ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಮಣಿಸಿ ಏಳನೇ ಬಾರಿಗೆ 'ಯು-19 ಏಷ್ಯಾ ಕಪ್' ಎತ್ತಿದ ಭಾರತ

U-19 Asia Cup Final: India beat Bangladesh by five runs to lift seventh title

ಕೊಲಂಬೋ, ಸೆಪ್ಟೆಂಬರ್ 14: ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಶ್ರೀಲಂಕಾದ ಕೊಲಂಬೋದಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶನಿವಾರ (ಸೆಪ್ಟೆಂಬರ್ 14) ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿರುವ ಭಾರತ ತಂಡ ಏಳನೇ ಬಾರಿಗೆ ಟ್ರೋಫಿ ಎತ್ತಿದೆ.

ಧೋನಿ ನಿವೃತ್ತಿ ಸುದ್ದಿ ಹಬ್ಬಿಸಿದ್ದ ಚಿತ್ರದ ಹಿಂದಿನ ಸತ್ಯ ಬಾಯ್ಬಿಟ್ಟ ಕೊಹ್ಲಿ!ಧೋನಿ ನಿವೃತ್ತಿ ಸುದ್ದಿ ಹಬ್ಬಿಸಿದ್ದ ಚಿತ್ರದ ಹಿಂದಿನ ಸತ್ಯ ಬಾಯ್ಬಿಟ್ಟ ಕೊಹ್ಲಿ!

ಬಾಂಗ್ಲಾದೇಶ ಇನ್ನಿಂಗ್ಸ್‌ನಲ್ಲಿ 18ರ ಹರೆಯದ ಅಂಕೋಲೆಕರ್, 28 ರನ್ನಿಗೆ 5 ವಿಕೆಟ್ ಮುರಿದರೆ, ಆಕಾಶ್ ಸಿಂಗ್ 12 ರನ್‌ನಿಗೆ 3 ವಿಕೆಟ್ ಕೆಡವಿ ತಂಡದ ಗೆಲುವನ್ನು ಬರೆದರು. ಜೊತೆಗೆ ವಿದ್ಯಾಧರ್ ಪಾಟಿಲ್ 1, ಸುಶಾಂತ್ ಮಿಶ್ರಾ 1 ವಿಕೆಟ್‌ ಮುರಿದು ತಂಡಕ್ಕೆ ನೆರವಿತ್ತರು.

ಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20: ಸಂಭಾವ್ಯ ತಂಡಭಾರತ Vs ದಕ್ಷಿಣ ಆಫ್ರಿಕಾ ಮೊದಲ ಟಿ20: ಸಂಭಾವ್ಯ ತಂಡ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಅಂಡರ್ 19 ತಂಡ, ಧೃವ್ ಜುರೇಲ್ 33, ಶಾಶ್ವತ್ ರಾವತ್ 19, ಕರಣ್ ಲಾಲ್ 37 ಗಮನಾರ್ಹ ರನ್‌ನೊಂದಿಗೆ 32.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 106 ರನ್ ಮಾಡಿತ್ತು. ಭಾರತದ ಇನ್ನಿಂಗ್ಸ್‌ನಲ್ಲಿ ಮೃತ್ಯುಂಜಯ್ ಚೌಧರಿ 3, ಶಮೀಮ್ ಹುಸೈನ್ 3 ವಿಕೆಟ್ ಪಡೆದು ಗಮನ ಸೆಳೆದರು.

ಹಾರ್ದಿಕ್ ಫಿಟ್ ಇದ್ದರೂ ಟೆಸ್ಟ್‌ ತಂಡದಲ್ಲಿ ಇಲ್ಲದ್ದಕ್ಕೆ ಕಾರಣ ಏನ್ ಗೊತ್ತಾ?!ಹಾರ್ದಿಕ್ ಫಿಟ್ ಇದ್ದರೂ ಟೆಸ್ಟ್‌ ತಂಡದಲ್ಲಿ ಇಲ್ಲದ್ದಕ್ಕೆ ಕಾರಣ ಏನ್ ಗೊತ್ತಾ?!

107 ರನ್ ಗುರಿ ಬೆನ್ನತ್ತಿದ ಬಾಂಗ್ಲಾ ಅಂಡರ್ 19 ತಂಡ, ನಾಯಕ ಅಕ್ಬರ್ ಅಲಿ 23, ಮೃತ್ಯುಂಜಯ ಚೌಧರಿ 21, ತನಿಝಿಮ್ ಹಸನ್ ಶಕೀಬ್ 12, ರಕೀಬುಲ್ ಹಸನ್ 11 ರನ್‌ನೊಂದಿಗೆ 33 ಓವರ್‌ಗೆ ಸರ್ವ ಪತನ ಕಂಡು 101 ರನ್ ಗಳಿಸಿತು. ಪಂದ್ಯಶ್ರೇಷ್ಠರಾಗಿ ಅಥರ್ವ ಅಂಕೋಲೆಕರ್, ಸರಣಿಶ್ರೇಷ್ಠರಾಗಿ ಅರ್ಜುನ್ ಅಝಾದ್ ಮಿಂಚಿದರು.

Story first published: Saturday, September 14, 2019, 18:48 [IST]
Other articles published on Sep 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X