ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾದೇಶ ಟಿ20 ವೇಳೆ ವಾಂತಿ ಮಾಡಿದ್ದ ಬಾಂಗ್ಲಾ ಕ್ರಿಕೆಟಿಗರು!

Two Bangladeshi cricketers vomited during IND-BAN 1st T20I match
Two Bangladeshi cricketers vomited during IND-BAN 1st T20I match

ನವದೆಹಲಿ, ನೆವಂಬರ್ 5: ಭಾನುವಾರ (ನೆವೆಂಬರ್ 3) ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ vs ಬಾಂಗ್ಲಾದೇಶ ನಡುವಿನ ಮೊದಲನೇ ಟಿ20 ಪಂದ್ಯದ ವೇಳೆ ಬಾಂಗ್ಲಾದ ಇಬ್ಬರು ಕ್ರಿಕೆಟಿಗರು ವಾಂತಿ ಮಾಡಿಕೊಂಡಿದ್ದು ವರದಿಯಾಗಿದೆ.

ಜನ್ಮ ದಿನದಂದು ಮುದ್ದಾದ ಅಕ್ಷರಗಳ ಸ್ಫೂರ್ತಿಯ ಸಂದೇಶ ಬರೆದ ಕೊಹ್ಲಿಜನ್ಮ ದಿನದಂದು ಮುದ್ದಾದ ಅಕ್ಷರಗಳ ಸ್ಫೂರ್ತಿಯ ಸಂದೇಶ ಬರೆದ ಕೊಹ್ಲಿ

ದೆಹಲಿಯಲ್ಲಿ ಕಳಪೆ ಗುಣಮಟ್ಟದ ಗಾಳಿಯ ಕಾರಣ ಬಾಂಗ್ಲಾ ಆಟಗಾರರಾದ ಸೌಮ್ಯ ಸರ್ಕಾರ್ ಮತ್ತು ಇನ್ನೊಬ್ಬ ಆಟಗಾರ ಮೊದಲನೇ ಟಿ20 ಪಂದ್ಯದ ವೇಳೆ ವಾಂತಿ ಮಾಡಿಕೊಂಡಿರುವುದಾಗಿ ಇಎಸ್‌ಪಿಎನ್‌ ಕ್ರಿಕ್‌ ಇನ್ಫೋ ವರದಿ ಮಾಡಿದೆ. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ ಸೋಲನುಭವಿಸಿತ್ತು.

ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!ಐಪಿಎಲ್‌ನಲ್ಲಿ ಇನ್ಮುಂದೆ ಬರಲಿದ್ದಾರೆ ಗೇಮ್ ಚೇಂಜರ್ 'ಪವರ್ ಪ್ಲೇಯರ್‌'!

ದೆಹಲಿಯಲ್ಲಿ ನಡೆದಿದ್ದ ಅಂದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಆದರೆ ಇದೇ ಪಂದ್ಯದಲ್ಲಿ ಬಾಂಗ್ಲಾ ದೇಶ, ಭಾರತ ವಿರುದ್ಧ ಮೊದಲನೇ ಟಿ20 ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿತು. ಅಲ್ಲದೆ ಅಂದಿನ ಪಂದ್ಯ ಟಿ20ಐ ಇತಿಹಾಸದಲ್ಲಿ 1000ನೇ ಪಂದ್ಯವಾಗಿತ್ತು ಅನ್ನೋದು ಮತ್ತೊಂದು ವಿಶೇಷ.

ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ದೆಹಲಿಯಲ್ಲಿ ಸದ್ಯ ಗಾಳಿಯ ಗುಣಮಟ್ಟ ಆತಂಕಕಾರಿ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ. ಮೊದಲನೇ ಟಿ20 ಪಂದ್ಯ ನಡೆದ ನವೆಂಬರ್ 3ರಂದು ಹೊಗೆ ಆವರಿದಂತೆ ದೆಹಲಿಯಿಡೀ ಮಬ್ಬಾಗಿ ಕಾಣಿಸುತ್ತಿದ್ದುದು ಗಾಳಿ ಅಪಾಯಕಾರಿ ಮಟ್ಟ ತಲುಪಿರುವುದಕ್ಕೆ ಸಾಕ್ಷಿ ಹೇಳಿತ್ತು. ಹೀಗಾಗಿಯೇ ಪ್ರವಾಸಿ ಬಾಂಗ್ಲಾದ ಆಟಗಾರರು ವಾಂತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Story first published: Tuesday, November 5, 2019, 12:49 [IST]
Other articles published on Nov 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X