೆಕ್‌ಗ್ರಾಥ್ ವಿರುದ್ಧ ರಝಾಕ್ ಅವರ ಬ್ಯಾಟಿಂಗ್ ದಾಖಲೆಯನ್ನು ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲ ಒಂದು ಬಾರಿ ರಝಾಕ್ ಪಾಕಿಸ್ತಾನದ ಅಹ್ಮದ್ ಶೆಹ್‌ಜಾದ್ ಭಾರತದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್‌ ಕೊಹ್ಲಿಗಿಂತ ಪ್ರತಿಭಾನ್ವಿತ ಎಂದಿದ್ದರು ಎಂದು ತಮಾಷೆಯಾಡಿದ್ದಾರೆ.

ಹ್ಯಾಟ್ರಿಕ್ ಮೂಲಕ ಮಿಯಾಂದಾದ್‌ಗೆ ಉತ್ತರ ಕೊಟ್ಟಿದ್ದ ಇರ್ಫಾನ್ ಪಠಾಣ್:

ಹ್ಯಾಟ್ರಿಕ್ ಮೂಲಕ ಮಿಯಾಂದಾದ್‌ಗೆ ಉತ್ತರ ಕೊಟ್ಟಿದ್ದ ಇರ್ಫಾನ್ ಪಠಾಣ್:

ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್‌ಗೆ ಕಾಲಿಟ್ಟ ಸಂದರ್ಭದಲ್ಲಿ ಪಾಕಿಸ್ಥಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಇರ್ಫಾನ್ ಪಠಾಣ್‌ನಂತಾ ಬೌಲರ್‌ ಪಾಕಿಸ್ತಾನದ ಗಲ್ಲಿ ಗಲ್ಲಿಯಲ್ಲಿ ಸಿಗುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಇರ್ಫಾನ್ ಪಠಾಣ್ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್‌ ಕಬಳಿಸಿ ಉತ್ತರಕೊಟ್ಟಿದ್ದರು.

Story first published: Thursday, December 5, 2019, 15:31 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X