ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

World Cup 2023: ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಕೆಗೆ ಖಡಕ್ ತಿರುಗೇಟು ಕೊಟ್ಟ ಕ್ರೀಡಾ ಸಚಿವ

Union Sports Minister Anurag Thakur Reacted To PCB Chairman Ramiz Rajas Warning

ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ, ಭಾರತದಲ್ಲಿ ನಡೆಯುವ 2023ರ ವಿಶ್ವಕಪ್‌ಗೆ ಪಾಕಿಸ್ತಾನ ಹೋಗುವುದಿಲ್ಲ ಎಂಬ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರ ಎಚ್ಚರಿಕೆಗೆ ಕೇಂದ್ರ ಕ್ರೀಡಾ ಅನುರಾಗ್ ಠಾಕೂರ್ ಖಡಕ್ ತಿರುಗೇಟು ನೀಡಿದ್ದಾರೆ.

ರಮೀಜ್ ರಾಜಾ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾ ಸಚಿವರು, "ಸರಿಯಾದ ಸಮಯಕ್ಕಾಗಿ ಕಾಯಿರಿ, ಭಾರತ ಕ್ರೀಡಾ ಜಗತ್ತಿನಲ್ಲಿ ಪ್ರಮುಖ ಶಕ್ತಿಯಾಗಿದ್ದು, ಯಾವುದೇ ದೇಶವು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.

IND vs NZ 2nd ODI: ಆಡುವ 11ರ ಬಳಗದಿಂದ ಸಂಜು ಸ್ಯಾಮ್ಸನ್ ಮತ್ತೆ ಡ್ರಾಪ್; ಫ್ಯಾನ್ಸ್ ಗರಂ

ಇತ್ತೀಚೆಗೆ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಮಾತನಾಡಿ, "ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ಗಾಗಿ ಪಾಕಿಸ್ತಾನಕ್ಕೆ ಬಂದರೆ, ನಾವು ವಿಶ್ವಕಪ್‌ಗೆ ಹೋಗುತ್ತೇವೆ. ಭಾರತ ಬರದಿದ್ದರೆ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನವಿಲ್ಲದೆ ಆಡಲಿ, ಪಾಕಿಸ್ತಾನ ನಿಗದಿತ ವಿಶ್ವಕಪ್‌ನಲ್ಲಿ ಭಾಗವಹಿಸದಿರುವುದು ನಮ್ಮ ನಿಲುವು ಮೊಂಡಾಗಿದೆ," ಎಂದು ಎಚ್ಚರಿಕೆ ನೀಡಿದ್ದರು.

ಒಂದು ವರ್ಷದಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದೆ

ಒಂದು ವರ್ಷದಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದೆ

"ನಾವು ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಳ್ಳುತ್ತೇವೆ, ನಮ್ಮ ತಂಡವು ಉತ್ತಮ ಪ್ರದರ್ಶನವನ್ನು ತೋರಿಸುತ್ತಿದೆ. ನಾವು ವಿಶ್ವದ ಶ್ರೀಮಂತ ಕ್ರಿಕೆಟ್ ತಂಡವನ್ನು ಸೋಲಿಸಿದ್ದೇವೆ, 2021ರ ಟಿ20 ವಿಶ್ವಕಪ್‌ ಮತ್ತು ಏಷ್ಯಾಕಪ್‌ನಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದೇವೆ," ಎಂದು ತಿಳಿಸಿದ್ದರು.

"ನಾವು ಪಾಕಿಸ್ತಾನ ಕ್ರಿಕೆಟ್‌ನ ಆರ್ಥಿಕತೆಯನ್ನು ಸುಧಾರಿಸಬೇಕು, ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಅದು ಸಂಭವಿಸುತ್ತದೆ ಎಂದು ನಾನು ಯಾವಾಗಲೂ ಹೇಳುತ್ತೇನೆ. ಪಾಕಿಸ್ತಾನ ಕ್ರಿಕೆಟ್ ತಂಡವು ಒಂದು ವರ್ಷದಲ್ಲಿ ಭಾರತ ತಂಡವನ್ನು ಎರಡು ಬಾರಿ ಸೋಲಿಸಿದೆ," ಎಂದು ಉರ್ದು ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ರಮೀಜ್ ರಾಜಾ ಹೇಳಿದ್ದಾರೆ.

2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ

2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ

ಕಳೆದ ಅಕ್ಟೋಬರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರು ಪಾಕಿಸ್ತಾನದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ನಡೆಸಬಹುದು ಎಂದು ಸೂಚಿಸಿದ್ದರು.

ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ನಡೆಸುವ ಬಗ್ಗೆ ಜಯ್ ಶಾ ಹೇಳಿಕೆಯ ನಂತರ, ಪಿಸಿಬಿ ಕಟುವಾಗಿ ವಿರೋಧಿಸಿತ್ತು ಮತ್ತು ಇದು 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ತಿಳಿಸಿತ್ತು.

"ಜಯ್ ಶಾ ಅವರ ಹೇಳಿಕೆಗಳಿಂದ ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಗಳನ್ನು ವಿಭಜಿಸುವ ಸಾಮರ್ಥ್ಯವನ್ನು ಹೊಂದಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಮತ್ತು 2024-2031ರ ಚಕ್ರದಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಗಳಿಗೆ ಪಾಕಿಸ್ತಾನ ತಂಡದ ಭಾರತ ಪ್ರವಾಸದ ಮೇಲೆ ಪರಿಣಾಮ ಬೀರಬಹುದು," ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿತ್ತು.

ಎಲ್ಲಾ ತಂಡಗಳು ಭಾರತದಲ್ಲಿ ಆಡುತ್ತವೆ

ಎಲ್ಲಾ ತಂಡಗಳು ಭಾರತದಲ್ಲಿ ಆಡುತ್ತವೆ

ಪಿಸಿಬಿ ಹೇಳಿಕೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತವು ಎಲ್ಲಾ ತಂಡಗಳೊಂದಿಗೆ 2023ರ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತದೆ ಎಂದು ಹೇಳಿದ್ದರು.

"ಇದು ಬಿಸಿಸಿಐನ ಆಂತರಿಕ ವಿಷಯವಾಗಿದೆ ಮತ್ತು ಅದು ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತದೆ. ಈ ಮೊದಲು ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುವಾಗ ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ಈ ಮೊದಲು ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಮತ್ತು ಎಲ್ಲಾ ತಂಡಗಳು ಸಂತೋಷದಿಂದ ಭಾಗವಹಿಸಿವೆ. ನಾವು ಮುಂದಿನ ವರ್ಷ ಪಂದ್ಯಾವಳಿಯನ್ನು ಆಯೋಜಿಸುತ್ತೇವೆ ಮತ್ತು ಎಲ್ಲಾ ತಂಡಗಳು ಇದರಲ್ಲಿ ಆಡುತ್ತವೆ," ಎಂದು ಅನುರಾಗ್ ಠಾಕೂರ್ ಅಕ್ಟೋಬರ್‌ನಲ್ಲಿ ಹೇಳಿದ್ದರು.

ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ಬಿಸಿಸಿಐ ನಿರ್ಧಾರವಲ್ಲ

ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ಬಿಸಿಸಿಐ ನಿರ್ಧಾರವಲ್ಲ

ಏಷ್ಯಾ ಕಪ್ 2023 ಟೂರ್ನಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದು ಬಿಸಿಸಿಐ ನಿರ್ಧಾರವಲ್ಲ. ಅದು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದರು.

2023ರ ಏಕದಿನ ವಿಶ್ವಕಪ್ ಅನ್ನು ಸಂಪೂರ್ಣವಾಗಿ ಭಾರತವೇ ಮೊದಲ ಬಾರಿಗೆ ಆಯೋಜಿಸುತ್ತಿದೆ. ಇದು 1987ರ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನದೊಂದಿಗೆ, 1996ರ ವಿಶ್ವಕಪ್ ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದೊಂದಿಗೆ ಸಹ-ಆತಿಥ್ಯ ವಹಿಸಿತ್ತು.

ನಂತರ 2011ರಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸಹಯೋಗದೊಂದಿಗೆ ಸಹ-ಆತಿಥ್ಯ ವಹಿಸಿದಾಗ ಭಾರತವೇ ಚಾಂಪಿಯನ್ ಆಗಿತ್ತು. ಅಂದಿನಿಂದ ಈವರೆಗೆ ಭಾರತ ಯಾವುದೇ ಐಸಿಸಿ ವಿಶ್ವಕಪ್ ಗೆದ್ದಿಲ್ಲ.

Story first published: Sunday, November 27, 2022, 11:51 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X