ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇ T20 ಲೀಗ್‌: ಜಾಗತಿಕ ಪ್ರಸಾರದ ಹಕ್ಕು ಪಡೆದ ಜೀ ನೆಟ್‌ವರ್ಕ್‌, ಎಷ್ಟು ತಂಡ? ಪಂದ್ಯಗಳೆಷ್ಟು?

UAE T20 League

ಮುಂಬರುವ ಯುಎಇಯ ಟಿ20 ಲೀಗ್‌ನ ಜಾಗತಿಕ ಮಾಧ್ಯಮ ಪ್ರಸಾರದ ಹಕ್ಕನ್ನು ಜೀ ನೆಟ್‌ವರ್ಕ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಜಾಗತಿಕ ಮನರಂಜನಾ ಕ್ಷೇತ್ರದ ಪ್ರಮುಖ ಪ್ರಸಾರಕರಲ್ಲಿ ಒಂದಾದ ಜೀನೊಂದಿಗೆ ದೀರ್ಘಾವಧಿಯ ಜಾಗತಿಕ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಪ್ರಕಟಿಸಿದೆ.

ಈ ಒಪ್ಪಂದದೊಂದಿಗೆ ಯುಎಇ ಟಿ20 ಲೀಗ್‌ ಜೀನ ಚಾನಲ್‌ಗಳು ಮತ್ತು ಅದರ ಒಟಿಟಿ ಫ್ಲಾಟ್‌ಫಾರ್ಮ್ ಆದ ಜೀ5 ಮತ್ತು ಭಾರತ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಪ್ರಸಾರವಾಗುತ್ತದೆ.

34 ಪಂದ್ಯ, ಆರು ತಂಡಗಳ UAE ಟಿ20 ಲೀಗ್

34 ಪಂದ್ಯ, ಆರು ತಂಡಗಳ UAE ಟಿ20 ಲೀಗ್

ಈಗಾಗಲೇ ರೂಪುಗೊಂಡಿರುವ ಹೊಸ ಟಿ20 ಲೀಗ್ ಯುಎಇನಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು 34 ಪಂದ್ಯಗಳ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, GMR ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಫ್ರಾಂಚೈಸಿಯನ್ನು ಹೊಂದಿರಲಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ನೇಮಕ

190ಕ್ಕೂ ಹೆಚ್ಚು ದೇಶಗಳ ನೆಟ್‌ವರ್ಕ್ ಹೊಂದಿರುವ ಜೀ

190ಕ್ಕೂ ಹೆಚ್ಚು ದೇಶಗಳ ನೆಟ್‌ವರ್ಕ್ ಹೊಂದಿರುವ ಜೀ

190+ ದೇಶಗಳಲ್ಲಿ ಜೀಯ ಪ್ರಬಲ ಜಾಗತಿಕ ನೆಟ್‌ವರ್ಕ್ ಅನ್ನು ಹೊಂದಿದ್ದು, ವೀಕ್ಷಕರನ್ನ ತಲುಪುವಲ್ಲಿ ಯಶಸ್ವಿಯಾಗಿದೆ. ತನ್ನ ವಿಸ್ತಾರವಾದ ನೆಟ್‌ವರ್ಕ್‌ನೊಂದಿಗೆ ಜನರನ್ನ ತಲುಪಲು ಮತ್ತು ಜಾಹೀರಾತುದಾರರನ್ನ ಸೆಳೆಯಲು ಸಹಾಯ ಮಾಡುತ್ತದೆ. ತನ್ನ ವ್ಯವಹಾರಗಳ ನಡುವಿನ ಅಪಾರ ಸಿನರ್ಜಿಗಳು ಮತ್ತು ಜಾಹೀರಾತುದಾರರು ಮತ್ತು ವಿತರಣಾ ಪಾಲುದಾರರಿಗೆ ಸಮಗ್ರ ವಿಧಾನದೊಂದಿಗೆ, ಜೀ ಬಹು-ಪ್ಲಾಟ್‌ಫಾರ್ಮ್ ತಂತ್ರದ ಮೂಲಕ ಅಭಿಮಾನಿಗಳನ್ನು 100 ಮಿಲಿಯನ್‌ಗಿಂತಲೂ ಹೆಚ್ಚು ಮನೆಗಳಿಗೆ ಕೊಂಡೊಯ್ಯುತ್ತದೆ.

ಯುಎಇ ಟಿ20 ಲೀಗ್ ಪಂದ್ಯಗಳು ಜೀ ನೆಟ್‌ವರ್ಕ್ 10 ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ದಕ್ಷಿಣ ಮತ್ತು ಪೂರ್ವ ಪ್ರದೇಶಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರವಾಗುತ್ತವೆ. ಲೀಗ್ ಅನ್ನು ಜೀ5 ನಲ್ಲಿ ಮತ್ತು ಜಾಗತಿಕವಾಗಿ ರೇಡಿಯೊದಲ್ಲಿ ಏಕಕಾಲದಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

IPL 2022: ಕ್ವಾಲಿಫೈಯರ್ 1ರಲ್ಲಿ GT vs RR; ಕೋಲ್ಕತ್ತಾದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ!

ಜೀ ಪ್ರಸಾರದ ಹಕ್ಕು ಪಡೆದುಕೊಂಡಿದ್ದಕ್ಕೆ ಯುಎಇ ಟಿ20 ಲೀಗ್ ಚೇರ್‌ಮನ್ ಸಂತಸ

ಜೀ ಪ್ರಸಾರದ ಹಕ್ಕು ಪಡೆದುಕೊಂಡಿದ್ದಕ್ಕೆ ಯುಎಇ ಟಿ20 ಲೀಗ್ ಚೇರ್‌ಮನ್ ಸಂತಸ

''ಲೀಗ್‌ನೊಂದಿಗೆ ಸಂಯೋಜಿತವಾಗಿರುವ ಜೀಯಂತಹ ವಿಶ್ವಾಸಾರ್ಹ ಪ್ರಸಾರ ಪಾಲುದಾರರನ್ನು ಹೊಂದುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಯಾವುದೂ ಇಲ್ಲ. ಈ ಲೀಗ್‌ನಲ್ಲಿ ನಂಬಿಕೆಯನ್ನು ಹೊಂದಿದ್ದಕ್ಕಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿ ಉದ್ಯಮವಾಗಿ ಬೆಳೆಯಲು ಜೀ MD & CEO ಪುನಿತ್ ಗೋಯೆಂಕಾ ಮತ್ತು ಬಿಸಿನೆಸ್ ಸೌತ್ ಏಷ್ಯಾದ ಅಧ್ಯಕ್ಷ ರಾಹುಲ್ ಜೊಹ್ರಿ ಇಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ. ಯುಎಇಯ ಟಿ20 ಲೀಗ್‌ನ ಮೊದಲ ಮಾಧ್ಯಮ ಹಕ್ಕುಗಳ ಸ್ವಾಧೀನದೊಂದಿಗೆ ಕ್ರೀಡಾ ಪ್ರಸಾರವನ್ನು ಮರು-ಪ್ರವೇಶಿಸಲು ಜೀ ನಿರ್ಧರಿಸಿದೆ ಎಂಬುದು ಮತ್ತಷ್ಟು ಸಂತೋಷದ ವಿಷಯವಾಗಿದೆ. ನಮ್ಮ ಲೀಗ್ ಅನ್ನು ಸಾಟಿಯಿಲ್ಲದ ಮಟ್ಟಕ್ಕೆ ಕೊಂಡೊಯ್ಯಲು ಜೀ ವೀಕ್ಷಕರ ಬಲವನ್ನು ಹೊಂದಿದೆ ಎಂದು ನಮಗೆ ತುಂಬಾ ವಿಶ್ವಾಸವಿದೆ'' ಎಂದು ಯುಎಇಯ ಟಿ20 ಲೀಗ್‌ನ ಅಧ್ಯಕ್ಷ ಖಾಲಿದ್ ಅಲ್ ಜರೂನಿ ಹೇಳಿದರು.

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದ್ದೇವೆ ಎಂದು ಭರವಸೆ ನೀಡಿದ ರಾಹುಲ್ ಜೊಹ್ರಿ

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿದ್ದೇವೆ ಎಂದು ಭರವಸೆ ನೀಡಿದ ರಾಹುಲ್ ಜೊಹ್ರಿ

''ಜೀನಲ್ಲಿ, ಯುಎಇಯ ಟಿ20 ಲೀಗ್‌ನ ಅಧಿಕೃತ ಜಾಗತಿಕ ಮಾಧ್ಯಮ ಹಕ್ಕುದಾರರಾಗಲು ನಾವು ಸಂತೋಷಪಡುತ್ತೇವೆ. ಈಗಾಗಲೇ ಜಾಗತಿಕವಾಗಿ ಆಕರ್ಷಿಸುತ್ತಿರುವ ಲೀಗ್, ದೊಡ್ಡ ಕ್ರಿಕೆಟ್ ತಾರೆಗಳು ಮತ್ತು ತಂಡದ ಫ್ರಾಂಚೈಸಿಗಳು ಪ್ರಪಂಚದಾದ್ಯಂತದ ವೀಕ್ಷಕರಿಗೆ ಅದ್ಭುತ ಕ್ರಿಕೆಟ್ ಮತ್ತು ಮನರಂಜನೆಯನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ. ಯುಎಇಯ ಟಿ20 ಲೀಗ್ ಅನ್ನು ಭಾರತ ಮತ್ತು ಜಗತ್ತಿನಾದ್ಯಂತ ಪ್ರೇಕ್ಷಕರಿಗೆ ಕೊಂಡೊಯ್ಯಲು ತನ್ನ ಪ್ಲಾಟ್‌ಫಾರ್ಮ್‌ಗಳ ಬಲವನ್ನು ಬಳಸಲು ಜೀ ಬದ್ಧವಾಗಿದೆ'' ಎಂದು ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಬಿಸಿನೆಸ್ ಸೌತ್ ಏಷ್ಯಾದ ಅಧ್ಯಕ್ಷ ರಾಹುಲ್ ಜೊಹ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

Story first published: Tuesday, May 24, 2022, 19:17 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X