ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದೂಡಿಕೆ: ಆಸ್ಟ್ರೇಲಿಯಾ ಆಟಗಾರರು ಸಿಬ್ಬಂದಿಗಳಿಗೆ ಮತ್ತಷ್ಟು ಆತಂಕ

Uncertainty over Australia players, support staff return amid travel ban

ಐಪಿಎಲ್ 14ನೇ ಆವೃತ್ತಿಯ ಬಯೋಬಬಲ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಪರಿಣಾಮವಾಗಿ ಸಂಪೂರ್ಣ ಟೂರ್ನಿಯನ್ನೇ ರದ್ದುಗೊಳಿಸಲಾಗಿದೆ. ಬಿಸಿಸಿಐ ಈ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದು ಮುಂದಿನ ಸೂಚನೆಯವರೆಗೂ ಐಪಿಎಲ್ ನಡೆಸದಿರಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಆಸ್ಟ್ರೇಲಿಯಾ ಆಟಗಾರರ ಹಾಗೂ ಸಿಬ್ಬಂದಿಗಳ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಹಂತ ದೊಡ್ಡ ಮಟ್ಟದಲ್ಲಿ ಹರಡುತ್ತಿರುವಂತೆಯೇ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ತೆರಳುವ ಎಲ್ಲಾ ನಾಗರೀಕ ವಿಮಾನಗಳನ್ನು ನಿರ್ಬಂಧಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಮೂಲದ ಆಟಗಾರರು ಹಾಗೂ ಸಿಬ್ಬಂದಿಗಳು ತವರಿಗೆ ಮರಳುವ ರೀತಿಯ ಬಗ್ಗೆ ಚಿಂತಿತರಾಗಿದ್ದಾರೆ.

ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!ಕೊರೊನಾ ಕಂಟಕ, 2021ರ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ!

ಕಳೆದ ತಿಂಗಳು ಬಿಸಿಸಿಐ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಸ್ಪಷ್ಟನೆಯನ್ನು ನೀಡಿತ್ತು. ಐಪಿಎಲ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ತಮ್ಮ ತವರಿಗೆ ಸುರಕ್ಷಿತವಾಗಿ ಮರಳುವ ಸಂಪೂರ್ಣ ವ್ಯವಸ್ಥೆಗಳ ಬಗ್ಗೆ ಬಿಸಿಸಿಐ ವಹಿಸಿಕೊಳ್ಳುತ್ತದೆ ಎಂದಿತ್ತು. ಜೊತೆಗೆ ಎಲ್ಲಾ ಆಟಗಾರರು ಸುರಕ್ಷಿತವಾಗಿ ತವರಿಗೆ ಮರಳದ ಹೊರತು ನಮ್ಮ ಜವಾಬ್ಧಾರಿ ಸಂಪೂರ್ಣವಾಗಲ್ಲ ಎಂದಿತ್ತು.

ಆದರೆ ಆಸ್ಟ್ರೇಲಿಯಾ ಸಂರ್ಕಾರ ಸಂಪೂರ್ಣವಾಗಿ ನಾಗರೀಕ ವಿಮಾನಗಳನ್ನು ನಿರ್ಬಂಧಿಸುವುದರ ಜೊತೆಗೆ ಕೆಲ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ನಿಯಮಗಳನ್ನು ಕೂಡ ತಂದಿದೆ. ಹೀಗಾಗಿ ಇಂತಾ ಸಂದರ್ಭದಲ್ಲಿ ಆಸ್ಟ್ರೇಲಿಯಾ ಮೂಲದ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ತವರಿಗೆ ಮರಳಲು ಯಾವ ರೋತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ.

ಆಸ್ಟ್ರೇಲಿಯಾ ಪ್ರಯಾಣದ ನಿರ್ಬಂಧಗಳನ್ನು ಹಾಕುವ ಮುನ್ನವೇ ಮೂವರು ಕ್ರಿಕೆಟಿಗರಾದ ಆಡಂ ಜಂಪಾ, ಕೇನ್ ರಿಚರ್ಡ್ಸನ್ ಹಾಗೂ ಆಂಡ್ರೋ ಟೈ ತವರಿಗೆ ಮರಳಿದ್ದರು. ಆದರೆ ಇನ್ನೂ ಕೂಡ 14 ಆಟಗಾರರು ಹಾಗೂ ರಿಕಿ ಪಾಂಟಿಂಗ್, ಸೈಮನ್ ಕ್ಯಾಟಿಚ್, ಬ್ರೆಟ್ ಲೀ ಕೂಡ ಸದ್ಯ ಭಾರತದಲ್ಲಿ ಬಯೋಬಬಲ್‌ನಲ್ಲಿ ಉಳಿದುಕೊಂಡಿದ್ದಾರೆ.

Story first published: Tuesday, May 4, 2021, 15:59 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X