ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : ಯೋ ಯೋ ಟೆಸ್ಟ್ ನಲ್ಲಿ ಕೊಹ್ಲಿ ಹಿಂದಿಕ್ಕಿದ ಮಯಾಂಕ್

By Mahesh
 Uncapped Mayank Dagar goes past Virat Kohlis Yo-Yo Test score

ಬೆಂಗಳೂರು, ಜುಲೈ 17: ಕ್ರಿಕೆಟರ್ ಗಳ ಫಿಟ್ನೆಸ್ ಪರೀಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸುವ ಯೋ ಯೋ ಟೆಸ್ಟ್ ನಲ್ಲಿ ಯಾರು ಎಷ್ಟು ಅಂಕ ಗಳಿಸುತ್ತಾರೆ ಎಂಬ ಕುತೂಹಲ ಇನ್ನೂ ಮುಂದುವರೆದಿದೆ.

ಹಿಮಾಚಲ ಪ್ರದೇಶ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುವ ಯುವ ಆಟಗಾರ ಮಯಾಂಕ್ ಡಾಗರ್ ಅವರು ಕೂಡಾ ಯೋ ಯೋ ಟೆಸ್ಟ್ ತೆಗೆದುಕೊಂಡಿದ್ದರು.

 ಯೋ ಯೋ ಟೆಸ್ಟ್ ಎಂದರೇನು?, ಕ್ರಿಕೆಟ್ ನಲ್ಲಿ ಕಡ್ಡಾಯವೇಕೆ? ಯೋ ಯೋ ಟೆಸ್ಟ್ ಎಂದರೇನು?, ಕ್ರಿಕೆಟ್ ನಲ್ಲಿ ಕಡ್ಡಾಯವೇಕೆ?

ಯೋ ಯೋ ಟೆಸ್ಟ್​ನಲ್ಲಿ 19.3 ಅಂಕ ಗಳಿಸುವ ಮೂಲಕ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಷ್ ಪಾಂಡೆ ಗಳಿಸಿದ್ದ ಅಂಕವನ್ನು ಹಿಂದಿಕ್ಕಿ ಮಯಾಂಕ್ ಹೊಸ ದಾಖಲೆ ಬರೆದಿದ್ದಾರೆ.

ಕೊಹ್ಲಿ ಅವರು 19 ಅಂಕ ಸಂಪಾದಿಸಿ ಹೊಸ ದಾಖಲೆ ಬರೆದಿದ್ದರು. ನಂತರ ಈ ದಾಖಲೆಯನ್ನು ಕರ್ನಾಟಕದ ಮನೀಷ್ ಪಾಂಡೆ ಮುರಿದಿದ್ದರು. ಪಾಂಡೆ 19.2 ಅಂಕ ಗಳಿಸಿ ಹೊಸ ದಾಖಲೆ ಬರೆದಿದ್ದರು.

ಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿಯೋ ಯೋ ಟೆಸ್ಟ್ ಪಾಸಾದ ರೋಹಿತ್, ಮಾಧ್ಯಮಗಳ ಮೇಲೆ ಕಿಡಿ

ಈಗ 19 ವಯೋಮಿತಿ ಕ್ರಿಕೆಟ್ ತಂಡದಲ್ಲಿದ್ದ ಮಯಾಂಕ್​ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯೋ ಯೋ ಟೆಸ್ಟ್​ನಲ್ಲಿ 19.3 ಅಂಕ ಸಂಪಾದಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

 ಯೋ ಯೋ ಟೆಸ್ಟ್ ನಲ್ಲಿ ಭರ್ಜರಿ ಫಿಟ್ನೆಸ್ ತೋರಿಸಿದ ಸಂಜು ಸ್ಯಾಮ್ಸನ್! ಯೋ ಯೋ ಟೆಸ್ಟ್ ನಲ್ಲಿ ಭರ್ಜರಿ ಫಿಟ್ನೆಸ್ ತೋರಿಸಿದ ಸಂಜು ಸ್ಯಾಮ್ಸನ್!

ಟೀಮ್ ಇಂಡಿಯಾ ಕ್ರಿಕೆಟಿಗರ ಫಿಟ್ನೆಸ್ ಅಳೆಯಲು ಯೋ ಯೋ ಟೆಸ್ಟ್ ಮಾನದಂಡವಾಗಿ ಬಳಸಲಾಗುತ್ತಿದೆ. ಅಂಬಟಿ ರಾಯುಡು, ಸಂಜು ಸ್ಯಾಮ್ಸನ್ ಹಾಗೂ ಮೊಹಮದ್ ಶಮಿ ಈ ಟೆಸ್ಟ್ ನಲ್ಲಿ ಫೇಲಾಗಿ, ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತ ಹಾಗೂ ಭಾರತ ಎ ತಂಡದಿಂದ ಹೊರಬೀಳಬೇಕಾಗಿತ್ತು.

Story first published: Tuesday, July 17, 2018, 9:41 [IST]
Other articles published on Jul 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X