ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!

ಮುಂಬೈ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ವಿಶ್ವದಲ್ಲೇ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡವರು. ಕೊರೊನಾವೈರಸ್‌ನಿಂದಾಗಿ ಸದ್ಯ ಭಾರತದಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ರೋಹಿತ್ ಕೂಡ ಇತ್ತೀಚೆಗೆ ಸಾಮಾಜಿಕ ತಾಲತಾಣಗಳಲ್ಲಿ ಆಗೀಗ ಕಾಣಿಸಿಕೊಳ್ಳುತ್ತಿದ್ದಾರೆ. ಈಚೆಗೆ ಶರ್ಮಾ ಮತ್ತು ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಮಯಾಂಕ್ ಅಗರ್ವಾಲ್ ಅವರ 'ಓಪನ್ ನೆಟ್ಸ್ ವಿತ್ ಮಯಾಂಕ್' ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದರು.

'ಒಬ್ಬ ಭಾರತೀಯನೂ ಸೇರಿ 3 ದಿಗ್ಗಜರ ವಿಕೆಟ್ ಪಡೆಯೋದು ನನ್ನ ಕನಸು'

ಯುವ ಬ್ಯಾಟ್ಸ್‌ಮನ್‌ ಮಯಾಂಕ್ ಜೊತೆಗಿನ ಎಪಿಸೋಡ್‌ನಲ್ಲಿ ರೋಹಿತ್ ಕಾಣಿಸಿಕೊಂಡಿದ್ದಾಗ, ಶರ್ಮಾ ಅವರಲ್ಲಿದ್ದ ಎರಡು ಕೆಟ್ಟ ಅಭ್ಯಾಸಗಳ ಬಗ್ಗೆ ಮಯಾಂಕ್ ಹೇಳಿದ್ದರು. ರೋಹಿತ್ ಅವರಲ್ಲಿದ್ದ ಈ ಎರಡು ಅಭ್ಯಾಸಗಳ ಬಗ್ಗೆ ಮಯಾಂಕ್‌ಗೆ ಹೇಳಿದ್ದು ರೋಹಿತ್ ಪತ್ನಿ ರಿತಿಕಾ ಸದ್ಜೇಹ್ ಅಂತೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿ

ರಿತಿಕಾ ಹೇಳಿದ್ದ, ರೋಹಿತ್ ಅವರಲ್ಲಿದ್ದ ಆ ಎರಡು ಕೆಟ್ಟ ಅಭ್ಯಾಸಗಳ ಬಗ್ಗೆ ಮಯಾಂಕ್ ಮಾತನಾಡುತ್ತಲೇ 'ಓಪನ್ ನೆಟ್ಸ್ ವಿತ್ ಮಯಾಂಕ್' ಎಪಿಸೋಡ್‌ನಲ್ಲಿ ಪಾಲ್ಗೊಂಡಿದ್ದ ರೋಹಿತ್, ಧವನ್ ಮಯಾಂಕ್ ಮೂವರೂ ಗೊಳ್ಳನೆ ನಕ್ಕಿದ್ದರು.

# ರೋಹಿತ್ ಅವರ ಕೆಟ್ಟ ಅಭ್ಯಾಸ 1

# ರೋಹಿತ್ ಅವರ ಕೆಟ್ಟ ಅಭ್ಯಾಸ 1

ರೋಹಿತ್ ಪತ್ನಿ ರಿತಿಕಾ ಅವರಿಗೆ ಕಿರಿ ಕಿರಿ ನೀಡುವ ರೋಹಿತ್ ಅವರ ಎರಡು ಕೆಟ್ಟ ಅಭ್ಯಾಸಗಳಲ್ಲಿ ಒಂದನೆಯದ್ದು ಏನಂದರೆ, ರಿತಿಕಾ ಅವರು ರೋಹಿತ್ ಅವರಲ್ಲಿ ಏನನ್ನಾದರೂ ಹೇಳುತ್ತಿರುವಾಗ ರೋಹಿತ್ ಅದನ್ನು ಆಲಿಸುತ್ತಿರುವಂತೆ ನಟಿಸುತ್ತಾರಂತೆ. ಅಸಲಿಗೆ ರೋಹಿತ್, ರಿತಿಕಾ ಮಾತನ್ನು ಕೇಳಿಸಿಯೇ ಇರುವುದಿಲ್ಲವಂತೆ. ಮಯಾಂಕ್ ಜೊತೆ ಈ ಸಂಗತಿಯನ್ನು ರಿತಿಕಾ ಅವರೇ ಒಮ್ಮೆ ಹೇಳಿಕೊಂಡಿದ್ದರಂತೆ.

ತಲೆ ಅಲ್ಲಾಡಿಸಿದ ರೋಹಿತ್

ತಲೆ ಅಲ್ಲಾಡಿಸಿದ ರೋಹಿತ್

ತನ್ನಲ್ಲಿರುವ ಕೆಟ್ಟ ಅಭ್ಯಾಸದ ಬಗ್ಗೆ ಪತ್ನಿ ಹೇಳಿರುವ ಮಾತಿಗೆ ರೋಹಿತ್ ಹೌದೆಂಬಂತೆ ತಲೆ ಅಲ್ಲಾಡಿಸಿದ್ದಾರೆ. ಮಾರುಕಟ್ಟೆಯಿಂದ ತನ್ನಿ ಅಂತ ರಿತಿಕಾ ಯಾವುದಾದರೂ ವಸ್ತುವಿನ ಹೆಸರು ಹೇಳುತ್ತಾರೆ. ಆಗ ರೋಹಿತ್ ಆ ವಸ್ತು ಸಂಜೆ ಹೊತ್ತಿಗೆ ಮನೆಗೆ ಬಂದೇಬಿಟ್ಟಿತು ಎನ್ನವಂತೆ ಹ್ಞೂಂ ಗುಟ್ಟಿರುತ್ತಾರೆ. ಆದರೆ ಸಂಜೆ ರಿತಿಕಾ ತನಗೆ ಬೇಕಿದ್ದ ವಸ್ತುವನ್ನು ಕೇಳಿದಾಗಲೇ ರೋಹಿತ್‌ ಎಚ್ಚರಗೊಳ್ಳೋದು. ಅಸಲಿಗೆ ರೋಹಿತ್‌ಗೆ ರಿತಿಕಾ ಹೇಳಿದ್ದ ವಸ್ತುವಿನ ಹೆಸರೂ ಗೊತ್ತಿರುವುದಿಲ್ಲ. ಬೆಳಿಗ್ಗೆ ನೀನು ಹೇಳಿದ ವಸ್ತು ಯಾವುದು ಇನ್ನೊಮ್ಮೆ ಹೇಳು ಅಂತ ರೋಹಿತ್ ಅವರು ರಿತಿಕಾರಲ್ಲಿ ಕೇಳುತ್ತಾರಂತೆ.

# ಶರ್ಮಾ ಕೆಟ್ಟ ಅಭ್ಯಾಸ 2

ರಿತಿಕಾ ಅವರು ಮಯಾಂಕ್ ಅವರಲ್ಲಿ ಹೇಳಿರುವಂತೆ ರೋಹಿತ್ ಶರ್ಮಾ ಅವರ ಇನ್ನೊಂದು ಕೆಟ್ಟ ಅಭ್ಯಾಸವೆಂದರೆ ಆಗಾಗ ತನ್ನ ಬೆರಳ ಉಗುರು ಕಚ್ಚುತ್ತಿರುವುದು. ಸಂವಾದದಲ್ಲಿ ಇದರ ಬಗ್ಗೆ ಮಾತನಾಡಿದ ರೋಹಿತ್, ಈ ಅಭ್ಯಾಸ ತನಗೆ ಬಾಲ್ಯದಿಂದಲೂ ಇದೆ. ಇತ್ತೀಚೆಗೆ ಈ ಅಭ್ಯಾಸವನ್ನು ಕಡಿಮೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

ರೋಹಿತ್-ರಿತಿಕಾ ಜೊತೆಯಾಗಿದ್ದು

ರೋಹಿತ್-ರಿತಿಕಾ ಜೊತೆಯಾಗಿದ್ದು

ತನ್ನ ಬ್ಯುಸಿನೆಸ್ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್ ಅವರನ್ನು ರೋಹಿತ್ ಶರ್ಮಾ 2015ರಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ರೋಹಿತ್-ರಿತಿಕಾ ಇಬ್ಬರೂ 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಮದುವೆಯಾದ ಬಳಿಕವೂ ಕ್ರಿಕೆಟ್‌ ಪಂದ್ಯಗಳ ವೇಳೆ ಮೈದಾನದಲ್ಲಿದ್ದು ತನ್ನ ಪತಿ ರೋಹಿತ್ ಶರ್ಮಾಗೆ ರಿತಿಕಾ ಚಿಯರ್ ಮಾಡುತ್ತಿದ್ದುದ್ದು ಬಹಳಸಾರಿ ಕಾಣಸಿಕ್ಕಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, July 18, 2020, 17:07 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X