ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 Women's World Cup 2023: ಸೂಪರ್ ಸಿಕ್ಸ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ

U-19 Womens T20 World Cup: India Beat Sri Lanka By 7 Wickets In Super Six Match

ಅಂಡರ್ 19 ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಭಾರತದ ವನಿತೆಯರು ಶ್ರೀಲಂಕಾ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಗುಂಪುಹಂತದಲ್ಲಿ ಒಂದೂ ಸೋಲು ಕಾಣದೆ ಸೂಪರ್ ಸಿಕ್ಸ್ ಹಂತಕ್ಕೆ ಪ್ರವೇಶಿಸಿದ್ದ ಭಾರತದ ವನಿತೆಯರು ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದರು. ಹೆಚ್ಚಿನ ಅಂತರದಲ್ಲಿ ಸೋತ ಕಾರಣ ರನ್‌ ರೇಟ್‌ ಮೇಲೆ ಪರಿಣಾಮ ಬೀರಿತ್ತು.

ಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗಭಾರತ ತಂಡವನ್ನು ನೋಡಿ ಕಲಿಯಿರಿ: ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗ

ಆದರೆ, ಎರಡನೇ ಪಂದ್ಯದಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಿದ್ದಾರೆ. ಅಲ್ಲದೆ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವುದು ರನ್‌ ರೇಟ್‌ನಲ್ಲಿ ಕೂಡ ಭಾರತಕ್ಕೆ ಸಹಾಯಕವಾಗಲಿದೆ. ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ವನಿತೆಯರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಭಾರತದ ಬೌಲಿಂಗ್ ಎದುರು ಒಂದೊಂದು ರನ್ ಗಳಿಸಲೂ ಕೂಡ ಶ್ರೀಲಂಕಾ ಸಾಕಷ್ಟು ಕಷ್ಟಪಡಬೇಕಾಯಿತು. ಶ್ರೀಲಂಕಾ ಮಹಿಳಾ ತಂಡಕ್ಕೆ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 59 ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ನಾಯಕಿ ವಿಶ್ಮಿ ಗುಣರತ್ನೆ 25 ರನ್ ಮತ್ತು ಉಮಾಯ ರತ್ನಾಯಕೆ 13 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರು ಕೂಡ ಎರಡಂಕಿ ರನ್ ಗಳಿಸಲು ಸಾಧ್ಯವಾಗಲಿಲ್ಲ.

U-19 Womens T20 World Cup: India Beat Sri Lanka By 7 Wickets In Super Six Match

ಪರ್ಶಾವಿ ಚೋಪ್ರಾ ಅತ್ಯುತ್ತಮ ಬೌಲಿಂಗ್

ಭಾರತದ ಪರವಾಗಿ ಪರ್ಶಾವಿ ಚೋಪ್ರಾ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದರು. 4 ಓವರ್ ಗಳಲ್ಲಿ 1 ಮೇಡನ್ ಓವರ್ ಸಹಿತ, ಕೇವಲ 5 ರನ್ ನೀಡಿದ ಪರ್ಶಾವಿ ಪ್ರಮುಖ 4 ವಿಕೆಟ್‌ಗಳನ್ನು ಪಡೆದು ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು.

ಉಳಿದಂತೆ ಮನ್ನತ್ ಕಶ್ಯಪ್ 2 ವಿಕೆಟ್ ಪಡೆದು ಮಿಂಚಿದರೆ, ಟಿಟಾಸ್ ಸಧು ಮತ್ತು ಅರ್ಚನಾ ದೇವಿ ತಲಾ ಒಂದು ವಿಕೆಟ್ ಪಡೆದುಕೊಂಡರು.

U-19 Womens T20 World Cup: India Beat Sri Lanka By 7 Wickets In Super Six Match

7.2 ಓವರ್ ಗಳಲ್ಲಿ ಗುರಿ ಮುಟ್ಟಿದ ಭಾರತ

ರನ್‌ ರೇಟ್‌ ಉತ್ತಮ ಪಡಿಸಿಕೊಳ್ಳಲು ಈ ಮೊತ್ತವನ್ನು ಸಾಧ್ಯವಾದಷ್ಟು ಕಡಿಮೆ ಓವರ್ ನಲ್ಲಿ ಗುರಿ ಮುಟ್ಟುವ ಉದ್ದೇಶದಿಂದ ಬ್ಯಾಟಿಂಗ್ ಮಾಡಿದ ಭಾರತ 7.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿಯನ್ನು ಬೆನ್ನತ್ತುವ ಮೂಲಕ ಜಯ ಸಾಧಿಸಿದರು. ಸೌಮ್ಯ ತಿವಾರಿ 15 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 28 ರನ್ ಗಳಿಸಿ ಭಾರತದ ಗೆಲುವಿಗೆ ಅಮೂಲ್ಯ ಕಾಣಿಕೆ ನೀಡಿದರು.

Story first published: Sunday, January 22, 2023, 20:35 [IST]
Other articles published on Jan 22, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X