ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 Women's T20 World Cup 2023: ಇಂಗ್ಲೆಂಡ್ ಮಣಿಸಿದರೆ ಭಾರತದ ವನಿತೆಯರೇ ವಿಶ್ವ ಚಾಂಪಿಯನ್

U-19 Womens T20 World Cup: India Will Face England In Final Match, Playing XI, Pitch Report

ಭಾರತದ19 ವರ್ಷದೊಳಗಿನ ಮಹಿಳಾ ತಂಡ ಚೊಚ್ಚಲ ವಿಶ್ವಕಪ್‌ ಆವೃತ್ತಿಯಲ್ಲಿ ಫೈನಲ್ ತಲುಪಿದ್ದು, ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗಲಿದೆ. ಜನವರಿ 29ರಂದು ಭಾನುವಾರ ಫೈನಲ್ ಪಂದ್ಯ ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿದೆ.

ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಿದ್ದ ಭಾರತ ತಂಡ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ.

ಸೆಮಿಫೈನಲ್‌ನಲ್ಲಿ ಮೊದಲು ಬೌಲಿಂಗ್ ಮಾಡಿದ ಭಾರತ ನ್ಯೂಜಿಲೆಂಡ್ ತಂಡವನ್ನು 107 ರನ್‌ಗಳಿಗೆ ಕಟ್ಟಿಹಾಕಿತು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತದ ವನಿತೆಯರು ಇನ್ನೂ 34 ಎಸೆತ ಬಾಕಿ ಇರುವಂತೆಯೇ ಗುಡಿ ಮುಟ್ಟುವ ಮೂಲಕ ಕಿವೀಸ್ ಪಡೆಯನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟರು.

BGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನBGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ಇಂಗ್ಲೆಂಡ್ ತಂಡ ವಿಶ್ವಕಪ್ ಪಂದ್ಯಾವಳಿಯವನ್ನು ಇದುವರೆಗೂ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 99 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸುಲಭವಾದ ಗುರಿಯನ್ನೇ ನೀಡಿತು. ಆದರೆ, ಅತ್ಯುತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ವನಿತೆಯರು ಆಸ್ಟ್ರೇಲಿಯಾ ತಂಡವನ್ನು 96 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 3 ರನ್‌ಗಳ ರೋಚಕ ಜಯ ಸಾಧಿಸಿತು.

Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆWomen's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ

ಭಾರತವೇ ಗೆಲ್ಲುವ ಫೇವರಿಟ್

ಭಾರತವೇ ಗೆಲ್ಲುವ ಫೇವರಿಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯ ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 5:15ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯವನ್ನು ಫ್ಯಾನ್‌ಕೋಡ್ ಆಪ್‌ನಲ್ಲಿ ವೀಕ್ಷಿಸಬಹುದಾಗಿದೆ.

ಮೇಲ್ನೊಟಕ್ಕೆ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವ ಭಾರತವೇ ಫೈನಲ್‌ನಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ನೀಡಿದ ಪ್ರದರ್ಶನವನ್ನೇ ಫೈನಲ್ ಪಂದ್ಯದಲ್ಲಿ ಮುಂದುವರೆಸಿದರೆ ಭಾರತದ ವನಿತೆಯರು ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವುದು ನಿಶ್ಚಿತ.

ಸ್ಪಿನ್‌ ಬೌಲಿಂಗ್‌ಗೆ ಸಹಕಾರಿಯಾದ ಪಿಚ್

ಸ್ಪಿನ್‌ ಬೌಲಿಂಗ್‌ಗೆ ಸಹಕಾರಿಯಾದ ಪಿಚ್

ಪೊಟ್ಚೆಫ್‌ಸ್ಟ್ರೂಮ್‌ನಲ್ಲಿರುವ ಸೆನ್ವೆಸ್ ಪಾರ್ಕ್‌ ಸಮತೋಲಿತ ಪಿಚ್‌ ಹೊಂದಿದೆ. ಆದರೂ, ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಪಂದ್ಯದ ಆರಂಭದಲ್ಲಿ ಚೆಂಡು ಸ್ವಿಂಗ್ ಆಗುವುದರಿಂದ ವೇಗಿಗಳು ಹೆಚ್ಚು ಪರಿಣಾಮಕಾರಿಯಾಗಬಹುದು. ಆದರೂ ಎಚ್ಚರಿಕೆಯಿಂದ ಆಡಿದರೆ, ಬ್ಯಾಟರ್ ಗಳು ಸುಲಭವಾಗಿ ರನ್ ಗಳಿಸಬಹುದಾಗಿದೆ. ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 120-130 ಆಗಿದೆ.

ಭಾರತ ಇಂಗ್ಲೆಂಡ್ ಪಂದ್ಯದ ಸಮಯದಲ್ಲಿ ಮೋಡಕವಿದ ವಾತಾವರಣ ಇರುವ ಮುನ್ಸೂಚನೆ ನೀಡಲಾಗಿದೆ. ಆದರೆ, ಮಳೆ ಬೀಳುವ ಸಾಧ್ಯತೆ ಇಲ್ಲ. 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ನಿರೀಕ್ಷೆಯಿದೆ.

ಭಾರತ, ಇಂಗ್ಲೆಂಡ್ ತಂಡದ ವಿವರ

ಭಾರತ, ಇಂಗ್ಲೆಂಡ್ ತಂಡದ ವಿವರ

ಭಾರತ : ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್, ರಿಚಾ ಘೋಷ್ (ವಿಕೆಟ್ ಕೀಪರ್), ಗೊಂಗಾಡಿ ತ್ರಿಶಾ, ಸೌಮ್ಯ ತಿವಾರಿ, ಹೃಷಿತಾ ಬಸು (ವಿಕೆಟ್ ಕೀಪರ್), ಟೈಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಸೋನಮ್ ಯಾದವ್

ಇಂಗ್ಲೆಂಡ್ : ಗ್ರೇಸ್ ಸ್ಕ್ರಿವೆನ್ಸ್ (ನಾಯಕಿ), ಲಿಬರ್ಟಿ ಹೀಪ್, ನಿಯಾಮ್ ಹಾಲೆಂಡ್, ಸೆರೆನ್ ಸ್ಮೇಲ್ (ವಿಕೆಟ್ ಕೀಪರ್), ಚಾರಿಸ್ ಪಾವೆಲಿ, ರಿಯಾನಾ ಮ್ಯಾಕ್ಡೊನಾಲ್ಡ್ ಗೇ, ಅಲೆಕ್ಸಾ ಸ್ಟೋನ್‌ಹೌಸ್, ಜೋಸಿ ಗ್ರೋವ್ಸ್, ಸೋಫಿಯಾ ಸ್ಮೇಲ್, ಎಲ್ಲೀ ಆಂಡರ್ಸನ್, ಹನ್ನಾ ಬೇಕರ್

Story first published: Saturday, January 28, 2023, 21:00 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X