ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಇಂದು ಐರ್ಲೆಂಡ್ ವಿರುದ್ಧ ಸೆಣೆಸಲು ಭಾರತ ಸಜ್ಜು; ಬ್ಯಾಟಿಂಗ್‌ನಲ್ಲಿ ಬೇಕು ಭಾರತಕ್ಕೆ ಬಲ

Under 19 world cup 2022: India vs Ireland, preview and match details

ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡಕ್ಕೆ ಐರ್ಲೆಂಡ್ ಮುಖಾಮುಖಿಯಾಗಲಿದೆ. ಈ ಹಣಾಹಣಿಯಲ್ಲಿ ಭಾರತ ತಂಡ ತನ್ನ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 46.5 ಓವರ್‌ಗಳಲ್ಲಿ ಆಲೌಟ್ ಆಗಿತ್ತು. ಆದರೆ ಬೌಲಿಂಗ್ ವಿಭಾಗದ ಅದ್ಭುತ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಆ ಪಂದ್ಯವನ್ನು ಗೆದ್ದು ಬೀಗಿತ್ತು. ವಿಕ್ಕಿ ಒಸ್ತ್ವಾಲ್ ಹಾಗೂ ರಾಜ್ ಬಾವಾ ಮತ್ತೊಮ್ಮೆ ಬೌಲಿಂಗ್ ವಿಭಾಗದಲ್ಲಿ ಅಬ್ಬರಿಸುವ ಉತ್ಸಾಹದಲ್ಲಿದ್ದಾರೆ.

ನಾಲ್ಕು ಭಾರಿಯ ಅಂಡರ್ 19 ವಿಶ್ವಕಪ್‌ನ ಚಾಂಪಿಯನ್ ತಂಡವಾಗಿರುವ ಭಾರತ ಬಿ ಗ್ರೂಪ್‌ನ ಎರಡನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲು ಎಲ್ಲಾ ರೀತಿಯಲ್ಲಿಯೂ ಸಜ್ಜಾಗಿದೆ. ಅದಲ್ಲೂ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಯಶ್ ಧುಲ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಲು ಸಜ್ಜಾಗಿದೆ. ಅಲ್ಲದೆ ತಂಡದ ಇತರ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್ ನಿರೀಕ್ಷಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 45 ರನ್‌ಗಳ ಜಯದೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ಭಾರತೀಯ ತಂಡದ ಆಟಗಾರರು ಆತ್ಮವಿಶ್ವಾಸದಿಂದ ಎರಡನೇ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ಮತ್ತೊಂದು ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ನಾಯಕತ್ವ ಬಿಟ್ಟ ನಂತರ ಬ್ಯಾಟ್ಸ್‌ಮನ್‌ ಆಗಿ ಮೈದಾನದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ರೆಡಿನಾಯಕತ್ವ ಬಿಟ್ಟ ನಂತರ ಬ್ಯಾಟ್ಸ್‌ಮನ್‌ ಆಗಿ ಮೈದಾನದಲ್ಲಿ ಅಬ್ಬರಿಸಲು ವಿರಾಟ್ ಕೊಹ್ಲಿ ರೆಡಿ

ಇನ್ನು ಭಾರತ ಹಾಗೂ ಐರ್ಲೆಂಡ್ ಎರಡು ತಂಡಗಳು ಕೂಡ ಆರಂಭಿಕ ಪಂದ್ಯದಲ್ಲಿ ಗೆಲುವನೊಂದಿಗೆ ಎರಡನೇ ಪಂದ್ಯವನ್ನಾಡಲು ಸಜ್ಜಾಗುತ್ತಿದೆ. ಭಾರತ ತಂಡ ದಕ್ಷಿಣ ಆಪ್ರಿಕಾ ವಿರುದ್ಧ ಗೆಲುವು ಸಾಧಿಸಿದ್ದರೆ ಐರ್ಲೆಂಡ್ ತಂಡ ಉಗಾಂಡಾ ವಿರುದ್ಧ 39 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ದಕ್ಷಿಣ ಆಪ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ತಂಡದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರಮಾಣದ ಬ್ಯಾಟಿಂಗ್ ಬಂದಿರಲಿಲ್ಲ. ಆದರೆ ಬೌಲಿಂಗ್ ವಿಭಾಗದ ಪ್ರದರ್ಶನ ಅಮೋಘವಾಗಿತ್ತು. ಇದರ ಕಾರಣದಿಂದಾಗಿಯೇ ಭಾರತ ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಎಡಗೈ ಸ್ಪಿನ್ನರ್ ವಿಕ್ಕಿ ಓಸ್ತ್ವಾಲ್ ಖೇವಲ 28 ರನ್‌ಗಳಿಗೆ 5 ವಿಕೆಟ್ ಕಿತ್ತು ಅಬ್ಬರಿಸಿದರು. ಇನ್ನು ತಂಡದ ಬಲಗೈ ವೇಗಿ ರಾಜ್ ಬಾವಾ ಕೂಡ 47 ರನ್‌ಗಳಿಗೆ 4 ವಿಕೆಟ್ ಕಿತ್ತು ಸಂಭ್ರಮಿಸಿದರು. ಈ ಮೂಲಕ ಭಾರತ ಭರ್ಜರಿ ಗೆಲುವು ಸಾಧಿಸುತ್ತು. ಇದೀಗ ಮತ್ತೊಂದು ಪಂದ್ಯದಲ್ಲಿ ಆಡಲು ಭಾರತ ಅಂಡರ್ 19 ತಂಡ ಸಜ್ಜಾಗಿದೆ.

ಭಾರತ vs ದ. ಆಪ್ರಿಕಾ: 1st ODI: ಪಂದ್ಯದ ಆರಂಭ, ಪ್ರಿವ್ಯೂ, ನೇರಪ್ರಸಾರ, ಹವಾಮಾನ ವರದಿಭಾರತ vs ದ. ಆಪ್ರಿಕಾ: 1st ODI: ಪಂದ್ಯದ ಆರಂಭ, ಪ್ರಿವ್ಯೂ, ನೇರಪ್ರಸಾರ, ಹವಾಮಾನ ವರದಿ

ಭಾರತ ಅಂಡರ್ 19 ಸ್ಕ್ವಾಡ್: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪ ನಾಯಕ), ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್, ವಾಸು ವಾಟ್ಸ್, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್, ಗರ್ವ್ ಸಾಂಗ್ವಾನ್

Australia ಹಾಗು Englandನ ಈ ಆಟಗಾರರಿಗೆ ದೊಡ್ಡ ಸಂಕಷ್ಟ | Oneindia Kannada

ಐರ್ಲೆಂಡ್ ಅಂಡರ್ 19: ಟಿಮ್ ಟೆಕ್ಟರ್ (ನಾಯಕ), ಡೈರ್ಮುಯಿಡ್ ಬರ್ಕ್, ಜೋಶುವಾ ಕಾಕ್ಸ್, ಜ್ಯಾಕ್ ಡಿಕ್ಸನ್, ಲಿಯಾಮ್ ಡೊಹೆರ್ಟಿ, ಜೇಮೀ ಫೋರ್ಬ್ಸ್, ಡೇನಿಯಲ್ ಫೋರ್ಕಿನ್, ಮ್ಯಾಥ್ಯೂ ಹಂಫ್ರೀಸ್, ಫಿಲಿಪ್ಪಸ್ ಲೆ ರೌಕ್ಸ್, ಸ್ಕಾಟ್ ಮ್ಯಾಕ್‌ಬೆತ್, ನಾಥನ್ ಮೆಕ್‌ಗುಯಿರ್, ಮುಝಾಮಿಲ್ ಶೆರ್ಜಾದ್, ಡಬ್ಲ್ಯೂ ವಿಹೆಲನ್‌ಸೆಂಟ್

Story first published: Wednesday, January 19, 2022, 15:50 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X