ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್-19 ವಿಶ್ವಕಪ್: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಗೆಲುವು

U-19 world Cup: Bishnoi,Ankielar star for India | Oneindia Kannada
U-19 World Cup: Bishnoi, Ankolekar star in Indian victory against NZ

ಬ್ಲೂಮ್‌ಫಾಂಟೈನ್, ಜನವರಿ 24: ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕೆರ್ ಮತ್ತು ರವಿ ಬಿಷ್ಣೋಯ್ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಅಂಡರ್ 19 ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 44 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಗಳಿಸಿದೆ.

ಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತಭಾರತ vs ನ್ಯೂಜಿಲ್ಯಾಂಡ್: ಆಕ್ಲೆಂಡ್‌ನಲ್ಲಿ 'ಮಿಣಿಮಿಣಿ' ಮಿಂಚಿದ ಭಾರತ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಯಶಸ್ವಿ ಜೈಸ್ವಾಲ್ ಅಜೇಯ 57, ದಿವ್ಯಾಂಶ್ ಸಕ್ಷೇನಾ ಅಜೇಯ 52 ರನ್‌ ನೆರವಿನೊಂದಿಗೆ 23 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿತು. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಓವರ್‌ ಕಡಿತಗೊಳಿಸಿ ಡಿಎಲ್‌ಎಸ್ ನಿಯಮದ ಪ್ರಕಾರ ಎದುರಾಳಿಗೆ 23 ಓವರ್‌ಗೆ 192 ರನ್ ಗುರಿ ನೀಡಿಲಾಯ್ತು.

ಜಾರ್ಜ್ ವರ್ಕರ್ ಶತಕ, ನ್ಯೂಜಿಲೆಂಡ್‌ 'ಎ'ಗೆ ತಲೆ ಬಾಗಿದ ಭಾರತ 'ಎ'ಜಾರ್ಜ್ ವರ್ಕರ್ ಶತಕ, ನ್ಯೂಜಿಲೆಂಡ್‌ 'ಎ'ಗೆ ತಲೆ ಬಾಗಿದ ಭಾರತ 'ಎ'

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ, ರೈಸ್ ಮಾರಿಯು 42, ಫರ್ಗುಸ್ ಲೆಲ್ಮನ್ 31, ಆಲ್ಲಿ ವೈಟ್‌ 14, ಬೇಕಮ್ ವೀಲರ್ 13 ರನ್‌ ಸೇರ್ಪಡೆಯೊಂದಿಗೆ 23 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 147 ರನ್ ಪೇರಿಸಲಷ್ಟೇ ಶಕ್ತವಾಯ್ತು. ಕಿವೀಸ್‌ನ ಇನ್ಯಾರೂ ಬ್ಯಾಟ್ಸ್‌ಮನ್‌ಗಳು 10 ರನ್‌ ಗೆರೆ ಕೂಡ ದಾಟದಿದ್ದುದು ಸೋಲಿಗೆ ಕಾರಣವಾಯ್ತು.

 ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅರ್ಜಿ ರಾಷ್ಟ್ರೀಯ ಆಯ್ಕೆದಾರರ ಹುದ್ದೆಗೆ ಮಾಜಿ ವೇಗಿ ಅಜಿತ್ ಅಗರ್ಕರ್ ಅರ್ಜಿ

ನ್ಯೂಜಿಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ರವಿ ಬಿಷ್ಣೋಯ್ 30 ರನ್‌ಗೆ 4 ವಿಕೆಟ್, ಅಥರ್ವ ಅಂಕೋಲೆಕರ್ 28 ರನ್‌ಗೆ 3 ವಿಕೆಟ್‌, ಕಾರ್ತಿಕ್ ತ್ಯಾಗಿ ಮತ್ತು ಸುಶಾಂತ್ ಮಿಶ್ರಾ ತಲಾ 1 ವಿಕೆಟ್‌ ಪಡೆದು ಎದುರಾಳಿಯನ್ನು ಕಾಡಿದರು. ಭಾರತ ಮುಂದೆ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದು, ಅಲ್ಲಿ ಆಸ್ಟ್ರೇಲಿಯಾವನ್ನು ಎದುರುಗೊಳ್ಳಲಿದೆ.

Story first published: Friday, January 24, 2020, 23:22 [IST]
Other articles published on Jan 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X