ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳು

Unforgettable 5 Most Unselfish Knocks In Cricket History

ಬೆಂಗಳೂರು: ಕ್ರಿಕೆಟ್ ಒಂದು ತಂಡವಾಗಿ ಆಡುವ ಆಟ. ತಂಡ ಗೆಲ್ಲಬೇಕಾದರೆ ಇಲ್ಲಿ ಎಲ್ಲರ ಕೊಡುಗೆಯೂ ಬಹಳ ಮುಖ್ಯ. ಆದರೆ ಕೆಲವೊಮ್ಮೆ ವೈಯಕ್ತಿಕ ಪ್ರದರ್ಶನಕ್ಕಾಗೇ ಆಟಗಾರರು ಗಮನ ಸೆಳೆದಿದ್ದು ಅನೇಕ ಸಾರಿ ನಡೆದಿದೆ. ಇನ್ನೂ ಕೆಲವು ಆಟಗಾರರು ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆ ಸಮಯದಲ್ಲಿ ತಮ್ಮ ವೈಯಕ್ತಿಕ ದಾಖಲೆಗಳಿಗಾಗಿ ಆಡಿದ್ದನ್ನೂ ನಾವು ನೋಡಿದ್ದೇವೆ. ಹಾಗಂತ ತನ್ನ ವೈಯಕ್ತಿಕ ದಾಖಲೆ ಬದಿಗಿಟ್ಟು ತಂಡದ ಗೆಲುವಿಗಾಗಿ ನಿಸ್ವಾರ್ಥ ಆಟವಾಡಿದ ಅನೇಕ ಕ್ರಿಕೆಟಿಗರೂ ಇದ್ದಾರೆ.

ಮುರಳಿ ವಿಜಯ್ ಡಿನ್ನರ್ ಬಯಕೆಗೆ ಆಸಿಸ್ ಕ್ರಿಕೆಟ್‌ನ 'ಅಪ್ರತಿಮ ಸುಂದರಿ'ಯಿಂದ ಗ್ರೀನ್ ಸಿಗ್ನಲ್!ಮುರಳಿ ವಿಜಯ್ ಡಿನ್ನರ್ ಬಯಕೆಗೆ ಆಸಿಸ್ ಕ್ರಿಕೆಟ್‌ನ 'ಅಪ್ರತಿಮ ಸುಂದರಿ'ಯಿಂದ ಗ್ರೀನ್ ಸಿಗ್ನಲ್!

ಒಂದಿಷ್ಟು ಕ್ರಿಕೆಟಿಗರು ಆಡುವ ರೀತಿಯೇ ಹಾಗೆ. ಅವರು ಬ್ಯಾಟ್ ಬೀಸುತ್ತ ಮೈದಾನಕ್ಕಿಳಿದರೆ ಸಾಕು, ಈ ಬಾರಿ ನಮ್ಮ ತಂಡ ಗೆಲ್ಲುತ್ತದೆ ಅನ್ನೋ ಭರವಸೆ ಮೂಡುವಂತಿರುತ್ತದೆ. ತಮ್ಮ ತಂಡಕ್ಕಾಗಿ ನಿಸ್ವಾರ್ಥ ಆಟವಾಡಿ ಅಭಿಮಾನಿಗಳ ಮನಸ್ಸು ಗೆದ್ದ ಅನೇಕ ಕ್ರಿಕೆಟಿಗರಿದ್ದಾರೆ.

ತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾತೆಂಡೂಲ್ಕರ್, ಕೊಹ್ಲಿ ನಡುವಿನ ವ್ಯತ್ಯಾಸ ವಿವರಿಸಿದ ಸುರೇಶ್ ರೈನಾ

ಕ್ರಿಕೆಟ್ ಇತಿಹಾಸದಲ್ಲಿ ನಿಸ್ವಾರ್ಥ ಆಟಕ್ಕಾಗಿ ಗುರುತಿಸಿಕೊಂಡಿರುವ ಟಾಪ್ 5 ಆಟಗಾರರು, ಸಂದರ್ಭಗಳ ಮಾಹಿತಿ ಇಲ್ಲಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಆಟಗಾರ ಕೂಡ ಒಬ್ಬರಿದ್ದಾರೆ.

#1. ರಾಬಿನ್ ಉತ್ತಪ್ಪ

#1. ರಾಬಿನ್ ಉತ್ತಪ್ಪ

ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ನಿರ್ಮಿಸಿದ್ದ ಪಂದ್ಯವಿದು. ಭಾರತಕ್ಕೆ ಪ್ರವಾಸ ಬಂದಿದ್ದ ಶ್ರೀಲಂಕಾ ತಂಡ 2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಭಾರತ ವಿರುದ್ಧ 4ನೇ ಏಕದಿನ ಪಂದ್ಯವನ್ನಾಡಿತ್ತು. ಆವತ್ತು ಕನ್ನಡಿಗ ರಾಬಿನ್ ಉತ್ತಪ್ಪ ನಿಸ್ವಾರ್ಥ ಆಟಕ್ಕಾಗಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದರು. ಆ ದಿನ ರೋಹಿತ್ ಶರ್ಮಾ ಜೊತೆ ಆಚೆ ಬದಿ ಆಡುತ್ತಿದ್ದ ಉತ್ತಪ್ಪಗೆ ದೊಡ್ಡ ಹೊಡೆತಗಳನ್ನು ಬಾರಿಸೋಕೆ ತುಂಬಾ ಅವಕಾಶಗಳಿದ್ದವು. ಆದರೆ ಉತ್ತಪ್ಪ, ಪ್ರತೀಸಾರಿಯೂ ಸಿಂಗಲ್ ತೆಗೆದು ರೋಹಿತ್ ಶರ್ಮಾ ದಾಖಲೆ ನಿರ್ಮಿಸಲು ಮತ್ತು ಟೀಮ್ ಇಂಡಿಯಾ ಗೆಲ್ಲಲು ನೆರವಾಗಿದ್ದರು. ಆ ದಿನ ರೋಹಿತ್ 173 ಎಸೆತಗಳಲ್ಲಿ 264 ರನ್ ಬಾರಿಸಿದ್ದರೆ, ಉತ್ತಪ್ಪ 16 ಎಸೆಗಳಲ್ಲಿ ಅಜೇಯ 16 ರನ್ ಬಾರಿಸಿದ್ದರು. ಅಂದು 404 ಒಟ್ಟು ರನ್ ಸೇರಿಸಿದ್ದ ಭಾರತ 153 ರನ್‌ಗಳಿಂದ ಗೆದ್ದಿತ್ತು.

#2. ವೀರೇಂದ್ರ ಸೆಹ್ವಾಗ್

#2. ವೀರೇಂದ್ರ ಸೆಹ್ವಾಗ್

ಬಿರುಸಿನ ಬ್ಯಾಟಿಂಗ್‌ಗೆ, ನಿಸ್ವಾರ್ಥ ಆಟಕ್ಕೆ ಹೆಸರಾಗಿದ್ದವರು ವೀರೇಂದ್ರ ಸೆಹ್ವಾಗ್. 2008ರಲ್ಲಿ ಚೆನ್ನೈ ನಲ್ಲಿ ನಡೆದಿದ್ದ ಪಂದ್ಯಕ್ಕಾಗಿ ಇಂಗ್ಲೆಂಡ್ ಮತ್ತು ಭಾರತ ಮುಖಾಮುಖಿಯಾಗಿದ್ದವು. 4ನೇ ದಿನದ ಕಡೇಯ ಸೆಶನ್‌ನಲ್ಲಿ ಭಾರತದ ಗೆಲುವಿಗೆ 387 ರನ್ ಬೇಕಿತ್ತು. ಎಲ್ಲರೂ ಒಂದೋ ಇಂಗ್ಲೆಂಡ್ ಗೆಲ್ಲುತ್ತೆ ಅಥವಾ ಪಂದ್ಯ ಡ್ರಾ ಆಗುತ್ತೆ ಅಂದುಕೊಂಡಿದ್ದರು. ಆದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಸೆಹ್ವಾಗ್ ಏಕದಿನ ಅಥವಾ ಟಿ20ಯಲ್ಲಿ ಆಡುವಂತ ಬ್ಯಾಟಿಂಗ್ ಪ್ರದರ್ಶಿಸಿದ್ದರು. 68 ಎಸೆಗಳಲ್ಲಿ 83 ರನ್ ಕಲೆ ಹಾಕಿದ್ದರು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

#3. ಸೌರವ್ ಗಂಗೂಲಿ

#3. ಸೌರವ್ ಗಂಗೂಲಿ

2002ರಲ್ಲಿ ನ್ಯಾಟ್‌ವೆಸ್ಟ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 326 ರನ್ ಗುರಿ ನೀಡಿತ್ತು. ಆವತ್ತು ಭಾರತ ಚುರುಕು ಆರಂಭದ ಒತ್ತಡದಲ್ಲಿತ್ತು. ಉತ್ತಮ ರನ್‌ನೊಂದಿಗೆ ತಂಡಕ್ಕೆ ನೆರವಾಗೋದನ್ನು ವೀರೇಂದ್ರ ಸೆಹ್ವಾಗ್ ಅವರಿಂದ ನಿರೀಕ್ಷಿಸಲಾಗಿತ್ತು. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಸೆಹ್ವಾಗ್ 45 ರನ್ ಬಾರಿಸಿ ನಿರ್ಗಮಿಸಿದ್ದರು. ಆವತ್ತು ತಂಡದ ನೆರವಿಗೆ ನಿಂತಿದ್ದು ನಾಯಕ ಸೌರವ್ ಗಂಗೂಲಿ. ಗಂಗೂಲಿ 43 ಎಸೆತಗಳಿಗೆ 60 ರನ್ ಕೊಡುಗೆ ನೀಡಿದ್ದರು. ಇನ್ನು ಯುವರಾಜ್ ಸಿಂಗ್ 69, ಮೊಹಮ್ಮದ್ ಕೈಫ್ ಅಜೇಯ 87 ರನ್‌ನೊಂದಿಗೆ ಭಾರತ ಪಂದ್ಯವನ್ನು 2 ವಿಕೆಟ್‌ಗಳಿಂದ (3 ಎಸೆತಗಳು ಬಾಕಿ) ಗೆದ್ದಿತ್ತು.

#4 ವೀರೇಂದ್ರ ಸೆಹ್ವಾಗ್

#4 ವೀರೇಂದ್ರ ಸೆಹ್ವಾಗ್

2008ರಲ್ಲಿ ಗ್ಯಾಲೆಯಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ವೀರೇಂದ್ರ ಸೆಹ್ವಾಗ್ 201 ರನ್ ಬಾರಿಸಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಸೆಹ್ವಾಗ್ 199 ರನ್ ಬಾರಿಸಿದ್ದಾಗ ಆಚೆ ಬದಿ ಕಡೇ ಕ್ರಮಾಂಕದ ಬ್ಯಾಟ್ಸ್‌ಮನ್ ಇಶಾಂತ್ ಶರ್ಮಾ ಇದ್ದರು. ಶ್ರೀಲಂಕಾ ಸ್ಪಿನ್ನರ್ ಎಸೆತಕ್ಕೆ ಬ್ಯಾಟ್ ಬೀಸಿದ್ದ ಸೆಹ್ವಾಗ್‌ಗೆ ಸಿಂಗಲ್ ತೆಗೆದು ದ್ವಿಶತಕ ಪೂರೈಸಲು ಅವಕಾಶವಿತ್ತು. ಆದರೆ 11ನೇ ಕ್ರಮಾಂಕದ ಬ್ಯಾಟ್ಸ್‌ಮನ್ ನನ್ನು ಶ್ರೀಲಂಕಾ ಸ್ಪಿನ್ನರ್ ಎದುರು ತರಲು ಮನಸ್ಸಾಗದ ಸೆಹ್ವಾಗ್ ತಾನೇ ನಿಂತು ಭಾರತಕ್ಕೆ ರನ್ ಸೇರಿಸಿದ್ದರು. ಪಂದ್ಯದಲ್ಲಿ ಭಾರತ 170 ರನ್‌ನಿಂದ ಗೆದ್ದಿತ್ತು.

#5. ಮೈಕಲ್ ಕ್ಲಾರ್ಕ್

#5. ಮೈಕಲ್ ಕ್ಲಾರ್ಕ್

ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 2012ರ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿತ್ತು. 329 ರನ್ ಬಾರಿಸಿ ಆಡುತ್ತಿದ್ದ ಮೈಕಲ್ ಕ್ಲಾರ್ಕ್‌ಗೆ ಆವತ್ತು ಟೆಸ್ಟ್‌ ಇತಿಹಾಸದ ದಾಖಲೆಗಳನ್ನು ನಿರ್ಮಿಸಲು ಅವಕಾಶವಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ರನ್ ಬಾರಿಸಿದ್ದ ಮ್ಯಾಥ್ಯೂ ಹೇಡನ್ ದಾಖಲೆ ಮುರಿಬಹುದಿತ್ತು. ಅಷ್ಟೇ ಅಲ್ಲ, ಟೆಸ್ಟ್‌ನಲ್ಲಿ ಅತ್ಯಧಿಕ ರನ್ ವಿಶ್ವದಾಖಲೆಯಿರುವ ಲಾರಾ (400 ರನ್) ದಾಖಲೆಯನ್ನೂ ಮುರಿಯಬಹುದಿತ್ತು. ಆದರೆ ತಂಡದ ನಾಯಕನಾಗಿದ್ದ ಕ್ಲಾರ್ಕ್, ಪಂದ್ಯ ಗೆಲ್ಲಲು ತಂಡದ ಖಾತೆಯಲ್ಲಿ ಸಾಕಷ್ಟು ರನ್‌ ಇದೆ ಅಂದುಕೊಂಡವರು ಡಿಕ್ಲೇರ್ ಘೋಷಿಸಿದ್ದರು.

Story first published: Sunday, May 31, 2020, 15:33 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X