ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ABDಯನ್ನು ಪ್ರಯೋಗ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ಕೊಹ್ಲಿ?: ಟ್ವಿಟರ್‌ನಲ್ಲಿ ಭಾರೀ ಟೀಕೆ

 Twitterrati Slam Virat Kohli Captaincy : Gayle Storm Hits Sharjah

ಶಾರ್ಜಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020) ನ 13 ನೇ ಆವೃತ್ತಿಯ 31 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಗ್ಗರಿಸಿತು. ಆದರೆ ಸೋಲಿನ ಬಳಿಕ ನಾಯಕ ವಿರಾಟ್‌ ಕೊಹ್ಲಿ ನಿರ್ಧಾರವೇ ಈ ಸೋಲಿಗೆ ಕಾರಣವಾಯ್ತು ಎಂಬ ಟೀಕೆಗಳಿಗೆ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಆ್ಯರೋನ್ ಫಿಂಚ್ ಮತ್ತು ದೇವದತ್ ಪಡಿಕ್ಕಲ್ ಮತ್ತೊಮ್ಮೆ ಪವರ್‌ಪ್ಲೇನಲ್ಲಿ ಉತ್ತಮ ಆರಂಭ ತಂದುಕೊಟ್ಟರು. ದೇವದತ್ ಪಡಿಕ್ಕಲ್ ಔಟಾದ ಬಳಿಕ ಕಣಕ್ಕಿಳಿದ ವಿರಾಟ್‌, 7 ನೇ ಓವರ್‌ನಲ್ಲಿ ಫಿಂಚ್ ಔಟಾದ ತಕ್ಷಣ ಎಂದಿನಂತೆ ಬರಬೇಕಿದ್ದ ಎಬಿಡಿ ವಿಲಿಯರ್ಸ್‌ಗೆ ಮಣೆ ಹಾಕಲಿಲ್ಲ.

ಐಪಿಎಲ್‌ನಲ್ಲಿ ಈ ಬೌಲರ್‌ಗಳು ಒಂದೇ ಓವರ್‌ನಲ್ಲಿ ಕೊಹ್ಲಿ, ಎಬಿಡಿ ವಿಕೆಟ್ ಪಡೆದಿದ್ದಾರೆ!

ಬದಲಿಗೆ ವಾಷಿಂಗ್ಟನ್ ಸುಂದರ್ ಮತ್ತು ನಂತರದಲ್ಲಿ ಶಿವಂ ದುಬೆಯನ್ನು ವಿವರಿಸಲಾಗದ ರೀತಿಯಲ್ಲಿ ಕಣಕ್ಕಿಳಿಸಿದರು. ಆದರೆ ಅವರಿಬ್ಬರು ಔಟಾದ ಬಳಿಕ ಆರನೇ ಕ್ರಮಾಂಕದಲ್ಲಿ ಎಬಿಡಿ ಎದುರಿಸಿದ ಐದು ಎಸೆತಗಳಲ್ಲಿ ಎರಡು ರನ್‌ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಇದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಕೂಡ ಔಟಾಗಿದ್ದು ತಂಡಕ್ಕೆ ಭಾರೀ ಹೊಡೆತ ನೀಡಿತು.

ಶಾರ್ಜಾದಲ್ಲಿ 200ಕ್ಕೂ ಹೆಚ್ಚು ರನ್‌ಗಳು ಈ ಬಾರಿಯ ಋತುವಿನಲ್ಲಿ ರನ್ ಚೇಸ್ ಆಗಿದ್ದು, ಎಬಿಡಿಯನ್ನು ಬದಿಗಿಟ್ಟು ಯುವಕರಿಗೆ ಪ್ರಮೋಟ್ ಮಾಡಿದ ರೀತಿಯು ಹಾಗೂ ಎಬಿಡಿಯನ್ನು ಡಿ- ಪ್ರಮೋಟ್ ಮಾಡಿದ ಕೊಹ್ಲಿ ಭಾರೀ ಟೀಕೆ ಎದುರಾಯಿತು. ಅಲ್ಲದೆ ರನ್ ಚೇಸ್ ಮಾಡುವ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ನಿರ್ಧಾರದ ಬಗ್ಗೆ ಟ್ವಿಟರ್‌ನಲ್ಲಿ ಭಾರೀ ಟೀಕೆಗಳು ಎದುರಾಗಿದೆ.

Story first published: Friday, October 16, 2020, 10:05 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X