ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 Women's World Cup 2023: ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಾಸ್ ವರದಿ

U-19 Womens World Cup 2023: India vs New Zealand Semifinal Match Toss Report And Playing 11

2023ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯು ಸೆಮಿಫೈನಲ್ ಅಂತಿಮ ಹಂತವನ್ನು ತಲುಪಿದೆ. ಶುಕ್ರವಾರ, ಜನವರಿ 27ರಂದು ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.

ಟಾಸ್ ಗೆದ್ದ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಮಹಿಳಾ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಅಂಡರ್-19 ಮಹಿಳೆಯರ ಟಿ20 ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದಲ್ಲಿ ಜಯಗಳಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.

ಭಾರತ ಮಹಿಳಾ ತಂಡದ ನಾಯಕಿ ಶಫಾಲಿ ವರ್ಮಾ ಹೊರತುಪಡಿಸಿ ಉಪನಾಯಕಿ ಶ್ವೇತಾ ಸೆಹ್ರಾವತ್ ಬ್ಯಾಟಿಂಗ್‌ನಲ್ಲಿ ಬಹಳ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಶ್ವೇತಾ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 231 ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಮೂರು ಬಾರಿ ಅಜೇಯರಾಗುಳಿದಿದ್ದಾರೆ.

ಭಾರತ vs ನ್ಯೂಜಿಲೆಂಡ್ ಅಂಡರ್-19 ಮಹಿಳಾ ತಂಡಗಳ ಆಡುವ 11ರ ಬಳಗ
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್, ಸೌಮ್ಯ ತಿವಾರಿ, ಗೊಂಗಡಿ ತ್ರಿಶಾ, ರಿಚಾ ಘೋಷ್ (ವಿಕೆಟ್ ಕೀಪರ್), ಹೃಷಿತಾ ಬಸು, ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಸೋನಮ್ ಯಾದವ್.

ನ್ಯೂಜಿಲೆಂಡ್ ಮಹಿಳಾ ತಂಡ: ಎಮ್ಮಾ ಮೆಕ್ಲಿಯೋಡ್, ಅನ್ನಾ ಬ್ರೌನಿಂಗ್, ಜಾರ್ಜಿಯಾ ಪ್ಲಿಮ್ಮರ್, ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್), ಇಜ್ಜಿ ಶಾರ್ಪ್ (ನಾಯಕಿ), ಕೇಟ್ ಇರ್ವಿನ್, ಎಮ್ಮಾ ಇರ್ವಿನ್, ಪೈಗೆ ಲಾಗ್ಗೆನ್‌ಬರ್ಗ್, ನತಾಶಾ ಕೊಡೈರ್, ಅಬಿಗೈಲ್ ಹಾಟನ್, ಕೇಲಿ ನೈಟ್.

Story first published: Friday, January 27, 2023, 13:23 [IST]
Other articles published on Jan 27, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X