ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಕತ್ ''ಸೌಂಡ್'' ಮಾಡುತ್ತಿದೆ ಐಪಿಎಲ್ 13 ಮೊದಲ ಪಂದ್ಯ!

ಅಬುಧಾಬಿ, ಸೆ. 19: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಸೀಸನ್ ಪ್ರಾರಂಭವಾಗಿದೆ. ಕೊರೊನಾ ವೈರಸ್‌ನಿಂದಾಗಿ ಖಾಲಿ ಕ್ರೀಡಾಂಗಣದ ಮಧ್ಯೆ ಯುಎಇಯಲ್ಲಿ ಈ ವರ್ಷ ಐಪಿಎಲ್ ಆಯೋಜಿಸಲಾಗುತ್ತಿದೆ. ಮೊದಲ ಪಂದ್ಯವೇ ಹಲವು ವಿಶೇಷಕ್ಕೆ ಕಾರಣವಾಗಿದ್ದು, ಸದ್ಯಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.

ಆದರೆ, ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮೈದಾನದಲ್ಲಿ ಸೆಣಸುವುದನ್ನು ಲೈವ್ ನೋಡುತ್ತಿದ್ದ ಪ್ರೇಕ್ಷಕರಿಗೆ ಅಚ್ಚರಿ ಉಂಟಾಗಿದೆ. ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದಿದ್ದರೂ ಪ್ರೇಕ್ಷಕರ ಹರ್ಷೋದ್ಗಾರ, ಚಪ್ಪಾಳೆ, ಡ್ರಮ್ಸ್ ಬೀಟ್ ಕೇಳಿಸಿದೆ.

ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಇದೇನು ಎಂದು ಕಣ್ಣುಜ್ಜಿಕೊಂಡು ಎರಡೆರಡು ಬಾರಿ ಸ್ಕ್ರೀನ್ ದಿಟ್ಟಿಸಿ ಕಿವಿ ಅಗಲಿಸಿ ಗಮನವಿಟ್ಟು ನೋಡಿದಾಗ ಇದು ನಕಲಿ ಸೌಂಡ್, ನಕಲಿ ಪ್ರೇಕ್ಷಕರನ್ನು ಸೃಷ್ಟಿಸಿ ಲೈವ್ ಫೀಡ್ ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಟ್ವಿಟ್ಟರಲ್ಲಿ ಪರ ವಿರೋಧ ಚರ್ಚೆ ಆರಂಭವಾಗಿದೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಜೈವಿಕ ಗುಳ್ಳೆಯ ಸುರಕ್ಷತೆಯೊಂದಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಶ್ರೀಮಂತ ಲೀಗ್ ಅನ್ನು ಆಯೋಜಿಸಿದೆ ಮತ್ತು ಯುಎಇ ಕ್ರಿಕೆಟ್ ಮಂಡಳಿ ಸುರಕ್ಷಿತ ವಾತಾವರಣ ನಿರ್ಮಿಸಿದೆ. ಆಟಗಾರರಿಗೆ ಸೂಕ್ತ ವಸತಿ, ಅಭ್ಯಾಸ, ತರಬೇತಿ ವ್ಯವಸ್ಥೆ ನೀಡಲಾಗಿದೆ. ಆದರೆ, ಆಟಗಾರರಿಗೆ ಪ್ರೇಕ್ಷಕರ ಕೊರತೆ ಎದ್ದುಕಾಣಿಸತೊಡಗಿದೆ.

ಅದುವೇ ನಕಲಿ ಸೌಂಡ್, ನಕಲಿ ಸ್ಟೇಡಿಯಂ ಪ್ರೇಕ್ಷಕರು

ಅದುವೇ ನಕಲಿ ಸೌಂಡ್, ನಕಲಿ ಸ್ಟೇಡಿಯಂ ಪ್ರೇಕ್ಷಕರು

ಮೈದಾನದಲ್ಲಿ ಸಿಕ್ಸ್, ಫೋರ್ ಬಾರಿಸಿದಾಗ, ಕ್ಯಾಚ್ ಬಿಟ್ಟಾಗ, ಸ್ಟಂಪ್, ರನೌಟ್ ಆದಾಗ, ಮಿಸ್ ಫೀಲ್ಡ್ ಆದಾಗ ಪ್ರೇಕ್ಷಕರು ಕೊಡುವ ರಿಯಾಕ್ಷನ್ ಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಆಟಗಾರರು ಮಿಸ್ ಮಾಡಿಕೊಳ್ಳುತ್ತಾರೆ ನಿಜ, ಆದರೆ, ಟಿವಿ, ಆಪ್ ಮೂಲಕ ಪಂದ್ಯ ನೋಡುವ ಪ್ರೇಕ್ಷಕರಿಗೆ ನೈಜ ಪ್ರೇಕ್ಷಕರಿಂದ ತುಂಬಿದ ಸ್ಟೇಡಿಯಂ ಅನುಭವ ಒದಗಿಸಲು ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದು, ಅದುವೇ ನಕಲಿ ಸೌಂಡ್, ನಕಲಿ ಸ್ಟೇಡಿಯಂ ಪ್ರೇಕ್ಷಕರು.

ಆಪ್ ಬಳಸಿ ವೀಕ್ಷಣೆಯಲ್ಲಿ ಇದು ಮಾಮೂಲಿ

ಆಪ್ ಬಳಸಿ ವೀಕ್ಷಣೆಯಲ್ಲಿ ಇದು ಮಾಮೂಲಿ

ಬಿಸಿಸಿಐ ಕ್ರೀಡಾಂಗಣದಲ್ಲಿ 4 ಅಭಿಮಾನಿಗಳ ಗೋಡೆಯನ್ನು ಏರ್ಪಡಿಸಿದೆ, ಪಂದ್ಯದೊಂದಿಗೆ ತೊಡಗಿಸಿಕೊಳ್ಳಲು ತನ್ನ ಪ್ರೇಕ್ಷಕರ ಸಾಮಾಜಿಕ ದೂರವನ್ನು ಗಮನದಲ್ಲಿಟ್ಟುಕೊಂಡು, ಪ್ರೇಕ್ಷಕರು ಲೈವ್ ಪಂದ್ಯವನ್ನು ವಾಸ್ತವ ರೀತಿಯಲ್ಲಿ ಆನಂದಿಸಬಹುದು. ಬಿಸಿಸಿಐ ಸ್ಥಾಪಿಸಿರುವ ಈ ಫ್ಯಾನ್ ಗೋಡೆಗಳಲ್ಲಿ ಲಭ್ಯವಿರುವ ಎರಡೂ ತಂಡಗಳಿಗೆ 96 ಸ್ಲಾಟ್‌ಗಳು ಲಭ್ಯವಿರುತ್ತವೆ. ಈ ಮೂಲಕ ಅಭಿಮಾನಿಗಳು ಮನೆಯಲ್ಲಿ ಕುಳಿತುಕೊಳ್ಳುವ ಕ್ರೀಡಾಂಗಣಕ್ಕೆ ಸಂಪರ್ಕ ಸಾಧಿಸಬಹುದು ಮತ್ತು ಲೈವ್ ಪಂದ್ಯವನ್ನು ಆನಂದಿಸಬಹುದು.

IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ವರ್ಚುವಲ್ ಫ್ಯಾನ್ ಗೋಡೆ

ಬುಕ್ ಮೈ ಶೋ ಸೇರಿದಂತೆ ಕೆಲವು ಆಪ್ ಆಧಾರಿತ ಲೈವ್ ಪಂದ್ಯಗಳಲ್ಲಿ ವರ್ಚುವಲ್ ಫ್ಯಾನ್ ಗೋಡೆ, ಫ್ಯಾನ್ ಚೀರಾಟ ಮಾಮೂಲಿ, 2207ರ ಕ್ರಿಕೆಟ್ ವಿಡಿಯೋ ಗೇಮ್ ನಲ್ಲೇ ಇದು ಬಂದಿದೆ. ಬಿಸಿಸಿಐ ಈಗ ಕಣ್ಣು ತೆರೆದಿದೆ ಎಂದು ಟ್ವೀಟ್ ಮಾಡಿದ ಸಿದ್ದಾಥ್ ಉಪಾಧ್ಯಾಯ್ (@SSSid_tweets).

ಸೌಂಡ್ ಇಲ್ಲದೆ ಪಂದ್ಯದ ಮಜಾವೇ ಇರೋದಿಲ್ಲ

ಸೌಂಡ್ ಇಲ್ಲದೆ ಪಂದ್ಯದ ಮಜಾವೇ ಇರೋದಿಲ್ಲ, ಐಪಿಎಲ್ ಎಂದರೆ ಪ್ರೇಕ್ಷಕರ ಕೂಗಾಟ, ಕಿರುಚಾಟ, ಕೇಕೆ ಇರಬೇಕು, ಡ್ರಮ್ಸ್ ಬೀಟ್, ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಇಲ್ಲದೆ ಪಂದ್ಯ ನೋಡುವುದು ಏನು ಚೆಂದ ಎಂದ ಪ್ರಶ್ನಿಸಿದ ಶ್ರೀ ನಂದನ್.

Story first published: Sunday, September 20, 2020, 0:12 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X