ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ವಿಂಡೀಸ್ ಸರಣಿಯಿಂದ ಟಿವಿ ಅಂಪೈರ್‌ ಮೇಲೆ ಐಸಿಸಿ ಹದ್ದಿನ ಕಣ್ಣು!

TV umpire no-ball trials from India-West Indies series

ನವದೆಹಲಿ, ನವೆಂಬರ್ 25: ಬ್ರಿಸ್ಬೇನ್‌ ಗಬ್ಬಾದಲ್ಲಿ ಮುಕ್ತಾಯಗೊಂಡಿರುವ ಪಾಕಿಸ್ತಾನ vs ಆಸ್ಟ್ರೇಲಿಯಾ ಮೊದಲನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಅಂಪೈರ್‌ಗಳು ನೋ ಬಾಲ್ ವಿಚಾರದಲ್ಲಿ ಸಾಕಷ್ಟು ಎಡವಟ್ಟುಗಳನ್ನು ಮಾಡಿದ್ದರು. ಇದು ಪಾಕಿಸ್ತಾನ ಬೌಲರ್‌ಗಳ ಹಿನ್ನಡೆಗೂ ಕಾರಣವಾಯಿತು. ಪರಿಣಾಮ ಪಂದ್ಯದಲ್ಲಿ ಪಾಕ್‌ ಸೋಲನುಭವಿಸಿತು.

ಮರಾಠ ಅರೇಬಿಯನ್ಸ್ ಮುಕುಟಕ್ಕೆ ಅಬುದಾಬಿ ಟಿ10 ಚಾಂಪಿಯನ್ ಕಿರೀಟಮರಾಠ ಅರೇಬಿಯನ್ಸ್ ಮುಕುಟಕ್ಕೆ ಅಬುದಾಬಿ ಟಿ10 ಚಾಂಪಿಯನ್ ಕಿರೀಟ

ಆಸ್ಟ್ರೇಲಿಯಾ-ಪಾಕಿಸ್ತಾನ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟಿಗೆ 21 ಫ್ರೆಂಟ್‌ ಫೂಟ್‌ ನೋ ಬಾಲ್‌ಗಳನ್ನು ಅಂಪೈಗಳು ಗಮನಿಸಿರಲಿಲ್ಲ. ಅಂಪೈರ್‌ ಎಡವಿದಾಗ ಥರ್ಡ್ ಆಂಪೈರ್‌ ಆದರೂ ಕೂಡಲೇ ಈ ತಪ್ಪನ್ನು ಬೆಳಕಿಗೆ ತರಲು ಅವಕಾಶವಿತ್ತು. ಆದರೆ ಥರ್ಡ್ ಅಂಪೈರ್‌ ಕೂಡ ಇಲ್ಲಿ ವೈಫಲ್ಯ ತೋರಿಕೊಂಡಿದ್ದರು.

ಐಪಿಎಲ್ ಹರಾಜು: ಮೂರು ತಂಡಗಳ ಕಣ್ಣು ಈ ಆಟಗಾರನ ಮೇಲೆಐಪಿಎಲ್ ಹರಾಜು: ಮೂರು ತಂಡಗಳ ಕಣ್ಣು ಈ ಆಟಗಾರನ ಮೇಲೆ

ಬ್ರಿಸ್ಬೇನ್ ಪಂದ್ಯದಲ್ಲಿನ ನೋ ಬಾಲ್ ವಿವಾದದ ಬಳಿಕ ಐಸಿಸಿ ನೋ ಬಾಲ್ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವತ್ತ ಯೋಚಿಸಿದೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಭಾರತ-ವೆಸ್ಟ್‌ ಇಂಡೀಸ್ ಸರಣಿಯಿಂದಲೇ ಐಸಿಸಿ, ಥರ್ಡ್ ಅಂಪೈರ್‌ನತ್ತ ಹದ್ದಿನ ಕಣ್ಣಿಡಲಿದೆ.

'ಮುಂದಿನ ಕೆಲ ತಿಂಗಳು, ನೋ ಬಾಲ್ ವಿಚಾರದಲ್ಲಿ ಥರ್ಡ್ ಅಂಪೈರ್‌ಗೆ ಟ್ರಯಲ್ಸ್ ನಡೆಸಲಿದೆ. ಡಿಸೆಂಬರ್ 6ರಿಂದ ಆರಂಭವಾಗಲಿರುವ ಭಾರತ-ವೆಸ್ಟ್ ಇಂಡೀಸ್ ಟಿ20 ಸರಣಿ ಮತ್ತು ಏಕದಿನ ಸರಣಿಯಿಂದಲೇ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ,' ಎಂದು ಐಸಿಸಿ ವಕ್ತಾರರು ತಿಳಿಸಿದ್ದಾರೆ.

ಇದು ಗುಡ್‌ ಬಾಲ್ or ನೋ ಬಾಲ್?: ವಿವಾದ ಹುಟ್ಟುಹಾಕಿದ ವಿಡಿಯೋ!ಇದು ಗುಡ್‌ ಬಾಲ್ or ನೋ ಬಾಲ್?: ವಿವಾದ ಹುಟ್ಟುಹಾಕಿದ ವಿಡಿಯೋ!

ಈ ನೋ ಬಾಲ್ ವಿವಾದಕ್ಕೆ ಕಿಡಿ ಹತ್ತಿಕೊಂಡಿದ್ದು 2019ರ ಐಪಿಎಲ್‌ನಲ್ಲಿ ಆರ್‌ಸಿಬಿ vs ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ. ಅಂದು ಸೂಪರ್ ಓವರ್‌ನ ಕೊನೇ ಎಸೆತದ ವೇಳೆ ಮುಂಬೈ ಬೌಲರ್ ಲಸಿತ್ ಮಾಲಿಂಗ ನೋ ಬಾಲ್ ಗೆರೆ ದಾಟಿ ಮುಂದಕ್ಕೆ ಕಾಲಿರಿಸಿದ್ದರು.

ಐಪಿಎಲ್‌ನಲ್ಲಿ ಮತ್ತೊಂದು ಹೊಸ ತಂಡ ಸೇರ್ಪಡೆಗೆ ಬಿಸಿಸಿಐ ಚಿಂತನೆ!ಐಪಿಎಲ್‌ನಲ್ಲಿ ಮತ್ತೊಂದು ಹೊಸ ತಂಡ ಸೇರ್ಪಡೆಗೆ ಬಿಸಿಸಿಐ ಚಿಂತನೆ!

ಆದರೆ ಮಾಲಿಂಗ ನೋ ಬಾಲ್ ಎಸೆದಿದ್ದನ್ನು ಆನ್ ಫೀಲ್ಡ್ ಅಂಪೈರ್ ಎಸ್ ರವಿ ಗಮನಿಸಿರಲಿಲ್ಲ. ವಿಡಿಯೋದಲ್ಲಿ ತಪ್ಪು ಕಂಡುಬಂದಿತ್ತಾದರೂ ಅಷ್ಟರಲ್ಲಾಗಲೇ ಫಲಿತಾಂಶ ಮುಂಬೈ ಪರ ಬಂದಾಗಿತ್ತು. ಇದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಸಿಟ್ಟಿಗೇಳಿಸಿತ್ತು. ಕೊಹ್ಲಿ ಅಂದು ಅಸಮಾಧಾನ ತೋರಿಕೊಂಡಿದ್ದರು.

Story first published: Monday, November 25, 2019, 16:31 [IST]
Other articles published on Nov 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X