ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 ವಿಶ್ವಕಪ್: ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

U19 World Cup: India won against defending champions Bangladesh to reach semis

ಕಳೆದ ಬಾರಿಯ ಅಂಡರ್ 19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಅನುಭವಿಸಿದ್ದ ಸೋಲಿಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಅಂಡರ್ 19 ತಂಡದ ವಿರುದ್ಧ ಭಾರತ ಅಂಡರ್ 19 ತಂಡ ಅಮೋಘ ಆಟವನ್ನು ಪ್ರದರ್ಶಿಸಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಕಿರಿಯರ ತಂಡ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಭಾರತ ತಂಡದ ಬೌಲಿಂಗ್ ದಾಳಿಯ ಮುಂದೆ ಬಾಂಗ್ಲಾ ಹುಡುಗರು ಸಂಪೂರ್ಣವಾಗಿ ಮಂಡಿಯೂರಿದರು. ಯಾವ ಹಂತದಲ್ಲಿಯೂ ಬಾಂಗ್ಲಾದೇಶ ಕಿರಿಯರ ತಂಡ ಹಾಲಿ ಚಾಂಪಿಯನ್ನರಂತೆ ಆಡಲು ಅವಕಾಶವನ್ನೇ ಭಾರತೀಯ ತಂಡದ ಬೌಲರ್‌ಗಳು ಬಿಡಲಿಲ್ಲ. ಅದರಲ್ಲೂ ಎಡಗೈ ವೇಗಿ ರವಿ ಕುಮಾರ್ ಬೌಲಿಂಗ್ ದಾಳಿ ಅಮೋಘವಾಗಿದ್ದು ಬಾಂಗ್ಲಾ ಅಗ್ರ ಕ್ರಮಾಂಕವನ್ನು ಸಂಪೂರ್ಣವಾಗಿ ಕೆಡವಿ ಹಾಕಿದರು.

ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಭರ್ಜರಿ ಆರಂಭ ದೊರೆಯಿತು. ಬಾಂಗ್ಲಾದೇಶದ 14 ರನ್‌ಗಳಿಗೆ 3 ವಿಕೆಟ್ ಕಳೆದುಕೊಮಡಿ ಅಂತ್ಯಂತ ಸಂಕಷ್ಟಕ್ಕೆ ಸಿಲುಕಿತ್ತು. 37 ರನ್‌ಗಳಿದ್ದಾಗ ಮತ್ತೆರಡು ವಿಕೆಟ್ ಕಳೆದುಕೊಂಡಿತ್ತು ಬಾಂಗ್ಲಾ. ಭಾರತೀಯ ಬೌಲರ್‌ಗಳ ದಾಳಿ ಅಲ್ಲಿಗೆ ಸುಮ್ಮನಾಗಿರಲಿಲ್ಲ. 56 ರನ್‌ಗಳಾಗುವಷ್ಟರಲ್ಲಿ ಎದುರಾಳಿ ತಂಡದ 7 ವಿಕೆಟ್ ಕೆಡವುವಲ್ಲಿ ಭಾರತೋಯ ಬೌಲರ್‌ಗಳು ಯಶಸ್ವಿಯಾಗಿದ್ದರು. 8ನೇ ವಿಕೆಟ್‌ಗೆ ಬಾಂಗ್ಲಾದೇಶ ಸಣ್ಣ ಜೊತೆಯಾಟವನ್ನು ಪಡೆದ ಕಾರಣ 100ರ ಗಡಿ ದಾಟುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ಬಾಂಗ್ಲಾದೇಶ 111 ರನ್‌ಗಳಿಸುವಷ್ಟರಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.

ಭಾರತದ ಪರವಾಗಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ರವಿ ಕುಮಾರ್ 3 ವಿಕೆಟ್ ಕಿತ್ತು ಮಿಂಚುಹರಿಸಿದರು. ಕಿಕ್ಕಿ ಓಟ್ಸ್ವಾಲ್ 2 ವಿಕೆಟ್ ಕಬಳಿಸಿದರೆ ಕೌಶಲ್ ತಾಂಬೆ, ಅಂಕ್ರಿಶ್ ರಘುವಂಶಿ, ರಾಜ್ವರ್ಧನ್ ಹಂಗಾರ್ಗೇಕರ್ ತಲಾ ಒಂದು ವಿಕೆಟ್ ಸಂಪಾದಿಸಿದಿರು.

ಇನ್ನು ಬಾಂಗ್ಲಾದೇಶ ನೀಡಿದ 112 ರನ್‌ಗಳ ಸುಲಭ ಗುರಿಯನ್ನು ಬೆನ್ನ್ಟ್ಟಿದ ಭಾರತ ತಂಡ ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿತು. ಆದರೆ ಅದಾದ ಬಳಿಕ ಭಾರತದ ಕಿರಿಯರ ತಂಡದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತ ಕಿರಿಯರ ತಂಡ 30.5 ಓವರ್‌ಗಳಲ್ಲಿ ಬಾಂಗ್ಲಾದೇಶ ನಿಡಿದ್ದ ಗುರಿಯನ್ನು 5 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು.

ಈ ಮೂಲಕ ಭಾರತ ಸೆಮಿ ಫೈನಲ್‌ಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಸೆಮಿಫೈಣಲ್‌ನಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಅಂಡರ್ 19 ತಂಡ ಮುಖಾಮುಖಿಯಾಗಲಿದ್ದು ಈ ಪಂದ್ಯ ಫೆಬ್ರವರಿ 2ರಂದು ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಕಿರಿಯರ ತಂಡ ಹಾಗೂ ಅಫ್ಘಾನಿಸ್ತಾನ ಕಿರಿಯರ ತಂಡ ಮುಖಾಮುಖಿಯಾಗಲಿದೆ.

ಭಾರತ ಅಂಡರ್ 19 ಆಡುವ ಬಳಗ: ಹರ್ನೂರ್ ಸಿಂಗ್, ಅಂಗ್ಕ್ರಿಶ್ ರಘುವಂಶಿ, ಶೇಕ್ ರಶೀದ್, ಯಶ್ ಧುಲ್ (ನಾಯಕ), ರಾಜ್ ಬಾವಾ, ಸಿದ್ದಾರ್ಥ್ ಯಾದವ್, ಕೌಶಲ್ ತಾಂಬೆ,
ದಿನೇಶ್ ಬಾನಾ (ವಿಕೆಟ್ ಕೀಪರ್), ರಾಜವರ್ಧನ್ ಹಂಗರ್ಗೇಕರ್, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್
ಬೆಂಚ್: ಗರ್ವ್ ಸಾಂಗ್ವಾನ್, ಆರಾಧ್ಯ ಯಾದವ್, ಮಾನವ್ ಪರಾಖ್, ನಿಶಾಂತ್ ಸಿಂಧು, ಅನೀಶ್ವರ್ ಗೌತಮ್, ವಾಸು ವತ್ಸ್

ವಿರಾಟ್ ಕರೆತಂದ ಈ 5 ಆಟಗಾರರು ಈಗ ತಂಡದಲ್ಲಿಲ್ಲ,ಯಾಕೆ ಗೊತ್ತಾ? | Oneindia Kannada

ಬಾಂಗ್ಲಾದೇಶ ಅಂಡರ್ 19 ಆಡುವ ಬಳಗ: ಮಹ್ಫಿಜುಲ್ ಇಸ್ಲಾಂ, ಇಫ್ತಾಖರ್ ಹೊಸೈನ್ ಇಫ್ತಿ, ಪ್ರಾಂತಿಕ್ ನೌರೋಸ್ ನಬಿಲ್, ಐಚ್ ಮೊಲ್ಲಾ, ಎಂಡಿ ಫಾಹಿಮ್ (ವಿಕೆಟ್ ಕೀಪರ್), ಆರಿಫುಲ್ ಇಸ್ಲಾಂ, ಎಸ್‌ಎಂ ಮೆಹೆರೋಬ್, ರಕಿಬುಲ್ ಹಸನ್ (ನಾಯಕ), ಅಶಿಕುರ್ ಜಮಾನ್, ತಂಝಿಮ್ ಹಸನ್ ಸಾಕಿಬ್, ರಿಪಾನ್ ಮೊಂಡೋಲ್
ಬೆಂಚ್: ನೈಮುರ್ ರೋಹ್ಮನ್, ಅಬ್ದುಲ್ಲಾ ಅಲ್ ಮಾಮುನ್, ಮುಸ್ಫಿಕ್ ಹಸನ್, ತಹಜಿಬುಲ್ ಇಸ್ಲಾಂ

Story first published: Sunday, January 30, 2022, 11:34 [IST]
Other articles published on Jan 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X