ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಕ್ಸರ್ ಸಿಡಿಸೋದ್ರಲ್ಲಿ ಕೊಹ್ಲಿಗಿಂತ ಮುಂದಿರುವ ಉಮೇಶ್ ಯಾದವ್: ವಿರಾಟ್‌ನ ಅಪರೂಪದ ಸಿಕ್ಸರ್!

Virat kohli

ವಿಶ್ವ ಕ್ರಿಕೆಟ್‌ನಲ್ಲಿ ಕಿಂಗ್‌ ಕೊಹ್ಲಿ ಎಂದೇ ಬಿರುದು ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ರನ್ ದಾಹ ಕಡಿಮೆಯಾಗಿದ್ದನ್ನೇ ಯಾರು ಕಂಡಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದ ರನ್ ಬೇಟೆಯಾಡುತ್ತಿರುವ ಕೊಹ್ಲಿ ಎಲ್ಲಾ ಫಾರ್ಮೆಟ್‌ನಿಂದ 23,000ಕ್ಕೂ ಅಧಿಕ ರನ್‌ ದಾಖಲಿಸಿದ್ದಾರೆ. ಕೊಹ್ಲಿ ಹೆಸರಲ್ಲಿ 70 ಶತಕಗಳು, 119 ಅರ್ಧಶತಕ, 7 ದ್ವಿಶತಕಗಳ ರೆಕಾರ್ಡ್‌ ಕಾಣಬಹುದು.

ಪ್ರಸ್ತುತ ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಆಗಿರುವ ವಿರಾಟ್‌ರನ್ನ ಕಿಂಗ್‌ ಕೊಹ್ಲಿ ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನ ನೀವೇ ಅರ್ಥ ಮಾಡಿಕೊಳ್ಳಬೇಕು. ಆಟಗಾರನಾಗಷ್ಟೇ ಅಲ್ಲದೆ ನಾಯಕನಾಗಿಯು ಟೀಮ್ ಇಂಡಿಯಾವನ್ನ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಇವರಿಗಿದೆ.

ಇಷ್ಟೆಲ್ಲಾ ದಾಖಲೆಗಳ ಸರಮಾಲೆ ತೊಟ್ಟಿರುವ ವಿರಾಟ್‌ರನ್ನ ಟೀಂ ಇಂಡಿಯಾ ಬೌಲರ್ ಉಮೇಶ್ ಯಾದವ್ ಹಿಂದಿಕ್ಕಿದ್ದಾರೆ ಅಂದ್ರೆ ನೀವು ನಂಬ್ತೀರಾ? ನಿಮಗೆ ನಂಬಲು ಸಾಧ್ಯವಾಗದಿದ್ರೂ ಅಂಕಿ-ಅಂಶಗಳು ನಿಮ್ಮನ್ನು ಒಂದೊಮ್ಮೆ ಆಶ್ಚರ್ಯಗೊಳಿಸುತ್ತವೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನ ಹಿಂದಿಕ್ಕಿರುವ ಉಮೇಶ್ ಯಾದವ್

ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನ ಹಿಂದಿಕ್ಕಿರುವ ಉಮೇಶ್ ಯಾದವ್

ಅರೇ..! ಇದೇನಿದು ವಿರಾಟ್ ಕೊಹ್ಲಿ ಎಲ್ಲಿ, ಉಮೇಶ್ ಯಾದವ್ ಬ್ಯಾಟಿಂಗ್ ಎಲ್ಲಿ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಒಂದು ದಾಖಲೆಯ ವಿಚಾರದಲ್ಲಿ ಕೊಹ್ಲಿಗಿಂತ ಉಮೇಶ್ ಯಾದವ್ ಮುಂದಿದ್ದಾರೆ ಅಂದ್ರೆ ನೀವು ನಂಬಲೇಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ 8,000 ರನ್ ಗಡಿ ಸಮೀಪಿರುವ ಕೊಹ್ಲಿಗೆ 10,11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಉಮೇಶ್ ಯಾದವ್ ಯಾವ ರೆಕಾರ್ಡ್‌ ಮಾಡಬಹುದು ಎಂದೆನಿಸಬಹುದು. ಆದ್ರೆ ಸಿಕ್ಸರ್ ಸಿಡಿಸೋದರಲ್ಲಿ, ಕೊಹ್ಲಿ ಉಮೇಶ್ ಯಾದವ್‌ಗಿಂತ ಹಿಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಅಪರೂಪದ ಸಿಕ್ಸರ್ ಸಿಡಿಸಿದ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ಅಪರೂಪದ ಸಿಕ್ಸರ್ ಸಿಡಿಸಿದ ಕೊಹ್ಲಿ

ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ನ ಮೊದಲ ದಿನದಾಟದಲ್ಲಿ ವಿರಾಟ್‌ ಕೊಹ್ಲಿ ಅತ್ಯಂತ ತಾಳ್ಮೆಯ, ಅದ್ಭುತ ಇನ್ನಿಂಗ್ಸ್‌ ಆಡಿದ್ರು. 79 ರನ್ ಕಲೆಹಾಕಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸುವ ಮೊದಲು ವಿರಾಟ್ ಬ್ಯಾಟ್‌ನಿಂದ 12 ಬೌಂಡರಿ ಮತ್ತು 1 ಸಿಕ್ಸರ್ ಸಿಡಿದಿತ್ತು. ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಪ್ರಕಾರ, ಇದು 2019 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ಐದನೇ ಸಿಕ್ಸರ್ ಆಗಿದೆ.

ಕೊಹ್ಲಿಗೆ ಹೋಲಿಸಿದರೆ ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಗರಿಷ್ಠ ಸಿಕ್ಸರ್ ಸಿಡಿಸಿದ್ದಾರೆ. ಅದೇ ಅವಧಿಯಲ್ಲಿ ರೋಹಿತ್ 51 ಸಿಕ್ಸರ್‌ಗಳನ್ನು ಸಿಡಿಸಿದರೆ, ಮಯಾಂಕ್ 25 ಮತ್ತು ಪಂತ್ 18 ಗರಿಷ್ಠ ಸಿಕ್ಸರ್‌ಗಳನ್ನು ದಾಖಲಿಸಿದ್ದಾರೆ.

ರಿಷಭ್ ಪಂತ್ ಹುಡುಗಾಟ: ಕೋಚ್ ದ್ರಾವಿಡ್‌, ಕ್ಯಾಪ್ಟನ್‌ ಕೊಹ್ಲಿಯ ಪರದಾಟ

ಕೊಹ್ಲಿಗಿಂತ ಹೆಚ್ಚು ಸಿಕ್ಸರ್ ದಾಖಲಿಸಿರುವ ಉಮೇಶ್ ಯಾದವ್

41ನೇ ಓವರ್‌ನಲ್ಲಿ ಕಗಿಸೊ ರಬಾಡ ಎಸೆತದಲ್ಲಿ ಕೊಹ್ಲಿ ಸಿಡಿಸಿದ್ದರು. ಇದು ಭಾರತದ ಮೊದಲ ಸಿಕ್ಸರ್ ಕೂಡ ಆಗಿತ್ತು. ಅದ್ರಲ್ಲೂ ಕಳೆದ ಮೂರು ವರ್ಷದಲ್ಲಿ ಕೊಹ್ಲಿ 5ನೇ ಸಿಕ್ಸರ್ ಅಂದ್ರೆ ನೀವು ನಂಬಲೇಬೇಕು.

ಇಲ್ಲಿ ತುಂಬಾ ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಇದೇ ಅವಧಿಯಲ್ಲಿ ವೇಗಿ ಉಮೇಶ್ ಯಾದವ್ ವಿರಾಟ್ ಕೊಹ್ಲಿಗಿಂತ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಉಮೇಶ್ ಯಾದವ್ ಎದುರಿಸಿದ 155 ಎಸೆತಗಳಲ್ಲಿ 11 ಸಿಕ್ಸರ್‌ ಸಿಡಿಸಿದ್ರೆ, ವಿರಾಟ್‌ ಕೊಹ್ಲಿ 2568 ಎಸೆತಗಳಲ್ಲಿ ಗಳಿಸಿರೋದು 5 ಸಿಕ್ಸರ್ ಮಾತ್ರ.

ಒಟ್ಟಾರೆ 99 ಟೆಸ್ಟ್‌ ಕ್ರಿಕೆಟ್‌ ಪಂದ್ಯಗಳು 167 ಇನ್ನಿಂಗ್ಸ್‌ಗಳಲ್ಲಿ ವಿರಾಟ್‌ ಬ್ಯಾಟ್‌ನಿಂದ ಸಿಡಿದಿರೋದು 24 ಸಿಕ್ಸರ್‌ಗಳಾಗಿವೆ. ಅದೇ ಅಪರೂಪಕ್ಕೆ ಬ್ಯಾಟಿಂಗ್ ಬರುವ ಉಮೇಶ್ ಯಾದವ್ 60 ಇನ್ನಿಂಗ್ಸ್‌ಗಳಲ್ಲಿ 20 ಬಾರಿ ಚೆಂಡನ್ನ ಬೌಂಡರಿ ಲೈನ್ ದಾಟಿಸಿದ್ದಾರೆ.

ಐಪಿಎಲ್: ನೂತನ ಫ್ರಾಂಚೈಸಿಗಲ್ಲ, ಈ ತಂಡಕ್ಕೆ ನಾಯಕನಾಗಲಿದ್ದಾರೆ ಶ್ರೇಯಸ್ ಐಯ್ಯರ್

BCCI ನಿರ್ಧಾರಕ್ಕೆ ಕಾಯುತ್ತಿರ ಪಾಕ್ ಕ್ರಿಕೆಟ್ ಮಂಡಳಿ! | Oneindia Kannada
223 ರನ್‌ಗಳಿಗೆ ಭಾರತ ಆಲೌಟ್

223 ರನ್‌ಗಳಿಗೆ ಭಾರತ ಆಲೌಟ್

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 223 ರನ್‌ಗಳಿಸಲಷ್ಟೇ ಶಕ್ತವಾಯಿತು. ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೆ.ಎಲ್ ರಾಹುಲ್ 12 ರನ್, ಮತ್ತೊಬ್ಬ ಓಪನರ್ ಮಯಾಂಕ್ 15, ಚೇತೇಶ್ವರ ಪೂಜಾರ 43, ವಿರಾಟ್ ಕೊಹ್ಲಿ 79, ಅಜಿಂಕ್ಯ ರಹಾನೆ 9, ಪಂತ್ 27, ಅಶ್ವಿನ್ 2, ಶಾರ್ದೂಲ್ ಠಾಕೂರ್ 12, ಬುಮ್ರಾ 0, ಉಮೇಶ್ ಯಾದವ್ ಅಜೇಯ 4, ಶಮಿ 7 ರನ್‌ ಗಳಿಸಿದ್ರು.

ಇದಕ್ಕುತ್ತರಾಗಿ ಮೊದಲ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ವಿಕೆಟ್ ಕಳೆದುಕೊಂಡು 17ರನ್ ಕಲೆಹಾಕಿತು.

Story first published: Wednesday, January 12, 2022, 16:29 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X