ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2020: ಐದು ವಿಕೆಟ್ ಪಡೆದ ವರುಣ್‌ಗೆ ಶುಭಾಶಯ ತಿಳಿಸಿದ ಕ್ರಿಕೆಟ್ ದಿಗ್ಗಜರು

Twitter Reaction On KKR Spinner Registering Maiden 5 Wicket Haul

ಅಬುಧಾಬಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆದ ಐಪಿಎಲ್ 13 ನೇ ಆವೃತ್ತಿಯ 42 ನೇ ಪಂದ್ಯದಲ್ಲಿ ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

12 ನೇ ಓವರ್‌ನ ತಡವಾಗಿ ಆರನೇ ಬೌಲರ್‌ನಂತೆ ಆಕ್ರಮಣಕ್ಕೆ ಪರಿಚಯಿಸಿದ ಚಕ್ರವರ್ತಿ, ದೆಹಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (27) ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು.

 IPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆ IPLನಲ್ಲಿ ಚೊಚ್ಚಲ 5 ವಿಕೆಟ್ ಪಡೆದ ಕೆಕೆಆರ್‌ನ ವರುಣ್ ಚಕ್ರವರ್ತಿ ದಾಖಲೆ

ಚಕ್ರವರ್ತಿ ತನ್ನ ಎರಡನೇ ಓವರ್ ಬೌಲ್ ಮಾಡುವ ಹೊತ್ತಿಗೆ, ಕ್ಯಾಪಿಟಲ್ಸ್‌ನ ಅಗತ್ಯ ರನ್ ದರ 14.42 ಕ್ಕೆ ಏರಿತು, ಪರಿಣಾಮ ಡೆಲ್ಲಿರ ಬ್ಯಾಟ್ಸ್‌ಮನ್‌ಗಳು ಕೆಕೆಆರ್ ಸ್ಪಿನ್ನರ್‌ನ ಮೇಲೆ ದಾಳಿ ಮಾಡಲು ಮುಂದಾದರು. ಆದರೆ ನಂತರ ನಡೆದಿದ್ದು ಪೆವಿಲಿಯನ್ ಪರೇಡ್.

ಮೊದಲ ಎಸೆತದಲ್ಲಿ ಕಠಿಣ ಕ್ಯಾಚ್ ಬೀಳಿಸಿದರೂ ಚಕ್ರವರ್ತಿ ತಮ್ಮ ಎರಡನೇ ಓವರ್‌ನಲ್ಲಿ ಒಂದೆರಡು ವಿಕೆಟ್‌ಗಳನ್ನು ಕಬಳಿಸಿದರು. ದೆಹಲಿ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮಾಯರ್ (10) ಮತ್ತು ನಾಯಕ ಶ್ರೇಯಸ್ ಅಯ್ಯರ್ (47) ಚಕ್ರವರ್ತಿಯ ಎರಡನೇ ಓವರ್‌ನಲ್ಲಿ ಔಟಾದ ಬ್ಯಾಟ್ಸ್‌ಮನ್‌ಗಳು.

ಕ್ಯಾಪಿಟಲ್ಸ್ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (6) ಚಕ್ರವರ್ತಿಯ ಮೂರನೇ ಓವರ್‌ನಲ್ಲಿ ಸಿಕ್ಸರ್‌ ಹೊಡೆಯಲು ಪ್ರಯತ್ನಿಸಿ ಔಟಾದ್ರು. ಅದೇ ಓವರ್‌ನ ಅಂತಿಮ ಎಸೆತದಲ್ಲಿ, ಡಿಸಿ ಆಲ್ರೌಂಡರ್ ಅಕ್ಷರ್ ಪಟೇಲ್ (9) ಚಕ್ರವರ್ತಿಯ ಐದನೇ ವಿಕೆಟ್ ಬಲಿಯಾದರು.

4 ಓವರ್‌ಗೆ 20 ರನ್ ನೀಡಿ 5 ವಿಕೆಟ್ ಪಡೆದ 29 ವರ್ಷದ ವರುಣ್ ಚಕ್ರವರ್ತಿ ಐಪಿಎಲ್ 2020 ರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ನೋಂದಾಯಿಸಿದ್ದಾರೆ, ಜೊತೆಗೆ ಇಂದು ರಾತ್ರಿ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ದಾಖಲಿಸಿದ್ದಾರೆ.

ಚಕ್ರವರ್ತಿಯ ಈ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಟ್ವಿಟ್ಟರ್‌ನಲ್ಲಿ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಶುಭಾಶಯ ಕೋರಿದ್ದಾರೆ.

Story first published: Saturday, October 24, 2020, 20:09 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X