ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳಿಂದ ಕಿಡಿ

Twitterati blasts Ajinkya Rahane over poor home form

ಚೆನ್ನೈ, ಫೆಬ್ರವರಿ 9: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಭಾರತಕ್ಕೆ ಭಾರಿ ಅಂತರದಿಂದ ಸೋಲುಂಟಾಗಿದೆ. ಸೋಲಿನ ನಂತರ ಸಹಜವಾಗಿ ಅನೇಕ ಪ್ರಶ್ನೆಗಳು ಎದ್ದಿವೆ. ಉಪ ನಾಯಕ ಅಜಿಂಕ್ಯ ರಹಾನೆ ಅವರು ಆಂಡರ್ಸನ್ ಎಸೆತಕ್ಕೆ ಬೌಲ್ಡ್ ಆದ ರೀತಿಯನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಹಾನೆಯ ಅಂಕಿ ಅಂಶಗಳನ್ನು ಹಂಚಿಕೊಂಡು ಛೀಮಾರಿ ಹಾಕುತ್ತಿದ್ದಾರೆ.

ಮೆಲ್ಬೋರ್ನ್ ಮೈದಾನದಲ್ಲಿ ಶತಕ ಸಿಡಿಸಿದ್ದ ರಹಾನೆ ಉತ್ತಮ ಲಯದಲ್ಲಿದ್ದರು ಆದರೆ, ಇಂಗ್ಲೆಂಡ್ ವಿರುದ್ಧದ ಯಾಕೆ ಈ ರೀತಿ ಆಡುತ್ತಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಜೇಮ್ಸ್ ಆಂಡರ್ಸನ್ ಅವರಿಗೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಭಾರತೀಯ ಬ್ಯಾಟ್ಸ್ ಮನ್ ಪೈಕಿ ರಹಾನೆ 4 ಮುಂದಿದ್ದಾರೆ.

ಅಂಕಿ ಅಂಶಗಳ ಪ್ರಕಾರ ರಹಾನೆ ಅವರು 2016/17ರ ಇಂಗ್ಲೆಂಡ್ ಸರಣಿ ನಂತರ 20 ಟೆಸ್ಟ್ ಪಂದ್ಯಗಳ 29 ಇನ್ನಿಂಗ್ಸ್ ಗಳಲ್ಲಿ ಸ್ಪಿನ್ನರ್ ಗಳಿಗೆ 19 ಬಾರಿ ವಿಕೆಟ್ ಒಪ್ಪಿಸಿದ್ದು, 25.31 ರನ್ ಸರಾಸರಿಯನ್ನು ಹೊಂದಿದ್ದಾರೆ.

ಒಟ್ಟಾರೆ, 2016ರಿಂದ ಇಲ್ಲಿ ತನಕ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ವಿರುದ್ಧ 27 ಪಂದ್ಯಗಳಿಂದ 49 ಇನ್ನಿಂಗ್ಸ್ ಗಳಲ್ಲಿ 1368ರನ್ ಗಳಿಸಿದ್ದು, 29.73 ರನ್ ಸರಾಸರಿ ಹೊಂದಿದ್ದು, 2 ಶತಕ, 6 ಅರ್ಧಶತಕ ಗಳಿಸಿದ್ದಾರೆ. ತಂಡದಲ್ಲಿ ಉಪ ನಾಯಕರಾಗಿ ಉಳಿದು ಕೊಂಡರೂ ಬ್ಯಾಟ್ಸ್ ಮನ್ ಆಗಿ ಕೊಡುಗೆ ಏನು ಪ್ರಶ್ನಿಸಿದ್ದಾರೆ.

Story first published: Tuesday, February 9, 2021, 20:21 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X