ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಊಬರ್ ಕಪ್: 5 ಪಂದ್ಯಗಳ ಟೈ ಪಂದ್ಯದಲ್ಲಿ ಕೊರಿಯಾ ವಿರುದ್ಧ ಸೋತ ಪಿವಿ ಸಿಂಧು ಪಡೆ

Uber Cup: Korea women beat India women by 5-0 in badminton tie match

ಊಬರ್ ಕಪ್ ಲೀಗ್ ಪಂದ್ಯಗಳ ಮೂರನೇ ಟೈ ಪಂದ್ಯದಲ್ಲಿ ಕೊರಿಯಾ ವಿರುದ್ಧ ಪಿವಿ ಸಿಂಧು ಮುನ್ನಡೆಸಿದ್ದ ಭಾರತ ತಂಡ ಸೋಲುಂಡಿದೆ. ಮೊದಲಿಗೆ ನಡೆದಿದ್ದ ಕೆನಡಾ ಮತ್ತು ಯುಎಸ್ಎ ವಿರುದ್ಧದ ಟೈ ಪಂದ್ಯಗಳಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಸುತ್ತಿನ ಅರ್ಹತೆಯನ್ನು ಖಚಿತಪಡಿಸಿಕೊಂಡಿರುವ ಭಾರತಕ್ಕೆ ಈ ಸೋಲು ಟೂರ್ನಿಯಲ್ಲಿ ಹಿನ್ನಡೆಯನ್ನೇನೂ ಉಂಟು ಮಾಡಿಲ್ಲ. ಆದರೆ, ಕೊರಿಯಾ ವಿರುದ್ಧ‍ ಭಾರತ ಯಾವುದೇ ಮುಖಾಮುಖಿಯಲ್ಲಿಯೂ ಗೆಲ್ಲದೇ ಇರುವುದು ಮುಂದಿನ ಪಂದ್ಯಗಳಲ್ಲಿ ಭಾರತದ ಪ್ರದರ್ಶನ ಹೇಗಿರಲಿದೆ ಎಂಬ ಆತಂಕವನ್ನು ಮೂಡಿಸಿದೆ ಹಾಗೂ ಆಟಗಾರರನ್ನು ಒತ್ತಡಕ್ಕೆ ದೂಡಿದೆ.

ಐದು ಸುತ್ತುಗಳ ಬ್ಯಾಡ್ಮಿಂಟನ್ ಟೈನ ಫಲಿತಾಂಶ:

ಕೆನಡಾ ಮತ್ತು ಯುಎಸ್ಎ ತಂಡಗಳನ್ನು ಮೊದಲೆರಡು ಟೈ ಪಂದ್ಯಗಳಲ್ಲಿ ಸದೆ ಬಡಿದಿದ್ದ ಭಾರತ ವನಿತೆಯರ ತಂಡ ಇಂದು ನಡೆದ ಕೊರಿಯಾ ವಿರುದ್ಧದ ಟೈ ಪಂದ್ಯದಲ್ಲಿಯೂ ಸಹ ಗೆಲ್ಲಲಿದೆ ಎಂದು ಊಹಿಸಲಾಗಿತ್ತು. ಆದರೆ, ಐದು ಪಂದ್ಯಗಳ ಪೈಕಿ ಒಂದೇ ಒಂದು ಪಂದ್ಯದಲ್ಲಿಯೂ ಗೆಲ್ಲದ ಭಾರತ ಹೀನಾಯ ಸೋಲನ್ನು ಅನುಭವಿಸಿದೆ. ಕಳೆದೆರಡು ಪಂದ್ಯಗಳಲ್ಲಿ ಸೋಲಿಲ್ಲದೇ ಅಬ್ಬರಿಸಿದ್ದ ಪಿವಿ ಸಿಂಧು ಈ ಪಂದ್ಯದಲ್ಲಿ ಆನ್ ಸೆಯಂಗ್ ವಿರುದ್ಧ ಸೋಲುವುದರ ಮೂಲಕ ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತು ಹಾಗೂ ನಂತರ ಒಮ್ಮೆಯೂ ಗೆಲುವನ್ನು ಕಾಣಲೇ ಇಲ್ಲ. ಇನ್ನು ಈ ಪಂದ್ಯದಲ್ಲಿ ಜರುಗಿದ ಒಟ್ಟು 10 ಸೆಟ್‌ಗಳ ಪೈಕಿ ಯಾವುದೇ ಸೆಟ್‌ನಲ್ಲೂ ಸಹ ಭಾರತ ಕೊರಿಯಾ ವಿರುದ್ಧ ಮುನ್ನಡೆ ಸಾಧಿಸದೇ ಇರುವುದು ವಿಪರ್ಯಾಸ.

RR vs DC: ಈ ತಂಡ ಗೆದ್ದರೆ ಆರ್‌ಸಿಬಿಗೆ ಇದೆ ಎರಡನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ!RR vs DC: ಈ ತಂಡ ಗೆದ್ದರೆ ಆರ್‌ಸಿಬಿಗೆ ಇದೆ ಎರಡನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ!

ಆನ್ ಸೆಯಂಗ್ ಅವರು ಪಿವಿ ಸಿಂಧು ಅವರನ್ನು 21-15, 21-14 ಅಂತರದಿಂದ ಸೋಲಿಸಿದರು
ಲೀ ಸೋ ಹೀ / ಶಿನ್ ಸೆಯುಂಗ್ ಚಾನ್ 21-13, 21-11 ರಲ್ಲಿ ಶ್ರುತಿ ಮಿಶ್ರಾ / ಸಿಮ್ರಾನ್ ಸಿಂಘಿ ಅವರನ್ನು ಸೋಲಿಸಿದರು
ಕಿಮ್ ಗಾ ಯುನ್ ಅವರು ಆಕರ್ಷಿ ಕಶ್ಯಪ್ ಅವರನ್ನು 21-10, 21-10 ಅಂತರದಿಂದ ಸೋಲಿಸಿದರು
ಕಿಮ್ ಹೈ ಜಿಯೋಂಗ್ / ಕಾಂಗ್ ಹೀ ಯೋಂಗ್ ತನಿಶಾ ಕ್ರಾಸ್ಟೊ / ಟ್ರೀಶಾ ಜಾಲಿಯನ್ನು ಮುನ್ನಡೆಸಿದರು: 21-14, 21-11
ಸಿಮ್ ಯು ಜಿನ್ 21-18, 21-17ರಲ್ಲಿ ಅಸ್ಮಿತಾ ಚಲಿಹಾ ಅವರನ್ನು ಮಣಿಸಿದರು

Story first published: Wednesday, May 11, 2022, 19:25 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X