ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್.ರಾಹುಲ್ ಪ್ರಚಂಡ ಫಾರ್ಮ್: ಈ ಇಬ್ಬರು ಆಟಗಾರರಿಗೆ 'ಸದ್ಯಕ್ಕಂತೂ ಬೆಂಚೇ' ಗಟ್ಟಿ

ರಾಹುಲ್ ಬ್ಯಾಟಿಂಗ್ ಗೂ ಸೈ ಕೀಪಿಂಗ್ ಗೂ ಸೈ | KL RAHUL | BATTING | WICKET KEEPING
Two Full Time Wicket Keeper Not Getting Opportunity Because Of KL Rahul Glorious Form

ಹಾಲೀ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಕೆ.ಎಲ್.ರಾಹುಲ್, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

"ಹೊಸ ಜವಾಬ್ದಾರಿಯನ್ನು ಎಂಜಾಯ್ ಮಾಡುತ್ತಿದ್ದೇನೆ" ಎಂದು ರಾಹುಲ್ ಹೇಳಿದ್ದಾರೆ. ಬ್ಯಾಟಿಂಗ್ ನಲ್ಲಿ ಯಾವ ಆರ್ಡರ್ ನಲ್ಲೂ ಬಂದರೂ ಬ್ಯಾಟ್ ಬೀಸಲು ಸಮರ್ಥರಾಗಿರುವ ರಾಹುಲ್, ಕೀಪಿಂಗ್ ನಲ್ಲಿ ಅಂತಹ ತಪ್ಪನ್ನೇನೂ ಮಾಡುತ್ತಿಲ್ಲ.

ಭಾರತ Vs ನ್ಯೂಜಿಲ್ಯಾಂಡ್: ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟುಭಾರತ Vs ನ್ಯೂಜಿಲ್ಯಾಂಡ್: ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟು

'Cricket a glorious game of uncertainty, no one should make it predictable' ಎಂದು ಸರ್ವೋಚ್ಚ ನ್ಯಾಯಾಲಯವೂ ಹೇಳಿದೆ. ಆದರೂ, ರಾಹುಲ್ ಸದ್ಯದ ಫಾರಂನಿಂದ ಇಬ್ಬರು ಆಟಗಾರರಂತೂ ಡ್ರೆಸ್ಸಿಂಗ್ ರೂಂನಲ್ಲಿ ತೂಗೊಯ್ಯಾಲೆಯಲ್ಲಿ ಕೂತಿದ್ದಾರೆ.

ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!

ಹಾಗಂತ, ರಾಹುಲ್ ಫಾರ್ಮ್ ಕಳೆದುಕೊಳ್ಳಬೇಕೆನ್ನುವುದು ನಮ್ಮ ಉದ್ದೇಶವೇನೂ ಅಲ್ಲ. ಬಟ್, ಇದೇ ರೀರ್ತಿ ಭರ್ಜರಿ ಪ್ರದರ್ಶನ ರಾಹುಲ್ ತೋರಿದರೆ, ಇಬ್ಬರು ಆಟಗಾರರಿಗೆ ಬೆಂಚ್ ಅಥವಾ ಹನ್ನೆರಡನೇ ಆಟಗಾರನಾಗಿ ಮುಂದುವರಿಯುವುದು ಸದ್ಯಕ್ಕಂತೂ ಗ್ಯಾರಂಟಿ. ಯಾರು ಆ ಇಬ್ಬರು, ತಂಡದಲ್ಲಿರುವ ಆಟಗಾರರು?

ರಾಹುಲ್ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದು

ರಾಹುಲ್ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದು

"ಕೆ.ಎಲ್.ರಾಹುಲ್ ಗೆ ನೀಡಿದ ಎರಡೂ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸದ್ಯಕ್ಕೆ ವಿಕೆಟ್ ಕೀಪಿಂಗ್ ಗಾಗಿ ಇನ್ನೊಬ್ಬರನ್ನು ಹನ್ನೊಂದು ಆಟಗಾರರ ತಂಡಕ್ಕೆ ಸೇರಿಸುವ ಅವಶ್ಯಕತೆ ನನಗೆ ಕಾಣಿಸುತ್ತಿಲ್ಲ" ಎಂದು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟ ಪಡಿಸಿದ್ದಾರೆ.

ಮುಂದಿನ ಎರಡು ಪಂದ್ಯಕ್ಕೆ ಕೊಹ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿಲ್ಲದಿಲ್ಲ

ಮುಂದಿನ ಎರಡು ಪಂದ್ಯಕ್ಕೆ ಕೊಹ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿಲ್ಲದಿಲ್ಲ

ನ್ಯೂಜಿಲ್ಯಾಂಡ್ ವಿರುದ್ದದ ಸರಣಿಯನ್ನು ಭಾರತ ಈಗಾಗಲೇ ಗೆದ್ದಿರುವುದರಿಂದ, ಕೆಲವು ಆಟಗಾರರಿಗೆ, ಮುಂದಿನ ಎರಡು ಪಂದ್ಯಕ್ಕೆ ಕೊಹ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯಿಲ್ಲದಿಲ್ಲ. ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ನವದೀಪ್ ಸೈನಿ ಮುಂತಾದ ಆಟಗಾರರಿಗೆ ಅವಕಾಶ ಸಿಕ್ಕರೂ ಸಿಗಬಹುದು.

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಆಗಿ ಬಿಸಿಸಿಐ ಇಬ್ಬರನ್ನು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಆಯ್ಕೆ ಮಾಡಿತ್ತು. ಜೊತೆಗೆ, ಕೆ.ಎಲ್.ರಾಹುಲ್ ಪಾರ್ಟ್ ಟೈಮ್ ಕೀಪರ್ ಬೇರೆ. ಆಯ್ಕೆಯಾದ ಇಬ್ಬರು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಒಬ್ಬರು ಸಂಜು ಸ್ಯಾಮ್ಸನ್, ದೇಶೀಯ ಕ್ರಿಕೆಟ್ ನಲ್ಲಿ ಕೇರಳ ತಂಡವನ್ನು ಮತ್ತು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಸ್ಯಾಮ್ಸನ್ ಐಪಿಎಲ್ ನಲ್ಲಂತೂ ಪ್ರಚಂಡ ಫಾರ್ಮ್ ನಲ್ಲಿದ್ದರು.

ಬಿರುಸಿನ ಆಟಗಾರ, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರುವ ರಿಷಬ್ ಪಂತ್

ಬಿರುಸಿನ ಆಟಗಾರ, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರುವ ರಿಷಬ್ ಪಂತ್

ಇನ್ನೊಬ್ಬ ಯುವ ಬಿರುಸಿನ ಆಟಗಾರ, ಜೊತೆಗೆ ವಿಕೆಟ್ ಕೀಪರ್ ಕೂಡಾ ಆಗಿರುವ ರಿಷಬ್ ಪಂತ್ ಕೂಡಾ ನ್ಯೂಜಿಲ್ಯಾಂಡ್ ಪ್ರವಾದಲ್ಲಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ದೆಹಲಿ ತಂಡಕ್ಕೆ ಮತ್ತು ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಆಡುವ ಪಂತ್ ಗೆ, ಸದ್ಯ, ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಅವಕಾಶ ಸಿಗುತ್ತಿಲ್ಲ.

Story first published: Friday, January 31, 2020, 10:50 [IST]
Other articles published on Jan 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X