ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಗೆಲ್ಲುವುದು ಸುಲಭದ ಮಾತಲ್ಲ ; ಟೀಮ್ ಇಂಡಿಯಾಗಿರುವ ಸವಾಲನ್ನು ಬಿಚ್ಚಿಟ್ಟ ಉಮೇಶ್ ಯಾದವ್

 Umesh Yadav opines on Kane Williamson ahead of WTC final
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಗೆಲ್ಲುವುದು ಅಷ್ಟು ಸುಲಭವಲ್ಲ | Oneindia Kannada

ಐಪಿಎಲ್ ಮುಂದೂಡಲ್ಪಟ್ಟ ನಂತರ ಇದೀಗ ಎಲ್ಲರ ಚಿತ್ತ ಜೂನ್ 18ರಿಂದ ಆರಂಭವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಮೇಲಿದೆ. ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ ಪ್ರಕಟಿಸಿರುವ ಟೀಮ್ ಇಂಡಿಯಾ ತಂಡ ಜೂನ್ ಮೊದಲನೆ ವಾರದಲ್ಲಿ ಇಂಗ್ಲೆಂಡ್‌ಗೆ ಹಾರಲಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತದ ವೇಗಿ ಉಮೇಶ್ ಯಾದವ್ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ಕುರಿತು ಮಾತನಾಡಿದ್ದಾರೆ. ಹೀಗೆ ಪಂದ್ಯದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಉಮೇಶ್ ಯಾದವ್ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಅವರನ್ನು ಆದಷ್ಟು ಬೇಗ ಔಟ್ ಮಾಡಬೇಕು ಎಂದು ತಿಳಿಸಿದ್ದಾರೆ.

'ಕೇನ್ ವಿಲಿಯಮ್ಸನ್ ಒಬ್ಬ ಡೇಂಜರಸ್ ಬ್ಯಾಟ್ಸ್‌ಮನ್‌, ವಿಲಿಯಮ್ಸನ್ ಹೆಚ್ಚಿನ ದೌರ್ಬಲ್ಯತೆಯನ್ನು ಹೊಂದಿಲ್ಲ. ಆದರೆ ಎಂತಹ ನುರಿತ ಆಟಗಾರನಾದರೂ ಕೂಡ ಉತ್ತಮ ಎಸೆತಕ್ಕೆ ವಿಕೆಟ್ ಒಪ್ಪಿಸಲೇಬೇಕು, ಹೀಗಾಗಿ ಬೌಲರ್‌ಗಳಾಗಿ ನಾವು ವಿಕೆಟ್ ಪಡೆಯುವಂತಹ ಉತ್ತಮ ಎಸೆತಗಳನ್ನು ಹೆಚ್ಚಾಗಿ ಹಾಕುವುದರ ಮೂಲಕ ಕೇನ್ ವಿಲಿಯಮ್ಸನ್ ವಿಕೆಟ್ ಪಡೆಯಬೇಕಿದೆ. ಹೀಗೆ ವೇಗವಾಗಿ ವಿಲಿಯಮ್ಸನ್ ಅವರ ವಿಕೆಟ್ ಪಡೆಯುವುದು ತಂಡಕ್ಕೆ ಖಂಡಿತವಾಗಿಯೂ ದೊಡ್ಡಮಟ್ಟದ ಅನುಕೂಲವಾಗಲಿದೆ' ಎಂದು ಉಮೇಶ್ ಯಾದವ್ ತಿಳಿಸಿದರು.

ಬುಧವಾರದಿಂದ ಭಾರತೀಯ ಆಟಗಾರರಿಗೆ 2 ವಾರಗಳ ಕ್ವಾರಂಟೈನ್ಬುಧವಾರದಿಂದ ಭಾರತೀಯ ಆಟಗಾರರಿಗೆ 2 ವಾರಗಳ ಕ್ವಾರಂಟೈನ್

ಇನ್ನೂ ಮುಂದುವರೆದು ಮಾತನಾಡಿದ ಉಮೇಶ್ ಯಾದವ್ 'ಇಂಗ್ಲೆಂಡ್ ಪಿಚ್‌ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುವುದು ಬಲು ಕಷ್ಟ, ಅದರಲ್ಲಿಯೂ ನ್ಯೂಜಿಲೆಂಡ್‌ನಂತಹ ಬಲಿಷ್ಠವಾದ ತಂಡದ ವಿರುದ್ಧ ಆಡುವುದು ಇನ್ನೂ ಕಷ್ಟ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಕಠಿಣವಾಗಿ ಪರಿಣಮಿಸಲಿದ್ದು ಖಂಡಿತವಾಗಿಯೂ ನಮಗೆ ದೊಡ್ಡ ಸವಾಲಾಗಲಿದೆ' ಎಂದು ತಿಳಿಸಿದರು

Story first published: Tuesday, May 18, 2021, 14:56 [IST]
Other articles published on May 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X