ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಸರಣಿಗೂ ಮುನ್ನ ಇಬ್ಬರು ಶ್ರೀಲಂಕಾ ಆಟಗಾರರಿಗೆ ಕೊರೊನಾ ವೈರಸ್‌ ದೃಢ

Two Sri Lanka cricketers tested positive for coronavirus ahead of ODI series against Bangladesh

ಬಾಂಗ್ಲಾದೇಶದ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಕೊರೊನಾ ವೈರಸ್ ಆಘಾತವನ್ನು ನೀಡಿದೆ. ಇಬ್ಬರು ಶ್ರಿಲಂಕಾ ಆಟಗಾರರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಹೀಗಾಗಿ ಈ ಆಟಗಾರರು ಈಗ ತಂಡದಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಗೆ ಹೆಸರಿಸಿದ್ದ 28 ಆಟಗಾರರ ತಂಡದಲ್ಲಿದ್ದ ಶ್ರೀಲಂಕಾದ ಆಲ್‌ರೌಂಡರ್‌ಗಳಾದ ಧನಂಜಯ ಲಕ್ಷಣ್ ಹಾಗೂ ಇಶಾನ್ ಜಯರತ್ನೆ ಕೊರೊನಾ ವೈರಸ್‌ಗೆ ತುತ್ತಾದ ಆಟಗಾರರಾಗಿದ್ದಾರೆ. ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ತುತ್ತಾಗಿದ್ದು ಪತ್ತೆಯಾಗಿದೆ. 14 ದಿನಗಳ ಕ್ವಾರಂಟೈನ್‌ಗೆ ಈ ಆಟಗಾರರು ಒಳಗಾಗಿದ್ದಾರೆ.

ಐಪಿಎಲ್ 2021ರ ಉಳಿದ ಪಂದ್ಯಗಳು ಭಾರತದಲ್ಲಿ ನಡೆಯದು: ಖಚಿತಪಡಿಸಿದ ಗಂಗೂಲಿಐಪಿಎಲ್ 2021ರ ಉಳಿದ ಪಂದ್ಯಗಳು ಭಾರತದಲ್ಲಿ ನಡೆಯದು: ಖಚಿತಪಡಿಸಿದ ಗಂಗೂಲಿ

ಸಮಾಧಾನದ ಸಂಗತಿಯೆಂದರೆ ಈ ಆಟಗಾರರು ಏಕದಿನ ಸರಣಿಯಲ್ಲಿ ಭಾಗಿಯಾಗುವ 18 ಆಟಗಾರರ ತಂಡದ ಭಾಗವಾಗಿಲ್ಲ. ಹೀಗಾಗಿ ಮೇ 16ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಯಾವುದೇ ಆತಂಕಗಳು ಇಲ್ಲ ಎಂದು ಮಾಹೊತಿಗಳು ಲಭ್ಯವಾಗಿದೆ.

ಬಾಂಗ್ಲಾದೇಶದ ವಿರುದ್ಧದ ಈ ಸರಣಿ ಅಂತ್ಯವಾಗುತ್ತಿದ್ದಂತೆಯೇ ಶ್ರೀಲಂಕಾ ತಂಡ ಇಂಗ್ಲೆಂಡ್‌ಗೆ ಪ್ರಯಾಣವನ್ನು ಬೆಳೆಸಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ಆಯೋಜನೆಯಾಗಲಿದೆ.

Story first published: Monday, May 10, 2021, 10:11 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X