ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವೀಟ್ಸ್ : ದಿನೇಶ್ ಕಾರ್ತಿಕ್ ಬದಲಿಗೆ ಕೆಎಲ್ ರಾಹುಲ್ ಆಯ್ಕೆ ಏಕೆ?

Twitter reaction : BCCI selects KL Rahul for ODI Series against Australia

ಬೆಂಗಳೂರು, ಫೆಬ್ರವರಿ 15: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಎರಡು ಟಿ20 ಮತ್ತು ಐದು ಏಕದಿನ ಪಂದ್ಯಗಳಿಗಾಗಿ ಒಟ್ಟು ಮೂರು ತಂಡಗಳನ್ನು ಇಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

ಫೆಬ್ರವರಿ 24ರಿಂದ ಆರಂಭಗೊಳ್ಳಲಿರುವ ಸರಣಿ ಆಡಲಿರುವ ಭಾರತ ತಂಡವನ್ನು ನ್ಯೂಜಿಲೆಂಡ್ ಸರಣಿಯಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದ ನಾಯಕ ವಿರಾಟ್ ಕೊಹ್ಲಿ, ತಂಡ ಸೇರಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗುವುದು ಎಂಬ ಸುದ್ದಿಯಿತ್ತು. ಆದರೆ, ಟಿ20ಐ ಹಾಗೂ ಏಕದಿನ ಸರಣಿಗೆ ಆಯ್ಕೆಯಾದ ಎರಡು ತಂಡದಲ್ಲೂ ರೋಹಿತ್ ಇದ್ದಾರೆ.

ಟಿವಿ ಶೋವೊಂದರಲ್ಲಿ ನೀಡಿದ್ದ ಹೇಳಿಕೆಯಿಂದಾಗಿ ಅಮಾನತುಗೊಂಡಿದ್ದ ಕೆ.ಎಲ್. ರಾಹುಲ್ ಅವರು ನಿಷೇಧದಿಂದ ಹೊರ ಬಂದು, ಭಾರತ ಎ ತಂಡದ ನಾಯಕತ್ವ ವಹಿಸಿಕೊಂಡು ಇಂಗ್ಲೆಂಡ್ ಲಯನ್ಸ್ ವಿರುದ್ಧ ಜಯ ದಾಖಲಿಸಿದ್ದಾರೆ. ತಂಡದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ತಂಡಕ್ಕೆ ಮರಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಗಳಿಗೆ ಭಾರತ ತಂಡ ಪ್ರಕಟ

ಆದರೆ, ಸತತ ವೈಫಲ್ಯ ಕಂಡಿದ್ದ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದೇಕೆ ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಕೆಎಲ್ ರಾಹುಲ್ ಆಯ್ಕೆ ಏಕೆ?

ಕೆಎಲ್ ರಾಹುಲ್ ಅವರು ಸತತವಾಗಿ ವಿಫಲರಾದರೂ ವಿರಾಟ್ ಕೊಹ್ಲಿ ಅವರು ಪಾಠ ಕಲಿತ್ತಂತೆ ಕಾಣುತ್ತಿಲ್ಲ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ನಡೆದಿದ್. ಇದೆಂಥ ನಾಯಕತ್ವ, ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಕೆಎಲ್ ರಾಹುಲ್ ಆಯ್ಕೆ ಹೇಗೆ ಸಾಧ್ಯ.

ದಿನೇಶ್ ಕಾರ್ತಿಕ್ ಗೆ ಅನ್ಯಾಯ

ದಿನೇಶ್ ಕಾರ್ತಿಕ್ ಹಾಗೂ ಕೆಎಲ್ ರಾಹುಲ್ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಬ್ಬರಿಗೂ ಪ್ರತ್ಯೇಕ ಪಾತ್ರಗಳಿವೆ. ಆದ್ರೆ, ದಿನೇಶ್ ಕಾರ್ತಿಕ್ ಗೆ ಪದೇ ಪದೇ ಅನ್ಯಾಯವಾಗುತ್ತಿದೆ.

ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್

ನಾಲ್ಕನೇ ವೇಗಿಗಳಾಗಿ ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್ ಅವರಿಗೆ ಅವಕಾಶ ನೀಡಬೇಕಿತ್ತು. ಕೆಎಲ್ ರಾಹುಲ್ ಅವರಿಗೆ ಕೊನೆ ಅವಕಾಶ ಸಿಕ್ಕಿದೆ. ಇದರಲ್ಲಿ ತಪ್ಪೇನಿಲ್ಲ. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ತಪ್ಪು.

ಜಡೇಜ ತಂಡದಲ್ಲಿ ಏಕಿಲ್ಲ

ವ್ಈ ಸರಣಿಯಲ್ಲಿ ಆಡುವ ಸದಸ್ಯರು ಬಹುತೇಕ ಮುಂಬರುವ ವಿಶ್ವಕಪ್ ನಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆಯುವುದರಿಂದ ದಿನೇಶ್ ಕಾರ್ತಿಕ್, ರವೀಂದ್ರ ಜಡೇಜ, ಸುರೇಶ್ ರೈನಾ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಪ್ರಶ್ನೆಗಳು ಕೇಳಿ ಬಂದಿದೆ.

ಮಾಯಾಂಕ್ ಅಗರವಾಲ್ ಆಯ್ಕೆಯಾಗಬೇಕಿತ್ತು

ಮಯಾಂಕ್ ಅಗರವಾಲ್ ಆಯ್ಕೆಯಾಗಬೇಕಿತ್ತು. ಕೆಎಲ್ ರಾಹುಲ್ ಅವರಿಗೆ ಅವಕಾಶ ಸಿಗುವುದರೆ ಮಯಾಂಕ್ ಅವರಿಗೆ ಯಾಕೆ ಅವಕಾಶ ಸಿಗಬಾರದು.

ರಾಹುಲ್ ಲಕ್ಕಿ, ದಿನೇಶ್ ಕಾರ್ತಿಕ್ ಅನ್ ಲಕ್ಕಿ

ಕೆಎಲ್ ರಾಹುಲ್ ಲಕ್ಕಿ, ದಿನೇಶ್ ಕಾರ್ತಿಕ್ ಅನ್ ಲಕ್ಕಿ ಅಷ್ಟೇ. ಇಬ್ಬರು ಪ್ರತಿಭಾವಂತರು ಎಂದರು.

Story first published: Friday, February 15, 2019, 19:35 [IST]
Other articles published on Feb 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X