ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಆಟಗಾರ ಉಮರ್ ಅಕ್ಮಲ್‌ಗೆ ಜೀವಮಾನ ನಿಷೇಧದ ಭೀತಿ!

Umar Akmal charged under PCB’s anti-Corruption code, could face lifetime ban

ಇಸ್ಲಮಾಬಾದ್, ಮಾರ್ಚ್ 20: ಪಾಕಿಸ್ತಾನ ಬ್ಯಾಟ್ಸ್‌ಮನ್ ಉಮರ್ ಅಕ್ಮಲ್‌ಗೆ ಪಿಸಿಬಿಯಿಂದ ಜೀವಮಾನದ ನಿಷೇಧದ ಶಿಕ್ಷೆಯ ಭೀತಿ ಶುರುವಾಗಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಭ್ರಷ್ಟಾಚಾರ ನಿಗ್ರಹ ದಳದ ನಿಯಮ ಉಲ್ಲಂಘಿಸಿದ್ದ ಆರೋಪ ಅಕ್ಮಲ್ ವಿರುದ್ಧ ಕೇಳಿ ಬಂದಿದೆ.

'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್'ಆತ ಅದ್ಭುತ ಬ್ಯಾಟ್ಸ್‌ಮನ್': ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರಿಸಿದ ಡೇಲ್ ಸ್ಟೇನ್

ಫಿಕ್ಸಿಂಗ್‌ಗಾಗಿ ಯಾರಾದರೂ ಸಂಪರ್ಕಿಸಿದಾಗ ಆ ವಿಚಾರವನ್ನು ತಡವಾಗಿ ಪಿಸಿಬಿ ಗಮನಕ್ಕೆ ತಂದು ಉಮರ್ ಅಕ್ಮಲ್ ತಪ್ಪೆಸಗಿದ್ದಾಗಿ ಆರೋಪಿಸಲಾಗಿದೆ. ಹೀಗಾಗಿ ಅಕ್ಮಲ್ 6 ವರ್ಷಗಳ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆಯಿದೆ. ನಿಷೇಧವನ್ನು ಜೀವಮಾನದವರೆಗೂ ವಿಸ್ತರಿಸಲು ಅವಕಾಶವೂ ಇದೆ.

ಕೊರೊನಾ ವೈರಸ್ ಭೀತಿ: ಸೆಲ್ಫಿಗಾಗಿ ಬಂದಾಕೆಗೆ ವಿರಾಟ್ ಪ್ರತಿಕ್ರಿಯೆ ಹೀಗಿತ್ತು: ವಿಡಿಯೋಕೊರೊನಾ ವೈರಸ್ ಭೀತಿ: ಸೆಲ್ಫಿಗಾಗಿ ಬಂದಾಕೆಗೆ ವಿರಾಟ್ ಪ್ರತಿಕ್ರಿಯೆ ಹೀಗಿತ್ತು: ವಿಡಿಯೋ

ತನ್ನ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಅಕ್ಮಲ್ ವಿವರಣೆ ನೀಡಬೇಕಾಗಿದೆ. ಮಾರ್ಚ್ 31ರ ಒಳಗಾಗಿ ಆರೋಪಕ್ಕೆ ಕುರಿತಂತೆ ಸ್ಪಷ್ಟನೆ ನೀಡಲು ಪಿಸಿಬಿ ತಿಳಿಸಿದೆ. ಈ ವೇಳೆ ಅಕ್ಮಲ್‌ದೇ ತಪ್ಪೆಂದು ಕಂಡುಬಂದರೆ ಅಕ್ಮಲ್ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಇಂಗ್ಲೆಂಡ್‌ನ ವಿಶೇಷ ಟೂರ್ನಿ 'ದ ಹಂಡ್ರೆಡ್‌'ನಿಂದ ಡೇವಿಡ್ ವಾರ್ನರ್ ಹೊರಕ್ಕೆಇಂಗ್ಲೆಂಡ್‌ನ ವಿಶೇಷ ಟೂರ್ನಿ 'ದ ಹಂಡ್ರೆಡ್‌'ನಿಂದ ಡೇವಿಡ್ ವಾರ್ನರ್ ಹೊರಕ್ಕೆ

'ಸಂಬಂಧವಿಲ್ಲದ ಎರಡು ಘಟನೆಗಳಲ್ಲಿ ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯ 2.4.4 ನೇ ವಿಧಿ ಉಲ್ಲಂಘನೆಗಾಗಿ ಉಮರ್ ಅಕ್ಮಲ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆರೋಪಿಸಿದೆ,' ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ಬರೆದುಕೊಂಡಿದೆ. ಅಕ್ಮಲ್ ಮೇಲೆ ಆರೋಪಿಸಿ ಪಿಸಿಬಿ ಮಾರ್ಚ್ 17ರಂದು ನೋಟಿಸ್ ನೀಡಿತ್ತು.

Story first published: Friday, March 20, 2020, 21:37 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X