ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 : ತ್ವರಿತಗತಿ 50 ಗಳಿಸಿದ ಸ್ಮೃತಿ ಕೊಂಡಾಡಿದ ಟ್ವೀಟ್ ಲೋಕ!

By Mahesh
Twitterati salutes Smriti Mandhana for smashing the fastest fifty in Kia Super League

ಬೆಂಗಳೂರು, ಜುಲೈ 29: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಟ್ರಾಲ್ ಬ್ಲಾಜರ್ಸ್ ತಂಡದ ನಾಯಕಿ, ಟೀಂ ಇಂಡಿಯಾದ ಪ್ರಮುಖ ಆಟಗಾರ್ತಿ ಸ್ಮೃತಿ ಮಂದಾನ ಅವರು ಇಂಗ್ಲೆಂಡಿನ ಕಿಯಾ ಸೂಪರ್ ಲೀಗ್ ನಲ್ಲಿ ಸಕತ್ತಾಗಿ ಮಿಂಚುತ್ತಿದ್ದಾರೆ. ವೆಸ್ಟರ್ನ್ ಸ್ಟ್ರೋಮ್ ತಂಡದ ಪರ ಆಡುತ್ತಿರುವ ಸ್ಮೃತಿ ಹೊಸ ದಾಖಲೆ ಬರೆದಿದ್ದಾರೆ.

ಕಿಯಾ ಸೂಪರ್ ಲೀಗ್ ನಲ್ಲಿ ಆಡುತ್ತಿರುವ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಅವರು, ಅವರು 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಈ ಲೀಗ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ, ಟಿ20 ಇತಿಹಾಸದಲ್ಲಿ ತ್ವರಿತಗತಿಯಲ್ಲಿ ಅರ್ಧಶತಕ ಗಳಿಸಿದ ಆಟಗಾರ್ತಿ ಎಂಬ ಸಾಧನೆ ಮಾಡಿದ ಎರಡನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಸ್ಮೃತಿ ಅವರ ಸಾಧನೆಯನ್ನು ಕಂಡು ಹಲವಾರು ಮಂದಿ, ಟ್ವಿಟ್ಟರ್ ನಲ್ಲಿ ಶುಭಹಾರೈಸಿದ್ದಾರೆ. ಭಾರತದ ಹೆಮ್ಮೆ ಎಂದು ಕೊಂಡಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಕುಮಾರ ಸಂಗಕ್ಕಾರ ಅವರು ಕೂಡಾ ಸ್ಮೃತಿ ಬ್ಯಾಟಿಂಗ್ ಹೊಗಳಿದ್ದಾರೆ. ಪಂದ್ಯದ ನಂತರ ಸಂಗಕ್ಕಾರ ಅವರನ್ನು ಭೇಟಿ ಮಾಡಿದ ಸ್ಮೃತಿ, ಅಭಿಮಾನಿಯಾಗಿ ಸಂಗಕ್ಕಾರ ಭೇಟಿ ಮಾಡಿದ ಸಾರ್ಥಕ ಕ್ಷಣ ಎಂದು ಹೇಳಿದ್ದಾರೆ.

ಕಿಯಾ ಲೀಗ್ ನಲ್ಲಿ ಅತಿ ಹೆಚ್ಚು ಸಿಕ್ಸರ್

ಕಿಯಾ ಸೂಪರ್ ಲೀಗ್ ನಲ್ಲಿ (3 ಇನ್ನಿಂಗ್ಸ್ ನಲ್ಲಿ) ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪೈಕಿ ಸ್ಮೃತಿ (11 ಸಿಕ್ಸರ್) ಅಗ್ರಸ್ಥಾನಕ್ಕೇರಿದ್ದಾರೆ.

ಸ್ಮೃತಿ ಸ್ಟ್ರೈಕ್ ರೇಟ್ 228

ಕಿಯಾ ಸೂಪರ್ ಲೀಗ್ 2018ರಲ್ಲಿ ಸ್ಮೃತಿ 48, 37, ಹಾಗೂ 52 ರನ್ ಗಳಿಸಿದ್ದು, 137ರನ್ (60ಎಸೆತಗಳಲ್ಲಿ) ಸ್ಟ್ರೈಕ್ ರೇಟ್ 228.

ಸ್ಮೃತಿ ಮಂದಾನ ಕೋಚ್ ಯಾರು

ಸ್ಮೃತಿ ಮಂದಾನ ಕೋಚ್ ಯಾರು? ವೀರೇಂದ್ರ ಸೆಹ್ವಾಗ್ ಇರಬಹುದೇ? ಎಂಬ ಪ್ರಶ್ನೆ ಕೇಳಿದ್ದಾರೆ. ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ, ಕುಮಾರ್ ಸಂಗಕ್ಕಾರ ಅವರಿಗೆ ಹೋಲಿಸಲಾಗುತ್ತಿದೆ.

ಸ್ಮೃತಿ ಮಂದಾನ ದಾಖಲೆಗಳು

ಕಿಯಾ ಸೂಪರ್ ಲೀಗ್ ನಲ್ಲಿ ತ್ವರಿತಗತಿಯಲ್ಲಿ ಅರ್ಧಶತಕ ಗಳಿಸಿದ್ದಾರೆ. ಈ ಮುಂಚೆ ರಶೇಲ್ ಪ್ರೀಸ್ಟ್ 22 ಎಸೆತೆಗಳಲ್ಲಿ ಅರ್ಧಶತಕ ಗಳಿಸಿದ್ದರು. ಟಿ20ಯಲ್ಲಿ ಜಂಟಿಯಾಗಿ ತ್ವರಿತಗತಿ ಅರ್ಧಶತಕ(18ಎಸೆತಗಳಲ್ಲಿ) ಸಾಧನೆ ಕೂಡಾ ಸ್ಮೃತಿ ಬರೆದಿದ್ದಾರೆ.

ಕುಮಾರ್ ಸಂಗಕ್ಕಾರರಿಂದ ಟ್ವೀಟ್

ಶ್ರೀಲಂಕಾದ ದಿಗ್ಗಜ ಮಾಜಿ ಆಟಗಾರ ಕುಮಾರ ಸಂಗಕ್ಕಾರ ಅವರು ಸ್ಮೃತಿ ಅವರ ಆಟ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

Story first published: Monday, July 30, 2018, 0:18 [IST]
Other articles published on Jul 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X