ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ: ಶ್ರೀಲಂಕಾ ಬಳಿಕ ಮತ್ತೊಂದು ದೇಶ ಮನವಿ

Uae Offers to Host Ipl 13, Bcci yet to Decide

ಕೊರೊನಾ ವೈರಸ್‌ನ ಕಾರಣದಿಂದಾಗಿ ಐಪಿಎಲ್ ಸ್ಥಗಿತವಾಗಿದೆ. ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರವನ್ನು ಸದ್ಯ ಬಿಸಿಸಿಐ ತೆಗೆದುಕೊಂಡಿದೆ. ಈ ಮಧ್ಯೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಿರುವ ಶ್ರೀಲಂಕಾ ನಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ ಎಂದು ಮನವಿಯನ್ನು ಮಾಡಿತ್ತು. ಅದಾದ ಬಳಿಕ ಮತ್ತೊಂದು ದೇಶ ಇದೇ ರೀತಿ ಬಿಸಿಸಿಐಗೆ ಮನವಿಯನ್ನು ಸಲ್ಲಿಸಿದೆ. ಈ ವಿಚಾರವನ್ನು ಬಿಸಿಸಿಐ ಖಜಾಂಚಿಯೇ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಐಪಿಎಲ್ ಆಯೋಜನೆ ಮಾಡಿದ ಅನುಭವ ಹೊಂದಿರುವ ದೇಶವೇ ಈಗ ಈ ಮನವಿಯನ್ನು ಮಾಡಿದೆ. ಇದಕ್ಕೆ ಬಿಸಿಸಿಐ ಯಾವ ರೀತಿ ಸ್ಪಂದಿಸಿದೆ. ಮುಂದೆ ಯಾವ ರೀತಿಯ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ. ಕೊರೊನಾ ವೈರಸ್ ಜಗತ್ತಿನಲ್ಲಿ ಇನ್ನು ಅಟ್ಟಹಾಸ ಮುಂದುವರಿಸುತ್ತಿರುವ ಸಂದರ್ಭದಲ್ಲಿ ಐಪಿಎಲ್ ನಿರೀಕ್ಷೆ ಎಷ್ಟು ಸಾಧ್ಯ ಎಂಬುದು ಎಲ್ಲವೂ ಈಗ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.

ಬಿಸಿಸಿಐ ಬಳಿ ಮನವಿ ಮಾಡಿಕೊಂಡ ಯುಎಇ

ಬಿಸಿಸಿಐ ಬಳಿ ಮನವಿ ಮಾಡಿಕೊಂಡ ಯುಎಇ

ಬಿಸಿಸಿಐ ಬಳಿಕ ತಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ ಎಂದು ಆಹ್ವಾನವನ್ನು ಕೊಟ್ಟಿರುವ ದೇಶ ಯುನೈಟೆಟ್ ಅರಬ್ ಎಮಿರೇಟ್ಸ್. ಈ ಬಗ್ಗೆ ಪತ್ರವನ್ನು ಬರೆದಿರುವ ಯುಎಇ ತನ್ದನ ರಾಷ್ಟ್ರದಲ್ಲಿ ಐಪಿಎಲ್ ಆಯೋಜಿಸುವ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.

ಬಿಸಿಸಿಐ ಖಜಾಂಚಿ ಪ್ರತಿಕ್ರಿಯೆ

ಬಿಸಿಸಿಐ ಖಜಾಂಚಿ ಪ್ರತಿಕ್ರಿಯೆ

ಯುಎಇ ಕಡೆಯಿಂದ ಐಪಿಎಲ್ ಆಯೋಜನೆಗೆ ಮನವಿ ಬಂದಿರುವ ಬಗ್ಗೆ ಬಿಸಿಸಿಐ ಖಜಾಂಚಿ ಪ್ರತಿಕ್ರಿಯಿಸಿದ್ದಾರೆ. ನಮಗೆ ಅವಶ್ಯಕತೆಯಿದ್ದರೆ ಐಪಿಎಕ್ ಆಯೋಜನೆಗೆ ಸಿದ್ಧವಿರುವುದಾಗಿ ಯುಎಇ ಕೇಳಿಕೊಂಡಿದೆ. ಆದರೆ ಈಗ ಯಾವುದೇ ವಿದೇಶಿ ಪ್ರಯಾಣಗಳು ಸಾಧ್ಯವಾಗುವುದಿಲ್ಲ. ಹಾಗಾಗಿ ಆ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳು ಸಾಧ್ಯವಿಲ್ಲ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹೇಳಿದ್ದಾರೆ.

ಯುಎಇಗೆ ಐಪಿಎಲ್ ಆಯೋಜನೆ ಅನುಭವ

ಯುಎಇಗೆ ಐಪಿಎಲ್ ಆಯೋಜನೆ ಅನುಭವ

ಯುಎಇಗೆ ಈ ಹಿಂದೆಯೂ ಐಪಿಎಲ್ ಆಯೋಜನೆ ಮಾಡಿದ ಅನುಭವ ಇದೆ. ಹೀಗಾಗಿ ಬೆಳವಣಿಗೆಯನ್ನು ನೋಡಿಕೊಂಡು ಈ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆಯನ್ನು ನಡೆಸಿದರೆ ಅಚ್ಚರಿಯಿಲ್ಲ. 2014ರಲ್ಲಿ ಲೋಕಸಭಾ ಚುನಾವಣೆ ಇದ್ದ ಸಂದರ್ಭದಲ್ಲಿ 20 ಪಂದ್ಯಗಳನ್ನು ಯುಎಇನಲ್ಲಿ ಆಯೋಜನೆ ಮಾಡಲಾಗಿತ್ತು.

ಶ್ರೀಲಂಕಾದಿಂದಲೂ ಮನವಿ

ಶ್ರೀಲಂಕಾದಿಂದಲೂ ಮನವಿ

ಇದಕ್ಕೂ ಮುನ್ನ ಶ್ರೀಲಂಕಾ ದೇಶವೂ ಕೂಡ ಐಪಿಎಲ್ ಆಯೋಜನೆಗೆ ಮನವಿಯನ್ನು ಮಾಡಿಕೊಂಡಿತ್ತು. ಕೊರೊನಾ ವೈರಸ್ ಶ್ರೀಲಂಕಾದಲ್ಲಿ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಭಾರತಕ್ಕಿಂತ ಮುನ್ನವೇ ಶ್ರೀಲಂಕಾ ಕೊರೊನಾ ವೈರಸ್‌ನಿಂದ ಮುಕ್ತವಾಗಲಿದೆ. ಅಂತಾ ಸಂದರ್ಭವನ್ನು ಬಳಸಿಕೊಂಡು ಶ್ರೀಲಂಕಾದಲ್ಲಿ ಐಪಿಎಲ್ ಆಯೋಜಿಸಬಹುದು ಎಂದು ಮನವಿಯನ್ನು ಮಾಡಿಕೊಂಡಿತ್ತು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಆರ್ಭಟ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ಸದ್ಯಕ್ಕಿಲ್ಲ ಎಂಬುದು ಸ್ಪಷ್ಟ.

Story first published: Sunday, May 10, 2020, 20:10 [IST]
Other articles published on May 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X