ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಟೀಮ್ ಇಂಡಿಯಾ ಕಪ್‌ ಗೆಲ್ಲಲು ಇನ್ನೆರಡೇ ಮೆಟ್ಟಿಲು!

India breeze into U-19 World Cup semi-finals | U19 | WORLDCUP | INDIA | AUSTRALIA | ONEINDIA KANNADA
U19 World Cup: India breeze into semifinals, trample Australia by 74 runs

ಪೊಚೆಫ್‌ಸ್ಟ್ರೂಮ್, ಜನವರಿ 29: ಕಾರ್ತಿಕ್ ತ್ಯಾಗಿ, ಆಕಾಶ್‌ ಸಿಂಗ್ ಮಾರಕ ಬೌಲಿಂಗ್‌ ಮತ್ತು ಯಶಸ್ವಿ ಜೈಸ್ವಾಲ್, ಅಥರ್ವ ಅಂಕೋಲೆಕರ್ ಆಕರ್ಷಕ ಅರ್ಧ ಶತಕದ ಕೊಡುಗೆಯೊಂದಿಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಯುವ ತಂಡ ಆಸ್ಟ್ರೇಲಿಯಾ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 74 ರನ್‌ಗಳ ಸುಲಭ ಗೆಲುವನ್ನಾಚರಿಸಿತು.

ನ್ಯೂಜಿಲ್ಯಾಂಡ್ vs ಭಾರತ: ತಂಡದ ಮಾಹಿತಿ, ಡ್ರೀಮ್ XI, ಸಂಭಾವ್ಯ ತಂಡ, ನೇರ ಪ್ರಸಾರನ್ಯೂಜಿಲ್ಯಾಂಡ್ vs ಭಾರತ: ತಂಡದ ಮಾಹಿತಿ, ಡ್ರೀಮ್ XI, ಸಂಭಾವ್ಯ ತಂಡ, ನೇರ ಪ್ರಸಾರ

ಮಂಗಳವಾರ (ಜನವರಿ 28) ಪೊಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಪರ ಯಶಸ್ವಿ ಜೈಸ್ವಾಲ್ 62, ದಿವ್ಯಾಂಶ್ ಸಕ್ಸೇನ 14, ಧೃವ್ ಜುರೇಲ್ 15, ಸಿದ್ದೇಶ್ ವೀರ್ 25, ರವಿ ಬಿಷ್ಣೋಯ್ 30, ಅಥರ್ವ ಅಂಕೋಲೆಕರ್ 55 ರನ್‌ ಸೇರಿಸಿದರು. ತಂಡ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 233 ರನ್ ಮಾಡಿತು.

ಐಪಿಎಲ್ 2020: ಟೂರ್ನಿ ಆರಂಭ, ಅಂತ್ಯದ ಅಧಿಕೃತ ದಿನಾಂಕ ಪ್ರಕಟ!ಐಪಿಎಲ್ 2020: ಟೂರ್ನಿ ಆರಂಭ, ಅಂತ್ಯದ ಅಧಿಕೃತ ದಿನಾಂಕ ಪ್ರಕಟ!

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾದಿಂದ ಸ್ಯಾಮ್ ಫ್ಯಾನಿಂಗ್ 75, ಪ್ಯಾಟ್ರಿಕ್ ರೋ 21, ಲಿಯಾಮ್ ಸ್ಕಾಟ್ 35 ರನ್‌ ಕೊಡುಗೆಯಿತ್ತರು. ಆದರೆ ಗೆಲುವಿನ ನೆಲೆಯಲ್ಲಿ ಈ ರನ್ ಆಸೀಸ್‌ಗೆ ನೆರವಾಗಲಿಲ್ಲ. ಕಾಂಗರೂ ಪಡೆ 43.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 159 ರನ್ ಕೆಲ ಹಾಕಿ ತಲೆ ಬಾಗಿತು.

ರಣಜಿಯಲ್ಲಿ ಮತ್ತೊಂದು ದ್ವಿಶತಕ ಸಿಡಿಸಿ ಮಿಂಚಿದ ಸರ್ಫರಾಜ್ ಖಾನ್ರಣಜಿಯಲ್ಲಿ ಮತ್ತೊಂದು ದ್ವಿಶತಕ ಸಿಡಿಸಿ ಮಿಂಚಿದ ಸರ್ಫರಾಜ್ ಖಾನ್

ಭಾರತದ ಇನ್ನಿಂಗ್ಸ್‌ನಲ್ಲಿ ಆಸೀಸ್‌ನ ಕೋರೆ ಕೆಲ್ಲಿ, ಟಾಡ್ ಮರ್ಫಿ ತಲಾ 2, ಮ್ಯಾಥ್ಯೂ ವಿಲ್ಲನ್ಸ್, ಕಾನರ್ ಸುಲ್ಲಿ, ತನ್ವೀರ್ ಸಂಘ ತಲಾ 1 ವಿಕೆಟ್ ಪಡೆದರೆ, ಅಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿ ಕಾರ್ತಿಕ್ ತ್ಯಾಗಿ 24 ರನ್‌ಗೆ 4, ರವಿ ಬಿಷ್ಣೋಯ್ 1, ಆಕಾಶ್‌ ಸಿಂಗ್ 30ಕ್ಕೆ 3 ವಿಕೆಟ್‌ ಉರುಳಿಸಿ ಪಾರಮ್ಯ ಮೆರೆದರು. ಕಾರ್ತಿಕ್ ತ್ಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Wednesday, January 29, 2020, 9:39 [IST]
Other articles published on Jan 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X