ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಿಣುಕಾಡಿ ಗೆದ್ದ ಭಾರತಕ್ಕೆ ಟೀಕೆ, ಹಾಂಕಾಂಗ್‌ಗೆ ಪ್ರಶಂಸೆಗಳ ಮಳೆ

Tweet reactions of India vs Hong kong match

ದುಬೈ, ಸೆಪ್ಟೆಂಬರ್ 19: ಭಾರತ-ಹಾಂಕಾಂಗ್ ನಡುವೆ ನಿನ್ನೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಭಾರತ 26 ರನ್‌ಗಳಿಂದ ಗೆದ್ದಿದೆ. ಆದರೆ ಟ್ವಿಟ್ಟಿಗರ ಹೃದಯ ಗೆದ್ದಿರುವುದು ಮಾತ್ರ ಹಾಂಕಾಂಗ್ ತಂಡ!

ಹೌದು, ನಿನ್ನೆ ನಡೆದ ಪಂದ್ಯದಲ್ಲಿ ಹಾಂಕಾಂಗ್ ನೀಡಿದ ಕೆಚ್ಚೆದೆಯ ದಿಟ್ಟ ಹೋರಾಟ ಕ್ರಿಕೆಟ್ ಪ್ರಿಯರ ಮನಗೆದ್ದಿದೆ. ಹಾಂಕಾಂಗ್‌ನಂತಹ ಕ್ರಿಕೆಟ್ ಶಿಶು ವಿರುದ್ಧ ತಿಣುಕಾಡಿ ಗೆದ್ದ ಭಾರತ ತಂಡದ ವಿರುದ್ಧ ಟೀಕೆಗಳು ಎದ್ದಿವೆ.

ಏಷ್ಯಾ ಕಪ್: ಕ್ರಿಕೆಟ್ ಶಿಶು ಹಾಂಕಾಂಗ್ ಎದುರು ತಿಣುಕಾಡಿ ಗೆದ್ದ ಭಾರತ! ಏಷ್ಯಾ ಕಪ್: ಕ್ರಿಕೆಟ್ ಶಿಶು ಹಾಂಕಾಂಗ್ ಎದುರು ತಿಣುಕಾಡಿ ಗೆದ್ದ ಭಾರತ!

ಟ್ವಿಟ್ಟರ್‌ನಲ್ಲಿಯಂತೂ ನಿನ್ನೆಯ ಭಾರತ-ಹಾಂಕಾಂಗ್ ಪಂದ್ಯದ ಬಗ್ಗೆ ತರಹೇವಾರಿ ಟ್ವೀಟ್‌ಗಳು ಕಾಣಸು ಸಿಗುತ್ತವೆ. ಕೆಲವು ಗಂಭೀರ ಕೆಲವು ವ್ಯಂಗ್ಯ ಆದರೆ ಬಹುತೇಕ ಟ್ವೀಟ್‌ಗಳಲ್ಲಿ ಹಾಂಕಾಂಗ್ ತಂಡದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಕೋರ್ ಕಾರ್ಡ್

ಎಂ.ಎಸ್.ಧೋನಿ ಶೂನ್ಯಕ್ಕೆ ಔಟಾಗಿದ್ದು, ಶಿಖರ್ ಧವನ್ ಸೆಂಚುರಿ, ಹೊಸ ಆಟಗಾರ ಖಲೀಲ್ ಬೌಲಿಂಗ್‌ ವಿಶ್ಲೇಷಣೆಯೂ ಟ್ವಿಟ್ಟಿಗರು ಮಾಡಿದ್ದಾರೆ. ನಿನ್ನೆಯ ಪಂದ್ಯದ ಬಗೆಗಿನ ಕೆಲವು ಆಯ್ದ ಟ್ವೀಟ್‌ಗಳು ಇಲ್ಲಿವೆ.

ಐಪಿಎಲ್‌ನಲ್ಲಿ ಹಣ ಸಿಗುತ್ತಿದೆ ಇನ್ನೇನು ಬೇಕು

ಭಾರತ ತಂಡದ ಆಟಗಾರರು ಇಂಗ್ಲೆಂಡ್‌ ಪ್ರವಾಸದ ವೇಳೆ ಟೂರ್ ಮಾಡಿದ್ದನ್ನು ನೆನಪಿಸಿ ಟೀಕಿಸಿರುವ ಗಜೇಂದ್ರ ಸಿಂಗ್, ಇಂಗ್ಲೆಂಡ್‌ನಲ್ಲಿ ಶಾಪಿಂಗ್ ಮಾಡಿದ್ದಾಯಿತು. ಈಗ ದುಬೈನಲ್ಲಿ ಶಾಪಿಂಗ್ ಮಾಡಬೇಕೇನೋ, ಐಪಿಎಲ್‌ನಲ್ಲಿ ಹಣ ಸಿಗುತ್ತಿರುವಾಗ ಇಂತಹಾ ಪಂದ್ಯಗಳೆಲ್ಲಾ ಏಕೆ ಬೇಕು? ಎಂದು ಕಟುವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನವನ್ನು ಸೋಲಿಸುವ ತಂತ್ರವಾ?

ಚೆನ್ನಾಗಿ ಆಡಿದಿರಿ ಹಾಂಕಾಂಗ್ ನಿಮಗೆ ಭವಿಷ್ಯವಿದೆ. ಕ್ರಿಕೆಟ್ ಶಿಶುಗಳ ಆಟಕ್ಕೆ ಭಾರತದ ಬಳಿ ಪ್ರತಿತಂತ್ರವೇ ಇಲ್ಲದಾಗಿದೆ. ಅಥವಾ ಪಾಕಿಸ್ತಾನದ ವಿರುದ್ಧದ ಪಂದ್ಯ ಗೆಲ್ಲಲು ಇದು ರವಿಶಾಸ್ತ್ರಿ ತಂತ್ರವಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಭರತ್ ನಾಗ್.

ಏಷ್ಯಾ ಕಪ್: ಭಾರತದ ವಿರುದ್ಧವೇ ಆಡಲಿದ್ದಾರೆ ಭಾರತ ಮೂಲದ 'ನಾಯಕ'

ಭಾರತ ಬೇಕೆಂದೇ ಕೆಟ್ಟದಾಗಿ ಆಡಿದೆ

ಹಾಂಕಾಂಗ್ ವಿರುದ್ಧ ಭಾರತ ಬೇಕೆಂದೇ ಕೆಟ್ಟದಾಗಿ ಆಡಿದೆ. ಪಾಕಿಸ್ತಾನಕ್ಕೆ ಅತಿಯಾದ ಆತ್ಮವಿಶ್ವಾಸ ತುಂಬಿ ಅವರ ವಿರುದ್ಧ ಸುಲಭವಾಗಿ ಗೆಲ್ಲುವ ತಂತ್ರವಿದು. ಇದರ ಬಗ್ಗೆ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ರಜತ್ ಬಂಡಾರಿ.

ಈ ಪಂದ್ಯದಿಂದ ಬಿಜೆಪಿ ಪಾಠ ಕಲಿಯಬೇಕಿದೆ!

ಹಾಂಕಾಂಗ್-ಭಾರತ ತಂಡದ ಮ್ಯಾಚಿನಿಂದ ಬಿಜೆಪಿ ಪಾಠ ಕಲಿಯಬೇಕೆಂದಿದ್ದಾರೆ ಸುನಿಲ್. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, 2019ರ ಚುನಾವಣೆ ಭಾರತ-ಹಾಂಕಾಂಗ್‌ ಮ್ಯಾಚಿನಂತೆ ಆಗಿಬಿಡಬಹುದು ಎಂಬುದು ಬಿಜೆಪಿಗೆ ಅವರ ಸಲಹೆ.

ಕೋಚ್ ಬದಲಾವಣೆಗೆ ಕಾಲ

ನಿನ್ನೆಯ ಪಂದ್ಯ ನೋಡಿದ ಮೇಲೆ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯನ್ನು ಬದಲಾಯಿಸಲು ಇದು ಸಕಾಲ ಎನಿಸುತ್ತದೆ ಎಂದು ಬಿಸಿಸಿಐಗೆ ಸಲಹೆ ನೀಡಿದ್ದಾರೆ ಆಕರ್ಷ್ ಅಶೋಕ್. ರಾಹುಲ್ ದ್ರಾವಿಡ್ ಅವರ ಕೃಪೆಯಿಂದ ಕೆಲವು ಅತ್ಯುತ್ತಮ ಪ್ರತಿಭಾನ್ವಿತರು ತಂಡ ಪ್ರವೇಶಿಸಲು ಕಾಯುತ್ತಿದ್ದಾರೆ ಅವರಿಗೆ ಅವಕಾಶ ನೀಡಲು ಸಹ ಇದು ಸಕಾಲ ಎಂದಿದ್ದಾರೆ ಅವರು.

ರವಿಶಾಸ್ತ್ರಿಯ ದೂರ್ವಾಸ ಮುನಿ ಲುಕ್

ಸಿಡುಕು ಮೂತಿಯ ಭಾರತ ತಂಡದ ಹೆಡ್‌ ಕೋಚ್ ರವಿಶಾಸ್ತ್ರಿ ಹಾಂಕಾಂಗ್ ಬ್ಯಾಟಿಂಗ್ ನೋಡುತ್ತಿರುವಾಗಿನ ಚಿತ್ರವನ್ನು ರವೀಂದ್ರ ಜಡೇಜಾ ಹೆಸರಿನ ಪ್ಯಾರಿಡಿ ಖಾತೆ ಟ್ವೀಟ್ ಮಾಡಿದೆ. ರವಿಶಾಸ್ತ್ರಿ ಮುಖದಲ್ಲಿನ ಸಿಟ್ಟು, ಅಸಹನೆ ನಗು ತರಿಸುತ್ತದೆ.

ಭುವನೇಶ್ವರ್ ಕುಮಾರ್ ಆಡುವುದು ಅನುಮಾನ

ನಿನ್ನೆಯ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಪೂರ್ಣ ಫಿಟ್ ಆದಂತೆ ಕಾಣಲಿಲ್ಲ. ಅವರಿನ್ನೂ ಗಾಯದ ಸಮಸ್ಯೆಯಿಂದ ಹೊರಬಂದಂತಿಲ್ಲ ಹಾಗಾಗಿ ಅವರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಹಾಗಾಗಿ ಕಲೀಲ್ ಅಹ್ಮದ್ ತಂಡದಲ್ಲಿ ಉಳಿದುಕೊಳ್ಳಬಹುದು. ಭುವನೇಶ್ವರ್ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಬರಬಹುದು ಎಂದು ಟ್ವೀಟ್ ಮಾಡಿದ್ದಾರೆ ರವೀಂದ್ರ ಜಡೇಜಾ ಪ್ಯಾರೆಡಿ ಖಾತೆ.

ಪಾಕಿಸ್ತಾನದ ಅಭಿಮಾನಿಗಳಿಗೆ

ಭಾರತ ಸೋಲುತ್ತದೆ ಎಂದು ಬಹಳ ಸಂಯಮದಿಂದ ಕಾದಿದ್ದ ಪಾಕಿಸ್ತಾನಿ ಅಭಿಮಾನಿಗಳಿಗೆ.. ಎಂದು ಕ್ಯಾಪ್ಷನ್ ನೀಡಿ ವಿಡಿಯೋ ಒಂದನ್ನು ಹಾಕಿದ್ದಾರೆ ಶಾಯಿಕ್ ರಶೀದ್.

ಇದು ರವಿಶಾಸ್ತ್ರಿಯ ಅಂತಿಮ ಪಂದ್ಯ

ಭಾರತ-ಹಾಂಕಾಂಗ್ ನಡುವಿನ ಪಂದ್ಯ ರವಿಶಾಸ್ತ್ರಿಯ ಕೊನೆಯ ಪಂದ್ಯ. ಎಲ್ಲರೂ ಭಾಗವಹಿಸಿ ನಿಮ್ಮ ಅಂತಿಮ ಹಾರೈಕೆಗಳನ್ನು ಸಲ್ಲಿಸಿ ಎಂದು ಗಬ್ಬರ್ ಎನ್ನುವ ಪ್ಯಾರಿಡಿ ಖಾತೆ ಟ್ವೀಟ್ ಮಾಡಿದೆ. ಟ್ವೀಟ್ ಗೆ ಹಾಕಿರುವ ರವಿಶಾಸ್ತ್ರಿಯ ಡೊಳ್ಳು ಹೊಟ್ಟೆ ಚಿತ್ರ ಮಜವಾಗಿದೆ.

Story first published: Wednesday, September 19, 2018, 10:59 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X